BMW M2 ಕಾರು ಬಿಡುಗಡೆಗೊಂಡಿದೆ. 0-100 ಕಿ.ಮೀ ದೂರ ಕ್ರಮಿಸಲು ಈ ಕಾರು ತೆಗೆದುಕೊಳ್ಳೋ ಸಮಯ ಕೇವಲ 4.2 ಸೆಕೆಂಡ್ ಮಾತ್ರ. ಬಲಿಷ್ಠ ಎಂಜಿನ್, ಹಲವು ಹೆಚ್ಚುವರಿ ಫೀಚರ್ಸ್ ಹೊಂದಿರುವ ನೂತನ ಕಾರಿನ ಬೆಲೆ, ವಿಶೇಷತೆ ಏನು? ಇಲ್ಲಿದೆ. 

ಮುಂಬೈ(ನ.17): ಪೊರ್ಶೆ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ BMW ನೂತನ M2 ಕಾರು ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ BMW M2 ಮಾಡೆಲ್ ಭಾರತದಲ್ಲಿ ಬಿಡುಗಡೆಯಾಗಿದೆ. M ಕಾರು ವೇರಿಯೆಂಟ್‌ಗಳಲ್ಲಿ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

Scroll to load tweet…

ನೂತನ BMW M2 ಪೆಟ್ರೋಲ್ ವೇರಿಯೆಂಟ್ ಮಾತ್ರ ಲಭ್ಯವಿದೆ. 3 ಲೀಟರ್ ಇನ್ ಲೈನ್-ಸಿಕ್ಸ್ ಎಂಜಿನ್ ಹೊಂದಿರುವ ಈ ಕಾರು 410ps ಗರಿಷ್ಠ ಪವರ್ ಹಾಗೂ 550Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಹೀಗಾಗಿ 0-100 ಕಿ.ಮೀ ದೂರವನ್ನ ಕೇವಲ 4.2 ಸೆಕೆಂಡ್‌ಗಳಲ್ಲಿ ತಲುಪಲಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಜಾವಾ ಬೈಕ್ ಲಾಂಚ್-ಇಲ್ಲಿದೆ ಚಿತ್ರಗಳು!

ಗರಿಷ್ಠ ಸ್ಪೀಡ್ 250 ಕಿ.ಮೀ. ಎಎಂಟಿ(ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್‌)ಯಲ್ಲಿ ಮೂರು ಡ್ರೈವ್ ಮೂಡ್ ನೀಡಲಾಗಿದೆ. ಕಂಫರ್ಟ್, ಸ್ಪೋರ್ಟ್ಸ್ ಹಾಗೂ ಸ್ಪೋರ್ಟ್ಸ್ + ಮೂಡ್ ನೀಡಲಾಗಿದೆ.

ಇದನ್ನೂ ಓದಿ:ಜಾವಾ ಬೈಕ್‌ಗೂ ಉಂಟು ಮೈಸೂರಿನ ನಂಟು!

ನೂತನ BMW M2 ಕಾರಿನ ಬೆಲೆ 79.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 7 ಆಡಿಯೋ ಸ್ವೀಕರ್, 6.5 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 19 ಇಂಚಿನ್ ಆಲೋಯ್ ವೀಲ್ಹ್ಸ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್ ಹೊಂದಿದೆ.

ಇದನ್ನೂ ಓದಿ: ಮತ್ತೆ ರಸ್ತೆಗಿಳಿದ ದಿಗ್ಗಜ-ಜಾವಾ ಮೋಟರ್ ಬೈಕ್ ಬಿಡುಗಡೆ!

ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ BMW, ಎಬಿಎಸ್ ಬ್ರೇಕ್ ಸಿಸ್ಟಮ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್(CBC), ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್(DSC)ಹಾಗೂ ISOFIX ಮೌಂಟ್ಸ್‌ನೊಂದಿಗೆ ಗರಿಷ್ಠ ಸುರಕ್ಷತೆ ಒದಗಿಸಲಿದೆ. ಭಾರತದಲ್ಲಿ ದುಬಾರಿ ಕಾರಿನಲ್ಲಿ ಹೆಚ್ಚು ಮಾರಾಟವಾಗಿರುವ ಪೊರ್ಶೆ 718 ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ನೂತನ BMW M2 ಕಾರು ರಸ್ತೆಗಿಳಿದಿದೆ.