ಮುಂಬೈ(ಜೂ.06): ಸಹಾರ ಇಂಡಿಯಾ ಪರಿವಾರ್ ಇದೇ ಮೊದಲ ಭಾರಿಗೆ ಆಟೋಮೊಬೈಲ್ ಕ್ಷೇತ್ರಕ್ಕೆ ಎಂಟ್ರಿಕೊಡುತ್ತಿದೆ. ಸಹಾರ ಇವೋಲ್ಸ್ ಹೆಸರಿನಡಿ ಇದೀಗ ನೂತನ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಮಾಡುತ್ತಿದೆ. ಶೀಘ್ರದಲ್ಲೇ ಸಹಾರ ಇವೋಲ್ಸ್ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಎಲೆಕ್ಟ್ರಿಕ್ ಆಟೋ ರಿಕ್ಷಾ ಮಾರುಕಟ್ಟೆ ಪ್ರವೇಶಿಸಲಿದೆ.

 

 

ಇದನ್ನೂ ಓದಿ: ಕಡಿಮೆ ಬೆಲೆಯ ಬಜಾಜ್ ಪ್ಲಾಟಿನ 110 H-ಗೇರ್ ಬೈಕ್ ಬಿಡುಗಡೆ!

ಸಹಾರ ಇವೋಲ್ಸ್ ಎರಡು ವೇರಿಯೆಂಟ್ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಸಹಾರ ಇವೋಲ್ಸ್ ಕ್ಲಾಸಿಕ್ ಹಾಗೂ ಸಹಾರ ಇವೋಲ್ಸ್ JMT 1000 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ. ಇನ್ನು ಎಲೆಕ್ಟ್ರಿಕ್ ತ್ರಿಚಕ್ರ ವಾಹನ ವೀರ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ನೂತನ ಸಹಾರ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಸ್ಕೂಟರ್ ಗರಿಷ್ಠ ವೇಗ 55 KMPH.

 

 

ಇದನ್ನೂ ಓದಿ: ಬಜಾಜ್ ಪ್ಲಾಟಿನ ಬೈಕ್ ಮೇಲೆ 2.87 ಲಕ್ಷ ಕಿ.ಮೀ ರೈಡ್-ದಾಖಲೆ ಬರೆದ ರೈತ!

ಸಹಾರ ಎಲೆಕ್ಟ್ರಿಕ್ ಆಟೋರಿಕ್ಷಾ ಒಂದು ಬಾರಿ ಚಾರ್ಜ್ ಮಾಡಿದರೆ 145 ಕಿ.ಮೀ ಮೈಲೇಜ್ ನೀಡಲಿದೆ ಎಂದು ಸಹಾರ ಪರಿವಾರ್ ಹೇಳಿದೆ. ಸಹಾರ ಎಲೆಕ್ಟ್ರಿಕ್ ವಾಹನಗಳಲ್ಲಿ ಪ್ರತಿ ಕಿ.ಮೀ ಪ್ರಯಾಣಕ್ಕೆ ಕೇವಲ 20 ಪೈಸೆ ಖರ್ಚು ಮಾಡಿದರೆ ಸಾಕು. ಜೊತೆ ಪರಿಸರ ಸ್ನೇಹಿ ಎಂದು ಸಹಾರ ಹೇಳಿದೆ. ಆದರೆ ಸ್ಕೂಟರ್ ಹಾಗೂ ಆಟೋ ರಿಕ್ಷಾ ಬೆಲೆ ಹಾಗೂ ಇತರ ಮಾಹಿತಿ ಬಹಿರಂಗವಾಗಿಲ್ಲ.