ನವದೆಹಲಿ(ಜ.01): ಹೊಸ ವರ್ಷ ಭಾರತೀಯ ಅಟೋಮೊಬೈಲ್ ಕ್ಷೇತ್ರ ಹಲವು ಬದಲಾವಣೆಗಳನ್ನ ಕಾಣಲಿದೆ. ಹೊಸ ನಿಯಮಗಳು ಜಾರಿಯಾಗುತ್ತಿದೆ. ಹೀಗಾಗಿ ಶತಗಳಿಂದ ಭಾರತದ ರಸ್ತೆಗಳಲ್ಲಿ ಓಡಾಡುತ್ತಿರುವ ಕೆಲ ಕಾರಗಳು ವಿದಾಯ ಹೇಳಲಿದೆ. ಇಂತಹ ಕಾರುಗಳ ವಿವರ ಇಲ್ಲಿದೆ.

ಮಾರುತಿ ಸುಜುಕಿ ಜಿಪ್ಸಿ
1980ರ ದಶಕದಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಿಪ್ಸಿ ಭಾರತೀಯ ಸೇನೆ, ಪೊಲೀಸ್ ಇಲಾಖೆ, ಬೆಟ್ಟ ಗುಡ್ಡಗಳ ಪ್ರದೇಶದ ಜನರು ಸೇರಿದಂತೆ ಹಲವರ ನೆಚ್ಚಿನ ವಾಹನವಾಗಿದೆ. ನೂತನ ನಿಯಮ ಬಿಎಸ್ ಎಮಿಶನ್ ನಿಯಮ, ಸುರಕ್ಷತಾ ನಿಯಮಗಳಿಂದ ಜಿಪ್ಸಿ ಈ ವರ್ಷ ಗುಡ್ ಬೈ ಹೇಳೋ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಮಾರುತಿ ಸುಜುಕಿ ಸಂಸ್ಥೆ ಜಿಪ್ಸಿಗಿಂತ ಆಧುನಿಕಿ ನೆಕ್ಸ್ಟ್ ಜೆನ್ ಜಿಮ್ಮಿ ಜೀಪ್ ಪರಚಿಯಿಸಿದೆ.

ಇದನ್ನೂ ಓದಿ: ವಿಶ್ವದ ಅತ್ಯಾಧುನಿಕ ಎಲೆಕ್ಟ್ರಿಕ್ ಬೈಕ್-ಬೆಲೆ ಬರೋಬ್ಬರಿ 82 ಲಕ್ಷ!

ಮಾರುತಿ ಓಮ್ಮಿ
1985ರಲ್ಲಿ ಬಿಡುಗಡೆಯಾದ ಮಾರುತಿ ಒಮ್ಮಿ ಕಳೆದ 3 ದಶಕಗಳಿಂದ ಹೆಚ್ಚಿನ ಬದಲಾವಣಗಳಿಲ್ಲದೆ ಬಿಡುಗಡೆಯಾಗಿದೆ. 2018ರಲ್ಲೂ ಪ್ರತಿ ತಿಂಗಳು ಸರಾಸರಿ 6000 ದಿಂದ 8000 ಒಮ್ಮಿ ಕಾರುಗಳು ಮಾರಾಟವಾಗಿದೆ.  BSVI ಎಮಿಶನ್ ನಿಯಮ ಹಾಗೂ ಕ್ರಾಶ್ ಟೆಸ್ಟ್(ಸುರಕ್ಷತ ಪರೀಕ್ಷೆ)ನಲ್ಲಿ ಕನಿಷ್ಠ ಸುರಕ್ಷತೆ ನೀಡದ ಕಾರುಗಳನ್ನ 2019ರಿಂದ ಮಾರಾಟ ಮಾಡುವಂತಿಲ್ಲ. ಹೀಗಾಗಿ ಒಮ್ಮಿ ನಿರ್ಮಾಣ ಸ್ಥಗಿತಗೊಳಿಸೋ ಸಾಧ್ಯತೆ ಇದೆ.

ಇದನ್ನೂ ಓದಿ: 2019ರಲ್ಲಿ ಬಿಡುಗಡೆಯಾಗಲಿರುವ ಕಡಿಮೆ ಬೆಲೆ ಕಾರುಗಳು!

ಮಹೀಂದ್ರ ನವೋ ಸ್ಪೋರ್ಟ್
ಕಳೆದ 6 ತಿಂಗಳಲ್ಲಿ ಮಹೀಂದ್ರ ನವೋ ಸ್ಪೋರ್ಟ್ ಕೇವಲ 1 ಕಾರು ಮಾತ್ರ ಮಾರಾಟವಾಗಿದೆ. ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೇಡಿಕೆಯ ಕಾರಾಗಿರುವ ನವೋ ಸ್ಪೋರ್ಟ್‌ಗೆ ಬದಲಾಗಿ ಮಹೀಂದ್ರ xuv 300 ಬಿಡುಗಡೆಯಾಗುತ್ತಿದೆ. ಹೀಗಾಗಿ ನೋವೋ ಸ್ಥಗಿತಗೊಳ್ಳೋ ಸಾಧ್ಯತೆ ಇದೆ.

ಹೊಂಡಾ ಬ್ರಿಯೋ
ದಿನದಿಂದ ದಿನಕ್ಕೆ ಹೊಂಡಾ ಬ್ರಿಯೋ ಮಾರಟದಲ್ಲಿ ಇಳಿಕೆಯಾಗುತ್ತಿದೆ. 2018ರ ನವೆಂಬರ್‌ನಲ್ಲಿ ಭಾರತದಲ್ಲಿ ಒಟ್ಟು 10 ಹೊಂಡಾ ಬ್ರಿಯೋ ಕಾರುಗಳು ಮಾರಾಟವಾಗಿದೆ. ಈಗಾಗಲೇ ಹಳೇ ಬ್ರಿಯೋ ಬದಲು ಹೊಸ ಅವತಾರದಲ್ಲಿ ಬ್ರಿಯೋ ಬಿಡುಗಡೆ ಮಾಡಲು ಹೊಂಡಾ ಮುಂದಾಗಿದೆ. ಹೀಗಾಗಿ ಹಳೆ ಬ್ರಿಯೋ 2019ರಲ್ಲಿ ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ: ಮಂಜು ಮುಸುಕಿದ ವಾತಾವರಣದಲ್ಲಿ ಸೇಫ್ ಡ್ರೈವಿಂಗ್- ಇಲ್ಲಿದೆ ಟಿಪ್ಸ್!

ಟಾಟಾ ನ್ಯಾನೋ
ಕಡಿಮೆ ಬೆಲೆಯ ಕಾರು ಎಂದೇ ಹೆಸರಾಗಿದ್ದ ಟಾಟಾ ನ್ಯಾನೋ ಕಾರು ಕೂಡ 2019ರಲ್ಲಿ ಸಂಪೂರ್ಣ ಸ್ಥಗಿತಗೊಳ್ಳೋ ಸಾಧ್ಯತೆ ಹೆಚ್ಚು. ಮಾರಾಟದಲ್ಲಿ ಇಳಿಮುಖವಾಗಿರುವ ಟಾಟಾ ನ್ಯಾನೋ ಕಾರು 2019ರಲ್ಲಿ ವಿದಾಯ ಹೇಳೋ ಸಾಧ್ಯತೆ ಹೆಚ್ಚಿದೆ.

ಹ್ಯುಂಡೈ ಇಯಾನ್
ಹ್ಯುಂಡೈ ಸ್ಯಾಂಟ್ರೋ ಕಾರು ಬಿಡುಗಡೆಯಾಗುತ್ತಿದ್ದಂತೆ, ಹ್ಯುಂಡೈ ಇಯಾನ್ ಕಾರು ಮಾರಾಟ ಗಣನೀಯವಾಗಿ ಇಳಿದಿದೆ. ನೂತನ BSVI ಎಮಿಶನ್ ಹಾಗು ಸುರಕ್ಷತಾ ನಿಯಮ ಪಾಲಿಸಿದರೆ ಕಾರಿನ ಬೆಲೆ ದುಬಾರಿಯಾಗಲಿದೆ. ಹೀಗಾಗಿ ಇಯಾನ್ ವಿದಾಯ ಹೇಳೋ ಸಾಧ್ಯತೆ ಇದೆ.