ಬೆಂಗಳೂರು(ಆ.11): ಬೆಂಗಳೂರಿನಲ್ಲಿ ಪಿಪಿಎಸ್ ಮೋಟಾರ್ಸ್‌ ಅನ್ನು ಉದ್ಘಾಟಿಸುವುದರೊಂದಿಗೆ ಸ್ಕೋಡಾ ಅಟೋ ಇಂಡಿಯಾ, ತನ್ನ ಅಸ್ತಿತ್ವವನ್ನು ಕರ್ನಾಟಕದಲ್ಲಿ ವೃದ್ಧಿಸುವ ಗುರಿ ಹೊಂದಿದೆ ಮತ್ತು ನಮ್ಮ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ತನ್ನ ಕ್ಯಾಂಪೇನ್ ಅನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವಿದೆ. ಹೊಸ ಅತ್ಯಾಧುನಿಕ ಡೀಲರ್‌ಶಿಪ್‌ ಘಟಕವು ಹೊಸ ಕಾರ್ಪೊರೇಟ್ ಐಡೆಂಟಿಟಿ ಮತ್ತು ವಿನ್ಯಾಸವನ್ನು ಸ್ಕೋಡಾ ಅಟೋ ಜಾಗತಿಕ ಮರುವಿನ್ಯಾಸ ಪ್ರಕ್ರಿಯೆಯ ಭಾಗವಾಗಿ ಹೊಂದಿದೆ. ಝೆಕ್ ವಾಹನ ತಯಾರಿಕೆ ಕಂಪನಿ ಸ್ಕೋಡಾ ಇಂಡಿಯಾ 2.0 ಪ್ರಾಜೆಕ್ಟ್ ಅಡಿಯಲ್ಲಿ, 2022 ರ ವೇಳೆಗೆ ಪ್ರಸ್ತುತಕ್ಕಿಂತ ದುಪ್ಪಟ್ಟು ಸೇಲ್ಸ್ ಮತ್ತು ಸರ್ವೀಸ್ ಟಚ್‌ ಪಾಯಿಂಟ್‌ ಹೊಂದಿರಲಿದೆ.

ಸ್ಕೋಡಾ ಕಾರೋಖ್ ಕ್ರಾಸ್ ಓವರ್ SUV ಕಾರು ಬಿಡುಗಡೆ; ಹತ್ತು ಹಲವು ವಿಶೇಷತೆ!

ಪಿಪಿಎಸ್ ಮೋಟಾರ್ಸ್‌ ಎಲ್ಲ ಭಾಗಗಳ ಜನರಿಗೂ ಅನುಕೂಲಕರವಾಗಿದೆ. ಸೇಲ್ಸ್‌ ಸೌಲಭ್ಯವು 4,500 ಚದರಡಿ ವ್ಯಾಪ್ತಿಯನ್ನು ಹೊಂದಿದೆ ಮತ್ತು ಕನಿಷ್ಠ ನಾಲ್ಕು ಕಾರುಗಳನ್ನು ಡಿಸ್‌ಪ್ಲೇ ಮಾಡಬಹುದಾಗಿದೆ. ಪ್ರತ್ಯೇಕ ಸರ್ವೀಸ್ ವರ್ಕ್‌ಶಾಪ್‌ 35, ಕ್ರಾಂತಿಕವಿ ಸರ್ವಜ್ಞ ರಸ್ತೆ, ಶ್ರೀರಾಮಪುರಂ, ಓಕಳಿಪುರಂನಲ್ಲಿದ್ದು, 18,000 ಚದರಡಿ ವಿಸ್ತೀರ್ಣದಲ್ಲಿದೆ ಮತ್ತು ಹತ್ತು ಮೆಕಾನಿಕಲ್ ಸ್ಟೇಷನ್‌ಗಳು ಮತ್ತು ಬಾಡಿ ಶಾಪ್‌ ಬೇಗಳನ್ನು ಹೊಂದಿದೆ. 75 ಜನ ತರಬೇತಿ ಹೊಂದಿರುವ ಸಿಬ್ಬಂದಿಯನ್ನು ಹೊಂದಿರುವ ಪಿಪಿಎಸ್ ಮೋಟಾರ್ಸ್‌ ವಾರ್ಷಿಕ 5,500 ಕ್ಕೂ ಹೆಚ್ಚು ಸ್ಕೋಡಾ ಅಟೋ ವಾಹನಗಳ ಸರ್ವೀಸ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಘಟಕದ ಉದ್ಘಾಟನೆಯ ಬಗ್ಗೆ ಮಾತನಾಡಿದ ಸ್ಕೋಡಾ ಅಟೋ ಇಂಡಿಯಾದ ಬ್ರಾಂಡ್ ಡೈರೆಕ್ಟರ್‌ ಝಾಕ್ ಹಾಲಿಸ್‌ "ಇಂಡಿಯಾ 2.0 ಉದ್ಘಾಟನೆಗೆ ಸಿದ್ಧವಾಗುವುದ್ಕಾಗಿ, ಸ್ಕೋಡಾ ಅಟೋ ಇಂಡಿಯಾದಲ್ಲಿ ನಾವು ನಿರಂತರವಾಗಿ ನಮ್ಮ ನೆಟ್‌ವರ್ಕ್ ಅನ್ನು ವಿಸ್ತರಿಸುತ್ತಿದ್ದೇವೆ. ಇದರಿಂದಾಗಿ, ನಮ್ಮ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಜನರು ಅನುಭವಿಸಲು ಅನುವಾಗುತ್ತದೆ ಹಾಗೂ ನಮ್ಮ ಗ್ರಾಹಕ ಕೇಂದ್ರಿತ ಸೇಲ್ಸ್‌ ನಂತರದ ಸೌಲಭ್ಯಗಳು ಗ್ರಾಹಕರಿಗೆ ಸುಲಭವಾಗಿ ಲಬ್ಯವಾಗುತ್ತದೆ. ದಕ್ಷಿಣ ಭಾರತದಲ್ಲಿ ಬೆಂಗಳೂರು ನಮಗೆ ಪ್ರಮುಖ ಮಾರ್ಕೆಟ್ ಆಗಿದೆ. ಪಿಪಿಎಸ್ ಮೋಟಾರ್ಸ್‌ ಜೊತೆಗೆ ನಮ್ಮ ಪಾಲುದಾರಿಕೆಯು ಬ್ರಾಂಡ್‌ಗೆ ಪ್ರಮುಖವಾಗಿರುತ್ತದೆ ಮತ್ತು ಕರ್ನಾಟಕದಲ್ಲಿ ನಮ್ಮ ಹೆಜ್ಜೆ ಗುರುತು ಇನ್ನಷ್ಟು ವಿಸ್ತರಿಸುತ್ತದೆ ಎಂದು ನಾವು ಭಾವಿಸಿದ್ದೇವೆ."

ಪಿಪಿಎಸ್ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್‌ನ ಡೀಲರ್ ಪ್ರಿನ್ಸಿಪಲ್ ಶ್ರೀ ರಾಜೀವ್ ಸಂಘ್ವಿ ಮಾತನಾಡಿ "ಸ್ಕೋಡಾ ಅಟೋ ಇಂಡಿಯಾ ಜೊತೆಗೆ ಪಾಲುದಾರಿಕೆ ಹೊಂದುವುದಕ್ಕೆ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಹೊಸ ಡೀಲರ್‌ಶಿಪ್ ಅನ್ನು ಪರಿಚಯಿಸಲು ನಾವು ಹೆಮ್ಮೆ ಹೊಂದಿದ್ದೇವೆ. ಆಧುನಿಕ ವಾಸ್ತುಶಿಲ್ಪ ಮತ್ತು ಸರಾಗವಾದ ವಹಿವಾಟು ಪ್ರಕ್ರಿಯೆಯು ಸ್ಕೋಡಾ ಅಟೋ ಉತ್ಪನ್ನಗಳ ಪ್ರಸ್ತುತಿಗೆ ಉತ್ತಮ ಹಿನ್ನೆಲೆಯನ್ನು ಒದಗಿಸುತ್ತದೆ. ಜಾಗತಿಕ ಉತ್ತಮ ಅಭ್ಯಾಸಗಳು ಮತ್ತು ಸ್ಕೋಡಾ ಅಟೋ ಇಂಡಿಯಾದ ಪ್ರಕ್ರಿಯೆಗಳು ಮತ್ತು ಈ ವಲಯದಲ್ಲಿನ ನಮ್ಮ ಗ್ರಾಹಕರಿಗೆ ಸೂಕ್ತವಾಗುವಂತೆ ಅಳವಡಿಸುವುದರಿಂದಾಗಿ ನಮ್ಮ ಗ್ರಾಹಕರಿಗೆ ವಿಶ್ವ ಮಟ್ಟದ ಸೇವೆ ಮತ್ತು ಗ್ರಾಹಕ ಸೇವೆ ಲಭ್ಯವಾಗುತ್ತದೆ"

ಪಿಪಿಎಸ್ ಮೋಟಾರ್ಸ್‌ 219/11,ರಮಣ ಮಹರ್ಷಿ ರೋಡ್, ಪ್ಯಾಲೇಸ್ ಆರ್ಚರ್ಡ್ಸ್‌, ಸದಾಶಿವನಗರ, ಬಳ್ಳಾರಿ ರಸ್ತೆಯಲ್ಲಿದೆ.