ವಿಶಾಖಪಟ್ಟಣಂ(ಜ.03): ಸಮುದ್ರ ತೀರದಲ್ಲಿ ಕಾರು, ಬೈಕ್ ಚಲಾಯಿಸುವುದನ್ನ ಹೆಚ್ಚಿನವರು ಇಷ್ಟಪಡುತ್ತಾರೆ. ಆದರೆ ಬೀಚ್ ಬದಿಯಲ್ಲಿನ ಮರಳಿನಲ್ಲಿ ಕಾರಿನ ಚಕ್ರ ಹೂತು ಹೋಗುವ ಸಾಧ್ಯತೆ ಹೆಚ್ಚು. ಹೀಗಾಗಿ ಡ್ರೈವಿಂಗ್‌ನಲ್ಲಿ ಎಚ್ಚರ ವಹಿಸಬೇಕಾದ ಸ್ಥಳಗಳಲ್ಲಿ ಸಮುದ್ರ ತೀರ ಪ್ರಮುಖ ತಾಣ. ಇದೀಗ ಇದೇ ಸಮುದ್ರ ತೀರಕ್ಕೆ ಹೋದ ಮಾನವ ಸಂಪನ್ಮೂಲ ಸಚಿವರ ಕಾರು ಮರಳಿನಲ್ಲಿ ಹೂತು ಹೋದ ಘಟನೆ ನಡೆದಿದೆ.

ಇದನ್ನೂ ಓದಿ: 2019ರಲ್ಲಿ 8 ಹೊಸ ನಿಯಮ-ವಾಹನ ಮಾಲೀಕರು, ಸವಾರರೇ ಇರಲಿ ಗಮನ!

ವಿಶಾಖಪಟ್ಟಣಂನ ಭೀಮಿಲಿ ಬೀಚ್ ಬಳಿಗೆ ತೆರಳಿದ ಆಂಧ್ರಪ್ರದೇಶ ಸರ್ಕಾರದ ಸಚಿವ ಗಂಟ ಶ್ರೀನಿವಾಸ್ ರಾವ್ ಫಾರ್ಚುನರ್ ಕಾರು ಮರಳಿನಲ್ಲಿ ಹೂತು ಹೋಗಿ ಹರಸಾಹಸ ಪಟ್ಟಿದ್ದಾರೆ. ಸೈಕ್ಲೋನ್ ಪರಿಶೀಲಿಸಲು ಭೀಮಿಲಿ ಬೀಚ್‌ಗೆ ತೆರಳಿದ ವೇಳೇ ಈ ಘಟನೆ ನಡೆದಿದೆ.

ಸೈಕ್ಲೋನ್‌ನಿಂದ ಹಾನಿಗೊಳದಾದ ಮೀನುಗಾರರ ಕುಟುಂಬಕ್ಕೆ ಪರಿಹಾರ ಸರಿಯಾಗಿ ವಿತರಣೆಯಾಗಿದೆಯಾ? ಮೀನುಗಾರರ ಸದ್ಯದ ಪರಿಸ್ಥಿತಿ ಕುರಿತು ಪರಿಶೀಲಿಸಲು ಗಂಟ ಶ್ರೀನೀವಾಸ್ ರಾವ್ ತಮ್ಮ ಫಾರ್ಚುನರ್ ಕಾರಿನಲ್ಲಿ ತೆರಳಿದ್ದರು. ಈ ವೇಳೆ ಸಮುದ್ರ ತೀರ ಮರಳಿನಲ್ಲಿ ಕಾರು ಹೂತು ಹೋಗಿದೆ. 

ಇದನ್ನೂ ಓದಿ: ಒಂದೇ ತಿಂಗಳಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಜಾವಾ ನೀಡಿತು 13 ಹೊಡೆತ!

ಭಾರತದ ಬಹುತೇಕ ಬೀಚ್‌ಗಳಲ್ಲಿ ಕಾರು ಚಲಾಯಿಸುವುದು ನಿಷೇಧಿಸಲಾಗಿದೆ. ಕೇರಳದ ಮುಝಪ್ಪಿಲಂಗಡ ಬೀಚ್‌ ಬದಿಯಲ್ಲಿ ಕಾರು ಚಲಾಯಿಸಲು ಅವಕಾಶವಿದೆ. ಅಪ್ಪಿತಪ್ಪಿ ಬೀಚ್  ಬದಿಯಲ್ಲಿ ನಿಮ್ಮ ವಾಹನ ಸ್ಟಕ್ ಆದರೆ ಇಲ್ಲಿದೆ ಕೆಲ ಟಿಪ್ಸ್.

  • ಟಯರಿನ ಗಾಳಿ ಸ್ವಲ್ಪ ಕಡಿಮೆ ಮಾಡಿ. ಇದರಿಂದ ಕಾರಿನ ಚಕ್ರಕ್ಕೆ ಮರಳಿನಲ್ಲಿ ಹೆಚ್ಚು ಗ್ರಿಪ್ ಸಿಗುವ ಸಾಧ್ಯತೆ ಇದೆ
  • ಇತರ ವಾಹನದ ಸಹಾಯದಿಂದ ಮರಳಿನಲ್ಲಿ ಸಿಕ್ಕಿ ಹಾಕಿಕೊಂಡ  ವಾಹನ ಎಳೆಯಿರಿ
  • ಹೂತು ಹೋದ ಚಕ್ರಕ್ಕೆ ಫ್ಲೋರ್ ಮ್ಯಾಟ್, ಕಲ್ಲು ಮರದ ತುಂಡುಗಳನ್ನ ಬಳಸಿ