ಕ್ಯಾಲಿಫೋರ್ನಿಯಾ(ಜ.27): NBA ಬಾಸ್ಕೆಟ್ ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್(41) ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಅಸುನೀಗಿದ್ದಾರೆ. ಭಾನುವಾರು ಕ್ಯಾಲಿಫೋರ್ನಿಯಾದ ಕ್ಯಾಲಬಾಸಸ್ ಎಂಬಲ್ಲಿ ಈ ಅವಘಡ ಸಂಭವಿಸಿದೆ.

ಬ್ರೆಯಾಂಟ್ ತಮ್ಮದೇ ಆದ ಖಾಸಗಿ ಹೆಲಿಕ್ಯಾಪ್ಟರ್‌ನ್ನು ಹೊಂದಿದ್ದರು. ಈ ಅಪಘಾತದಲ್ಲಿ ಕೋಬ್ ಬ್ರೆಯಾಂಟ್ 13 ವರ್ಷದ ಮಗಳು ಗಿಯನ್ನ ಹಾಗೂ ಪತ್ನಿ ಸೇರಿದಂತೆ 9 ಮಂದಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಪಘಾತವಾದ ಸ್ಥಳದಿಂದ  ಕೋಬ್ ಬ್ರೆಯಾಂಟ್ ದೇಹವನ್ನು ಹೊರತೆಗೆಯಲು ಸಾಕಷ್ಟು ಸಮಯವಾಗಲಿದೆ ಎನ್ನಲಾಗುತ್ತಿದೆ. ಹೆಲಿಕ್ಯಾಪ್ಟರ್ ಅಪಘಾತವಾದ ಸ್ಥಳ ಸಾಕಷ್ಟು ದುರ್ಗಮವಾಗಿದ್ದು, ಸಾಧ್ಯವಾದಷ್ಟು ಬೇಗ ಅಪಘಾತ ನಡೆದ ಸ್ಥಳಕ್ಕೆ ತಲುಪುವ ಪ್ರಯತ್ನ ಮಾಡುತ್ತೇವೆ ಎಂದು ಲಾಸ್ ಏಂಜಲೀಸ್ ಕೌಂಟಿಯ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

2015ರಲ್ಲಿ ಬಾಸ್ಕೆಟ್‌ಬಾಲ್‌ಗೆ ವಿದಾಯ ಹೇಳುವಾಗ ಕೋಬ್ ಬ್ರೆಯಾಂಟ್ 'ಡಿಯರ್ ಬಾಸ್ಕೆಟ್‌ಬಾಲ್' ಎನ್ನುವ ಕವಿತೆಯನ್ನು ಬರೆದಿದ್ದರು. ಆ ಬಳಿಕ ಗ್ಲೆನ್ ಕೀನ್ ಹಾಗೂ ಜಾನ್ ವಿಲಿಯಮ್ಸ್ ಜತೆಗೂಡಿ ಆ ಹಾಡನ್ನು ಕಿರುಚಿತ್ರವನ್ನು ನಿರ್ಮಿಸಿದ್ದರು. ಇದು 2018ರಲ್ಲಿ ಬೆಸ್ಟ್ ಆನಿಮೇಟೆಡ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗಳಿಸಿತ್ತು. 

ಹೀಗಿದೆ ನೋಡಿ ಡಿಯರ್ ಬಾಸ್ಕೆಟ್‌ಬಾಲ್ ಶಾರ್ಟ್ ಫಿಲ್ಮ್

ಕೋಬ್ ಬ್ರೆಯಾಂಟ್ ನಿಧನಕ್ಕೆ ಹಲವು ಕ್ಷೇತ್ರದ ದಿಗ್ಗಜರು ಕಂಬನಿ ಮಿಡಿದಿದ್ದಾರೆ. 

ಕೋಬ್ ಬ್ರೆಯಾಂಟ್ ಬಗ್ಗೆ ಒಂದಷ್ಟು ಮಾಹಿತಿ

*  ಆಗಸ್ಟ್ 23, 1978ರಲ್ಲಿ ಜನಿಸಿದ್ದ ಕೋಬ್ ಬ್ರೆಯಾಂಟ್ ಅಮೆರಿಕದ ವೃತ್ತಿಪರ ಬಾಕ್ಸೆಟ್ ಬಾಲ್ ಆಟಗಾರನಾಗಿ ಆಗಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು

* ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್(NBA) ಟೂರ್ನಿಯಲ್ಲಿ 20 ವರ್ಷಗಳ ಕಾಲ  ಲಾಸ್ ಏಂಜಲೀಸ್ ತಂಡವನ್ನು ಪ್ರತಿನಿಧಿಸಿದ್ದರು.

* ಹೈಸ್ಕೂಲ್ ಓದುವಾಗಲೇ NBA ಟೂರ್ನಿಗೆ ನೇರ ಪ್ರವೇಶ ಪಡೆದಿದ್ದ ಕೋಬ್ ಬ್ರೆಯಾಂಟ್, 5 ಬಾರಿ NBA ಚಾಂಪಿಯನ್ಸ್ ಪಟ್ಟ ಅಲಂಕರಿಸಿದ್ದರು.

* 20 NBA ಆವೃತ್ತಿಗಳನ್ನಾಡಿದ ಕೋಬ್ ಬ್ರೆಯಾಂಟ್ ಸಾರ್ವಕಾಲಿಕ ಶ್ರೇಷ್ಠ ಬಾಸ್ಕೆಟ್‌ಬಾಲ್ ಆಟಗಾರ ಎನಿಸಿಕೊಂಡಿದ್ದರು.

ಜನವರಿ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ