ನವದೆಹಲಿ(ಜೂ.04): ಬಜಾಜ್ ಆಟೋ ಪ್ಲಾಟಿನ ಬೈಕ್‌ನ್ನು ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡಿದೆ. ಬಜಾಜ್ ಪ್ಲಾಟಿನ  110 H-ಗೇರ್ ನೂತನ ಬೈಕ್ ಹಲವು ವಿಶೇಷತೆ ಒಳಗೊಂಡಿದೆ. ಪ್ರಮುಖವಾಗಿ 5 ಸ್ಪೀಡ್ ಗೇರ್‌ಬಾಕ್ಸ್ ಹಾಗೂ ಗೇರ್ ಶಿಫ್ಟ್ ಗೈಡ್ ಜೊತೆಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನಲ್ , ಟ್ರಿಪ್ ಮೀಟರ್ ಹಾಗೂ ಫ್ಯುಯೆಲ್ ಇಂಡಿಕೇಟರ್ ಹೊಂದಿರುವ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ.

ಇದನ್ನೂ ಓದಿ: ಹೊಂಡಾ ಆಕ್ಟೀವಾ 5G ಲಿಮಿಟೆಡ್ ಎಡಿಶನ್ ಸ್ಕೂಟರ್- ಇಲ್ಲಿದೆ ಬೆಲೆ ವಿವರ!

ಬಜಾಜ್ ಪ್ಲಾಟಿನ  110 H-ಗೇರ್ ಬೈಕ್ ಬೆಲೆ 53,376 ರೂಪಾಯಿ(ಎಕ್ಸ್ ಶೋ ರೂಂ), ಡ್ರಂ ಬ್ರೇಕ್ ವೇರಿಯೆಂಟ್ ಬೈಕ್‌ಗೆ 55,373(ಎಕ್ಸ್ ಶೋ ರೂಂ) ಮೂರು ಬಣ್ಣಗಳಲ್ಲಿ ನೂತನ ಬೈಕ್ ಲಭ್ಯವಿದೆ. ಬಜಾಜ್ ಪ್ಲಾಟಿನ ಬೈಕ್ ಮೈಲೇಜ್ ಮೂಲಕವೇ ಹೆಚ್ಚು ಗಮನಸೆಳೆದಿದೆ.

ಇದನ್ನೂ ಓದಿ: ಗೆಲುವಿನ ಬೆನ್ನಲ್ಲೇ ಮೋದಿ ಹೊಸ ಯೋಜನೆ-2025 ರಿಂದ ಸಿಗಲ್ಲ ಪೆಟ್ರೋಲ್ ದ್ವಿಚಕ್ರವಾಹನ!

ಕಂಪನಿ ಪ್ರಕಾರ 82 kmpl ಮೈಲೇಜ್ ನೀಡುತ್ತಿದೆ. ನೂತನ ಬೈಕ್ ಕೂಡ ಇದೇ ಸರಾಸರಿ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಈ ಬೈಕ್‌ನಲ್ಲಿ ಆ್ಯಂಟಿ ಸ್ಕಿಡ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಟ್ಯೂಬ್‌ಲೆಸ್ ಟಯರ್ ಹಾಗೂ 3ಡಿ ಲೋಗೋ ಹೊಂದಿದೆ.