ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ; ಹತ್ತು ಹಲವು ವಿಶೇಷತೆ!
ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಆರಂಭಗೊಂಡಿದೆ. ವಾಹನ ಡೀಲರ್‌ಗಳು ಮಾರಾಟ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ ಮಾಡಿದೆ. ಗರಿಷ್ಠ ಸುರಕ್ಷತೆ, ಹೆಚ್ಚುವರಿ ಫೀಚರ್ಸ್ ಹೊಂದಿದೆ. ನೂತನ skoda karoq ಕಾರು ಜೀಪ್ ಕಂಪಾಸ್, ಎಂಜಿ ಹೆಕ್ಟರ್ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆ ಪ್ರವೇಶಿಸಿದೆ.
ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಭಾರತದ ಮಾರುಕಟ್ಟೆ ಪ್ರವೇಶಿಸಿದ ಸ್ಕೋಡಾ ಕಾರೋಖ್ SUV ಕಾರು, ಬೆಲೆ 25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಫೆಬ್ರವರಿಯಲ್ಲಿ ನಡೆದ ಆಟೋ ಎಕ್ಸ್‌ಪೋ 2020ಯಲ್ಲಿ ಅನಾವರಣಗೊಂಡಿದ್ದ skoda karoq ಕೊರೋನಾ ವೈರಸ್ ಕಾರಣ ಬಿಡುಗಡೆ ವಿಳಂಬವಾಗಿತ್ತು
MQB-AO-IN ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿ ಪಡಿಸಲಾದ skoda karoq ಕಾರು ಆಧುನಿಕ ತಂತ್ರಜ್ಞಾನ ಹೊಂದಿದೆ
LED ಹೆಡ್‌ಲ್ಯಾಂಪ್ಸ್, ಬಟರ್‌ಫ್ಲೈ ಗ್ರಿಲ್, R17 ಡ್ಯುಯೆಲ್ ಟೋನ್ ಆಲೋಹ್ ವೀಲ್, ಸಿ ಶೇಪ್ LED ಟೈಲ್ ಲ್ಯಾಂಪ್ಸ್ ಹೊಂದಿದೆ
ಆಕರ್ಷಕ ಇಂಟೀರಿಯರ್ 8.0 ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್(ಆ್ಯಪಲ್ ಕಾರ್‌ಪ್ಲೇ, ಆಂಡ್ರಾಯ್ಡು ಸಪೋರ್ಟ್) ಹೊಂದಿದೆ
ಡಿಜಿಟಲ್ ಇನ್ಸ್‌ಟ್ರುಮೆಂಟಲ್ ಕ್ಲಸ್ಟರ್, ಲೈಟಿಂಗ್ ಆ್ಯಂಬಿಯೆಂಟ್, ಲೆದರ್ ಸೀಟ್, 2 ಝೋನ್ ಕ್ಲೈಮೇಟ್ ಕಂಟ್ರೋಲ್ ಫೀಚರ್ಸ್ ಹೊಂದಿದೆ
skoda karoq ಕಾರು ಪನೋರಮಿಕ್ ಸನ್‌ರೂಫ್, ಕೀ ಲೆಸ್ ಎಂಟ್ರಿ ಹಾಗೂ ಸ್ಟಾರ್ಟ್ ಸಿಸ್ಟಮ್ ಫೀಚರ್ಸ್ ಹೊಂದಿದೆ
1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 148 Bhp ಪವರ್ ಹಾಗೂ 250nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ