ಕ್ಯಾಲಿಫೋರ್ನಿಯಾ(ಜ.30): NBA ದಿಗ್ಗಜ ಕೊಬೆ ಬ್ರಯಾಂಟ್ ಹಾಗೂ ಆತನ ಪುತ್ರಿ 13 ವರ್ಷ ಗಿಯಾನ್ನ ಸೇರಿದಂತೆ ಐವರು ಪ್ರಯಾಣಿಕರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವುದು ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲಾಸ್ ಎಂಜಲೀಸ್ ಬಳಿ ಅಪಘಾತಕ್ಕೀಡಾದ ಸುದ್ದಿ ಕ್ರೀಡಾ ಲೋಕವನ್ನೇ ಬೆಚ್ಚಿ ಬೀಳಿಸಿತು. ಮಂಜು ಮುಸುಕಿದ ವಾತಾವರಣದಲ್ಲಿ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್ ಆಪಘಾತವಾಗಿದೆ ಅನ್ನೋದು ಪ್ರಾಥಮಿಕ ವರದಿ. 

ಇದನ್ನೂ ಓದಿ: ಬಾಸ್ಕೆಟ್‌ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ

ಕೊಬೆ ಬ್ರಯಾಂಟ್ ಹೆಲಿಕಾಪ್ಟರ್ ಅಪಘಾತ ನಿಜಕ್ಕೂ ನಂಬಲಾಗುತ್ತಿಲ್ಲ. ಕಾರಣ ಬಾಸ್ಕೆಟ್ ಬಾಲ್ ಪಟು ಕೊಬೆ ಬಳಿ ಇದ್ದ  ಸಿಕೊರ್ಸ್ಕಿ S-76 ಹೆಲಿಕಾಪ್ಟರ್, ವಿಶ್ವದ ಅತ್ಯಂತ ಸುರಕ್ಷಿತ ಹೆಲಿಕಾಪ್ಟರ್. ಲಾಕ್ಹೀಡ್ ಮಾರ್ಟಿನ್ ಕಂಪನಿಯ ಈ ಹೆಲಿಕಾಪ್ಟರ್ ಯಾವುದೇ ಪರಿಸ್ಥಿತಿಯಲ್ಲೂ ನಿಯಂತ್ರಣ ಕಳೆದುಕೊಳ್ಳದೇ ಸುರಕ್ಷಿತವಾಗಿ ನಿಗದಿತ ಸ್ಥಳ ತಲುಪಬಲ್ಲ ಸಾಮರ್ಥ್ಯ ಹೊಂದಿದೆ. 

ಲಾಕ್ಹೀಡ್ ಮಾರ್ಟಿನ್ ಕಂಪನಿ ಅಮೆರಿಕಾ ಏರೋ ಡಿಫೆನ್ಸ್‌ಗೆ  F-16 ಹಾಗೂ F-35 ಫೈಟರ್ ಜೆಟ್ ಕೂಡ ನೀಡುತ್ತಿದೆ. ಕೊಬೆ ಖರೀದಿಸಿದ ಹೆಲಿಕಾಪ್ಟರ್ ನಿರ್ಮಾಣವಾಗಿದ್ದು 1991ರಲ್ಲಿ. ದಶಕಗಳಿಂದ ಕೊಬೆ ಈ ಹೆಲಿಕಾಪ್ಟರ್ ಉಪಯೋಗಿಸುತ್ತಿದ್ದಾರೆ. ಇದುವರೆಗೂ ಯಾವ ಸಮಸ್ಯೆಯೂ ಎದುರಾಗಿಲ್ಲ. ಕೊಬೆ ಹೆಲಿಕಾಪ್ಟರ್ ಮಾತ್ರವಲ್ಲ, ಲಾಕ್ಹೀಡ್ ಮಾರ್ಟಿನ್ ಕಂಪನಿಯ S-76 ಹೆಲಿಕಾಪ್ಟರ್ ಅಘಾತದ ಪ್ರಮಾಣ ತೀರಾ ಕಡಿಮೆ.

ಇದನ್ನೂ ಓದಿ: ಅಪಘಾತದಲ್ಲಿ ಕೊಬೆ-ಪುತ್ರಿ ಸಾವು; ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟರ್ಸ್!

ಹೀಗಾಗಿಯೇ ಹಲವು ರಾಜಕಾರಣಿಗಳು, ಉದ್ಯಮಿಗಳು ಈ ಹೆಲಿಕಾಪ್ಟರ್ ಬಳಸುತ್ತಾರೆ. ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಬ್ರಿಟೀಷ್ ರಾಯಲ್ ಫ್ಯಾಮಿಲಿ ಇದೇ ಹೆಲಿಕಾಪ್ಟರ್ ಬಳಸುತ್ತಿದ್ದಾರೆ.  ಸೇಫೆಸ್ಟ್ ಹೆಲಿಕಾಪ್ಟರ್ ಅನ್ನೋ ಕೀರ್ತಿಗೆ ಪಾತ್ರರಾಗಿರುವ ಸಿಕೊರ್ಸ್ಕಿ S-76 ಹೆಲಿಕಾಪ್ಟರ್ ಇದೀಗ 3ನೇ ಅಪಘಾತದಿಂದ ಹಣೆ ಪಟ್ಟಿ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಲಾಕ್ಹೀಡ್ ಮಾರ್ಟಿನ್ ಕಂಪನಿಯ S-76B ಹೆಲಿಕಾಪ್ಟರ್ 2013ರಲ್ಲಿ ಕೆನಾಡದಲ್ಲಿ ಅಪಘಾತವಾಗಿತ್ತು. ಇದರಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಇನ್ನು  2017ರಲ್ಲಿ ಟರ್ಕಿಯಲ್ಲಿ ನಡೆದ ಅಪಘಾತದಲ್ಲಿ 7 ಮಂದಿ ಸಾವನ್ನಪ್ಪಿದ್ದರು. ಇದೀಗ ಕೊಬೆ ಬ್ರಿಯಾನ್ ಅವರ  S-76 ಹೆಲಿಕಾಪ್ಟರ್.  ಒಟ್ಟು 3 ಅಪಘಾತ ಹೊರತುಪಡಿಸಿದರೆ ಲಾಕ್ಹೀಡ್ ಮಾರ್ಟಿನ್ ಕಂಪನಿಯ ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾದ ಊದಾಹರಣೆಗಳಿಲ್ಲ. ಆದರೆ ಕೊಬೆ ಹಾಗೂ ಪುತ್ರಿ ಸಾವಿನಿಂದ ಸುರಕ್ಷಿತ ಹೆಲಿಕಾಪ್ಟರ್ ಮೇಲೆ ಅಭಿಮಾನಿಗಳು ಹಿಡಿ ಶಾಪ ಹಾಕುತ್ತಿದ್ದಾರೆ.

ಜನವರಿ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ