ಕ್ಯಾಲಿಫೋರ್ನಿಯಾ(ಜ.27): ಬಾಸ್ಕೆಟ್ ಬಾಲ್ ದಿಗ್ಗಜ ಕೊಬೆ ಬ್ರೆಯಾಂಟ್ ಹಾಗೂ ಕುಟುಂಬ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ಕ್ರೀಡಾ ಅಭಿಮಾನಿಗಳಿಗೆ ಮಾತ್ರವಲ್ಲ, ಎಲ್ಲರನ್ನೂ ಬೆಚ್ಚಿ ಬೀಳಿಸಿತು. ಕೊಬೆ ಬ್ರಿಯಾಂಟ್, ಪುತ್ರಿ 13 ವರ್ಷದ ಗಿಯನ್ನ, ಪತ್ನಿ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. 

ಇದನ್ನೂ ಓದಿ: ಬಾಸ್ಕೆಟ್‌ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ.

NBA ಟೂರ್ನಿಯಲ್ಲಿ 20  ವರ್ಷಗಳ ಕಾಲ ಲಾಸ್ ಎಂಜಲೀಸ್ ತಂಡ ಪ್ರತಿನಿಧಿಸಿದ್ದ ಬ್ರೆಯಾಂಟ್ ಪುತ್ರಿಗೆ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪುತ್ರಿಯ ಪಂದ್ಯಕ್ಕಾಗಿ ತಮ್ಮದೇ ಖಾಸಗಿ ಹೆಲಿಕಾಪ್ಟರ್ ಮೂಲಕ ತೆರಳುತ್ತಿರುವ ವೇಳೆ ಅಪಘಾತವಾಗಿದೆ. ಬೆಟ್ಟಗುಡ್ಡಗಳ ಕ್ಯಾಲಬಾಸಸ್‌ನಲ್ಲಿ ಅಪಘಾತವಾಗಿ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ. ಕೊಬೆ ಹಾಗೂ ಕುಟುಂಬದ ಸಾವಿಗೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.