ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಹೆಚ್ಚಳ-ಇಲ್ಲಿದೆ ನೂತನ ದರ!
ರಾಯಲ್ ಎನ್‌ಫೀಲ್ಡ್ ಬೈಕ್ ದುಬಾರಿಯಾಗಿದೆ. ನೂತನ ಇಂಟರ್‌ಸೆಪ್ಟರ್ ಹಾಗೂ ಕಾಂಟಿನೆಂಟಲ್ ಬೈಕ್ ಹೊರತು ಪಡಿಸಿದರೆ ಉಳಿದ ಬೈಕ್‌ಗಳ ಬೆಲೆ ಹೆಚ್ಚಳವಾಗಿದೆ. ಪರಿಷ್ಕರಿಸಿದ ದರ ಪಟ್ಟಿ ಇಲ್ಲಿದೆ.
ಚೆನ್ನೈ(ಫೆ.07): ಜಾವಾ ಮೋಟಾರ್ ಬೈಕ್‌ನಿಂದ ಪ್ರಬಲ ಪೈಪೋಟಿ ಎದುರಿಸುತ್ತಿಪರುವ ರಾಯಲ್ ಎನ್‌ಫೀಲ್ಡ್ ಬೈಕ್ ಇದೀಗ ತನ್ನ ಕೆಲ ಬೈಕ್‌ಗಳ ದರ ಪರಿಷ್ಕರಿಸಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ 350, 500, ಕ್ಲಾಸಿಕ್ 350, 500 ಹಾಗೂ ಹಿಮಾಲಯನ್ ಬೈಕ್ ಬೆಲೆ ಹೆಚ್ಚಳ ಮಾಡಿದೆ. ಆದರೆ ನೂತನ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಸಿಯಾಝ್ ಡೀಸೆಲ್ ಕಾರು!
ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆಯನ್ನ 1500 ರೂಪಾಯಿ ಹೆಚ್ಚಲಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ನೂತನ ಬೆಲೆ 1.34 ಲಕ್ಷ ರೂಪಾಯಿ, ಕ್ಲಾಸಿಕ್ 350 ABS ಬೆಲೆ 1.53 ಲಕ್ಷ ರೂಪಾಯಿ. ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ABS ಸಿಗ್ನಲ್ಸ್ ಎಡಿಶನ್ ಬೈಕ್ ಕೂಡ 1500 ರೂಪಾಯಿ ಹೆಚ್ಚಿಸಲಾಗಿದೆ. ಹೀಗಾಗಿ ಸದ್ಯ 1.63 ಲಕ್ಷ ರೂಪಾಯಿ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ABS 1.80 ಲಕ್ಷ ರೂಪಾಯಿ.
ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ..! ನಂಬರ್ ಪ್ಲೇಟ್ ಮೇಲೆ ಏನೂ ಬರೆಯಂಗಿಲ್ಲ!
ಇಂಟರ್‌ಸೆಪ್ಟರ್ 650 ಬೈಕ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂಟರ್‌ಸೆಪ್ಟರ್ 650 ಬೈಕ್ ಬೆಲೆ 2.49 ಲಕ್ಷ ರೂಪಾಯಿ ಹಾಗೂ ಕಾಂಟಿನೆಂಟಲ್ ಜಿಟಿ 650 ಬೆಲೆ 2.64 ಲಕ್ಷ ರೂಪಾಯಿ (ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ). ರಾಯಲ್ ಎನ್‌ಫೀಲ್ಡ್ ಶೀಘ್ರದಲ್ಲೇ ಅಧೀಕೃತ ಘೋಷಣೆ ಮಾಡಲಿದೆ. ಆದರೆ ಡೀಲರ್‌ಗಳು ಈಗಾಗಲೇ ನೂತನ ಬೆಲೆ ಅನ್ವಯಿಸಿದ್ದಾರೆ. ಉತ್ಪಾದನಾ ವೆಚ್ಚ ಹೆಚ್ಚಳವಾದ ಕಾರಣ ಬೆಲೆ ಹೆಚ್ಚಳವಾಗಿದೆ.