ಕುತೂಹಲ ಕೆರಳಿಸಿದೆ ಸ್ಕೋಡಾ Enyaq iV ಎಲೆಕ್ಟ್ರಿಕ್ ಕಾರು !
ಸರಣಿ ಟೀಸರ್ ಬಿಡುಗಡೆ ಮಾಡಿ ಕುತೂಹಲ ಹೆಚ್ಚಿಸಿ ಸ್ಕೋಡಾ Enyaq iV ಇದೀಗ ನಾಳೆ ಬಹಿರಂಗವಾಗಲಿದೆ. ಇದು ಕ್ರಾಸೋವರ್ ಕಾರಾಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸ್ಕೋಡಾದ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರಿನತ್ತ ಎಲ್ಲರ ಚಿತ್ತ ನೆಟ್ಟಿದೆ.
ನವದೆಹಲಿ(ಆ.31): ಸ್ಕೋಡಾ Enyaq iV ಎಲೆಕ್ಟ್ರಿಕ್ ಕಾರು ಬಹಿರಂಗವಾಗುತ್ತಿದೆ. ಸೆಪ್ಟೆಂಬರ್ 1 ರಂದು ನೂತನ ಎಲೆಕ್ಟ್ರಿಕ್ ಕಾರು ವಿಶ್ವಾದ್ಯಂತ ಬಹಿರಂಗಗೊಳ್ಳಲಿದೆ. ಆಕರ್ಷಕ ವಿನ್ಯಾಸ ಹೊಂದಿರುವ ನೂತನ ಸ್ಕೋಡಾ Enyaq iV ಎಲೆಕ್ಟ್ರಿಕ್ ಕಾರು ಹಲವು ಕುತೂಹಲಗಳ ಕೇಂದ್ರ ಬಿಂದುವಾಗಿದೆ.
ಕರ್ನಾಟಕದಲ್ಲಿ PPS ಮೋಟಾರ್ಸ್ ಜೊತೆ ಸ್ಕೋಡಾ ಸಹಭಾಗಿತ್ವ; 50 ಹೊಸ ನಗರಕ್ಕೆ ಡೀಲರ್‌ಶಿಪ್ ವಿಸ್ತರಣೆ!
MEB ಪ್ಲಾಟ್‌ಪಾರ್ಮ್ ಅಡಿ ನೂತನ ಸ್ಕೋಡಾ Enyaq iV ಕಾರು ನಿರ್ಮಾಣವಾಗಿದೆ. ನೂತನ ಕಾರು 4648 mm ಉದ್ದ, 1,877 mm ಅಗಲ ಹಾಗೂ 1,618 mm ಎತ್ತರ ಹೊಂದಿದೆ. ಮಾರುಕಟ್ಟೆಯಲ್ಲಿರುವ ಸ್ಕೋಡಾ ಕೋಡಿಯಾಕ್ SUV ಕಾರಿಗಿಂತ ಕೊಂಚ ಚಿಕ್ಕದಾಗಿದೆ. ಆದರೆ ವಿನ್ಯಾಸ ಹಾಗೂ ದಕ್ಷತೆಯಲ್ಲಿ ಇತರ ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ; ಹತ್ತು ಹಲವು ವಿಶೇಷತೆ!
ಕಾರು ಬೂಟ್ ಸ್ಪೇಸ್ 585 ಲೀಟರ್ ಹೊಂದಿದೆ. ಕ್ಯಾಬಿನ್ ಹೆಚ್ಚು ಸ್ಥಳಾವಕಾಶದಿಂದ ಕೂಡಿದ್ದು, ಸ್ಪೋರ್ಟೀವ್ ಲುಕ್ ನೀಲಾಗಿದೆ. 13 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ನೀಡಲಾಗಿದೆ. ಎಲೆಕ್ಟ್ರಿಕ್ ABS, ಏರ್‌ಬ್ಯಾಗ್ ಸೇರಿದಂತೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ನೂತನ ಸ್ಕೋಡಾ Enyaq iV ಎಲೆಕ್ಟ್ರಿಕ್ ಕಾರಿನ ಚಾರ್ಜಿಂಗ್, ಮೈಲೇಜ್ ಸೇರಿದಂತೆ ಇತರ ಮಾಹಿತಿ ಅನಾವರಣದ ವೇಳೆ ಬಹಿರಂಗವಾಗಲಿದೆ.