ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ..! ನಂಬರ್ ಪ್ಲೇಟ್ ಮೇಲೆ ಏನೂ ಬರೆಯಂಗಿಲ್ಲ!
ಕಾರು ಅಥವಾ ಯಾವುದೇ ಖಾಸಗಿ ವಾಹನದ ನಂಬರ್ ಪ್ಲೇಟ್ ಮೇಲೆ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಸೇರಿದಂತೆ ಯಾವುದೇ ಸ್ಥಾನ ಮಾನಗಳನ್ನ ನಮೂದಿಸುವಂತಿಲ್ಲ. ಏನಿದು ಹೊಸ ನಿಯಮ. ಇಲ್ಲಿದೆ ಸಂಪೂರ್ಣ ಮಾಹಿತಿ.
ಇಂಧೋರ್(ಫೆ.06): ಅಧ್ಯಕ್ಷರು, ಸದಸ್ಯರು, ಸೇರಿದಂತೆ ಅನೇಕ ಸ್ಥಾನ ಮಾನಗಳು ಕೆಲ ಭಾರತೀಯರ ಕಾರಿನ ನಂಬರ್ ಪ್ಲೇಟ್‌ನಲ್ಲಿ ನಮೂದಿಸಿರುತ್ತಾರೆ. ಆದರೆ ಇನ್ಮುಂದೆ ಈ ರೀತಿ ಕಾರು ಅಥವ ವಾಹನದ ನಂಬರ್ ಪ್ಲೇಟ್ ಮೇಲೆ ವಾಹನದ ರಿಜಿಸ್ಟ್ರೇಶೆನ್ ನಂಬರ್ ಹೊರತು ಪಡಿಸಿ ಇನ್ಯಾವುದನ್ನೂ ಬರೆಯುವಂತಿಲ್ಲ. ನಿಯಮ ಉಲ್ಲಂಘಿಸಿದರೆ ದಂಡ ಹಾಗೂ ಅಲ್ಲೇ ಪೊಲೀಸರು ನಂಬರ್ ಪ್ಲೇಟ್ ಕಿತ್ತು ಹಾಕಲಿದ್ದಾರೆ.
ಇದನ್ನೂ ಓದಿ: ರಾಜಧಾನಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ಪ್ಲೇಟ್-ಕಲರ್ ಕೋಡ್ ಕಡ್ಡಾಯ!
2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗ ಹೊಸ ನಿಯಮ ಜಾರಿಗೆ ತಂದಿದೆ. ಇದೀಗ ಮೊದಲ ಬಾರಿಗೆ ಮಧ್ಯಪ್ರದೇಶ RTO (ರೀಜನಲ್ ಟ್ರಾನ್ಸ್‌ಪೋರ್ಟ್ ಆಫೀಸರ್) ಕಚೇರಿಗೆ ಈ ನಿಯಮವನ್ನ ಪಾಲಿಸಲು ಸೂಚಿಸಿದೆ.
ಇದನ್ನೂ ಓದಿ: ಅತೀ ಕಡಿಮೆ ಬೆಲೆಗೆ ನೂತನ ರೆನಾಲ್ಟ್ ಕ್ವಿಡ್ ABS ಕಾರು ಬಿಡುಗಡೆ!
ಹೀಗಾಗಿ ಇಂಧೋರ್ ನಗರದ ಸುತ್ತ ಮುತ್ತ ಇದೀಗ ಪೊಲೀಸರು ಬ್ಯಾರಿಕೇಡ್ ಹಾಕಿ ಎಲ್ಲಾ ವಾಹನಗಳನ್ನ ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ ಹಲವು ವಾಹನಗಳಿಗೆ RTO ದಂಡ ಹಾಕಿದ್ದಾರೆ. ಇಷ್ಟೇ ಅಲ್ಲ ನಂಬರ್ ಪ್ಲೇಟ್ ಕಿತ್ತು ಹಾಕಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕರೊಬ್ಬರ ಮಿಟ್ಸುಬಿಶ್ ಪಜೇರೋ ಕಾರಿನ ನಂಬರ್ ಪ್ಲೇಟ್ ಮೇಲೆ ಕಾಂಗ್ರೆಸ್ ನಾಯಕರ ಡಿಸಿಗ್ನೇಶನ್ ಹಾಕಲಾಗಿತ್ತು. ಇದನ್ನೂ ಕೂಡ ಪೊಲೀಸರು ತೆಗೆದುಹಾಕಿ ದಂಡ ಹಾಕಿದ್ದಾರೆ.
ಇದನ್ನೂ ಓದಿ: ಡ್ರೈವ್ ಮಾಡುವಾಗ ಧೂಮಪಾನ ಮಾಡಬೇಡಿ- ಇಲ್ಲಿದೆ ಕಾರಣ!
ಸರ್ಕಾರಿ ವಾಹನಗಳನ್ನ ಹೊರತು ಪಡಿಸಿ ಯಾವುದೇ ಖಾಸಗಿ ವಾಹನಗಳ ನಂಬರ್ ಪ್ಲೇಟ್ ಮೇಲೆ ರಾಜಕೀಯ ಮುಖಂಡರು ಸ್ಥಾನಮಾನ, ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಹಲವು ಸ್ಥಾನಗಳನ್ನ ನಂಬರ್ ಪ್ಲೇಟ್ ಮೇಲೆ ನಮೂದಿಸುವುದು ಕಾನೂನು ಬಾಹಿರ. ಇದೀಗ ಮಧ್ಯಪ್ರದೇಶದಲ್ಲಿ ಈ ನಿಯಮ ಜಾರಿಗೆ ತರಲಾಗಿದೆ. ಶೀಘ್ರದಲ್ಲೇ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲೂ ಈ ನಿಯಮ ಜಾರಿಗೆ ಬರಲಿದೆ.