ಮುಂಬೈ(ಫೆ.06): ಮಾರುತಿ ಸುಜುಕಿ ಇದೀಗ ನೂತನ ಸಿಯಾಝ್ ಡೀಸೆಲ್ ಕಾರಿನ ಬುಕಿಂಗ್ ಆರಂಭಿಸಿದೆ. ಹೊಂಡಾ ಸಿಟಿ ಹಾಗೂ ಹ್ಯುಂಡೈ ವರ್ನಾ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಸಿಯಾಝ್ ಹೆಚ್ಚುವರಿ ಫೀಚರ್ಸ್‍‌ನೊಂದಿಗೆ ಬಿಡುಗಡೆಯಾಗುತ್ತಿದೆ. ಹೀಗಾಗಿ ಬಿಡುಗಡೆಗೂ ಮುನ್ನ ಮಾರುತಿ ಸುಜುಕಿ ಅಧೀಕೃತ ಡೀಲರ್‌ಶಿಪ್ ನೆಕ್ಸಾ ಬುಕಿಂಗ್ ಆರಂಭಿಸಿದೆ.

ಇದನ್ನೂ ಓದಿ: ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ..! ನಂಬರ್ ಪ್ಲೇಟ್ ಮೇಲೆ ಏನೂ ಬರೆಯಂಗಿಲ್ಲ!

ಕೇವಲ 5,000 ರೂಪಾಯಿ ನೀಡಿ ನೂತನ ಸಿಯಾಝ್ ಕಾರು ಬುಕ್ ಮಾಡಬಹುದು. 1.5 ಲೀಟರ್ ಡೀಸೆಲ್ ಎಂಜಿನ್,  1,498cc, ಇನ್ ಲೈನ್ 4-ಸಿಲಿಂಡರ್  94 Bhp ಪವರ್ ಹಾಗೂ 225 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಜೊತೆಗೆ ಹೊಸ ಎಮಿಶನ್ ನಿಯಮದ ಪ್ರಕಾರ BS-VI ಎಮಿಶನ್ ತಂತ್ರಜ್ಞಾನ ಹೊಂದಿದೆ.

ಇದನ್ನೂ ಓದಿ: ಬ್ರೈಟ್ ಹೆಡ್‌ಲೈಟ್ಸ್ ಅಳವಡಿಸಿದರೆ ವಾಹನದ RC, ಲೈಸೆನ್ಸ್ ರದ್ದು!

ಮೈಲೇಜ್ ವಿಚಾರದಲ್ಲೂ ಇತರ ಎಲ್ಲಾ ಕಾರುಗಳಿಗಿಂತ ಮಾರುತಿ ಸಿಯಾಝ್ ಮುಂಚೂಣಿಯಲ್ಲಿದೆ. ಸಿಯಾಜ್ ಡೀಸೆಲ್ ಕಾರು 28.09 km/l ನೀಡಲಿದೆ. ಹಳೇ ಸಿಯಾಝ್ ಕಾರಿಗಿಂತ ನೂತನ ಕಾರಿಗೆ 20,000 ರೂಪಾಯಿ ಹೆಚ್ಚಾಗಲಿದೆ. ಹೀಗಾಗಿ  ನೂತನ ಡೀಸೆಲ್ ಸಿಯಾಝ್ ಕಾರು 9.40 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.