ನವದೆಹಲಿ(ಜ.03): ನಗರದ ಟ್ರಾಫಿಕ್‌ಗಳಲ್ಲಿ ಕಾರು ಕೆಟ್ಟು ನಿಂತರೆ ಅದಕ್ಕಿಂತ ಹಿಂಸೆ ಮತ್ತೊಂದಿಲ್ಲ. ರಸ್ತೆ ಚಲಿಸೋ ಎಲ್ಲರ ಬೈಗುಳ ಕೇಳಬೇಕು. ಯಾರೂ ಕೂಡ ಸಹಾಯಕ್ಕೆ ಬರುವವರಿಲ್ಲ. ಟ್ರಾಫಿಕ್ ಜಾಮ್, ಹಾರ್ನ್ ಕಿರಿಕಿರಿ, ಒಂದಾ ಎರಡಾ. ಹೀಗೆ ರಾಷ್ಟ್ರ ರಾಜಧಾನಿಯಲ್ಲಿ ಕೆಟ್ಟು ನಿಂತ ಹ್ಯುಂಡೈ ಎಕ್ಸೆಂಟ್ ಕಾರಿನ ಸಹಾಯಕ್ಕಾಗಿ ಬಂದಿದ್ದು ಹಳೇ ರಾಯಲ್ ಎನ್‌ಫೀಲ್ಡ್ ಬೈಕ್.

ಇದನ್ನೂ ಓದಿ: ಬೀಚ್‌ಗೆ ಹೋದ ಸಚಿವರ ಕಾರಿಗೆ ಬಂತು ಸಂಕಟ-ವಿಡಿಯೋ ವೈರಲ್

ಕ್ಯಾಬ್ ಚಾಲಕನ ಹ್ಯುಂಡೈ ಎಕ್ಸೆಂಟ್ ಕಾರು ದೆಹಲಿ ನಗರದ ಪ್ರಮುಖ ರಸ್ತೆಯಲ್ಲಿ ಕೆಟ್ಟು ನಿಂತಿತು.  ಯಾರ ಸಹಾಯವೂ ಸಿಗದ ಕಾರಣ ಕಾರಿನಿಂದ ಇಳಿದ ಒಬ್ಬನೇ ಕಾರು ತಳ್ಳುತ್ತಿದ್ದ. ಇದನ್ನ ಗಮನಿಸಿದ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರ, ಸಹಾಯ ನೀಡಿದರು.

ಕಾಲಿನಲ್ಲಿ ಹ್ಯುಂಡೈ ಎಕ್ಸೆಂಟ್ ಕಾರನ್ನ ತನ್ನ ಬೈಕ್ ಸಹಾಯದಿಂದ ತಳ್ಳುತ್ತಾ ಗ್ಯಾರೇಜ್ ಸೇರಿಸಿಬಿಟ್ಟರು. ವಿಶೇಷ ಅಂದರೆ ಇದು ಹಳೇ ರಾಯಲ್ ಎನ್‌ಫೀಲ್ಡ್ ಬೈಕ್. 346 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಈ ರಾಯಲ್ ಎನ್‌ಫೀಲ್ಡ್ ಬೈಕ್ , 18bhp ಪವರ್ ಹಾಗೂ 32nm ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ:2019ರಲ್ಲಿ ಮರೆಯಾಗಲಿರುವ ಭಾರತದ 6 ಕಾರುಗಳು!

ಬಲಿಷ್ಠ ಎಂಜಿನ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಾರುಗಳನ್ನ, ಸಣ್ಣ ಲೋಡ್ ವಾಹನಗಳನ್ನ ಎಳೆಯುವ ಶಕ್ತಿ ಹೊಂದಿದೆ.  ಇದೀಗ ಹ್ಯುಂಡೈ ಕಾರಿಗೆ ಸಹಾಯ ಮಾಡಿದ ಈ ವೀಡಿಯೋ ವೈರಲ್ ಆಗಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: