ಪೊಲೀಸರ ಸೂಚನೆಗೆ ಕ್ಯಾರೇ ಅನ್ನದ ಆಟೋ ಚಾಲಕರಿಗೆ ಬಿತ್ತು ಬರೆ

ಚಾಲನೆ ವೇಳೆ ಮೊಬೈಲ್ ಫೋನ್, ಹೆಡ್‌ಫೋನ್ ಮೂಲಕ ಕರೆ, ಮ್ಯೂಸಿಕ್ ಕೇಳುವುದು  ಕೂಡ ನಿಯಮ ಉಲ್ಲಂಘನೆ. ಹೀಗೆ ಹೆಡ್‌ಫೋನ್ ಬಳಕೆ ಮಾಡುತ್ತಾ ಡ್ರೈವಿಂಗ್ ಮಾಡುತ್ತಿದ್ದ ಆಟೋಚಾಲಕರ ಹೆಡ್‌ಫೋನ್ ಕಸಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. 

Police collect auto drivers headphones and set them on fire mumbai

ಮುಂಬೈ(ಮಾ.05): ಹೆಡ್‌ಫೋನ್ ಬಳಸಿ ಮೊಬೈಲ್ ಕರೆ, ಮ್ಯೂಸಿಕ್ ಆನಂದಿಸುತ್ತಾ ಡ್ರೈವಿಂಗ್ ಮಾಡಿದರೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಇದು ಟ್ರಾಫಿಕ್ ನಿಯಮ ಉಲ್ಲಂಘನೆ. ಇದರ ವಿರುದ್ಧ ಕಾರ್ಯಚರಣೆಗೆ ಇಳಿದ ಟ್ರಾಫಿಕ್ ಪೊಲೀಸರು ಆಟೋ ಚಾಲಕರಿಂದ ನೂರಕ್ಕೂ ಹೆಚ್ಚು ಹೆಡ್‌ಫೋನ್ ಕಸಿದು ಬೆಂತಿ ಹಚ್ಚಿದ್ದಾರೆ.

ಕಾರು ಕದ್ದು ಅಡ್ಡಾ ದಿಡ್ಡಿ ಚಲಾಯಿಸಿದ ಕಳ್ಳರು; ಮಾಲೀಕನಿಗೆ 12 ಲಕ್ಷ ರೂ ಟ್ರಾಫಿಕ್ ಫೈನ್!

ಮುಂಬೈನಲ್ಲಿ ತಿಂಗಳ ಹಿಂದೆ ಆಟೋ ಚಾಲಕರಿಗೆ ಟ್ರಾಫಿಕ್ ಪೊಲೀಸರು ನೊಟೀಸ್ ನೀಡಿದ್ದಾರೆ. ಯಾರೂ ಕೂಡ ಚಾಲನೆ ವೇಳೆ ಹೆಡ್‌ಫೋನ್ ಬಳಸದಂತೆ ಕಟ್ಟು ನಿಟ್ಟಾಗಿ ಸೂಚಿಸಿದ್ದಾರೆ. ನಿಯಮ ಪಾಲನೆ ಕುರಿತು ಕಾರ್ಯಚರಣೆಗೆ ಇಳಿದ ಮುಂಬೈ ಪೊಲೀಸರು ಚಾಲನೆ ವೇಳೆ ಹೆಡ‌್‌ಫೋನ್ ಬಳಕೆ ಮಾಡುತ್ತಿದ್ದ ಚಾಲಕರನ್ನು ಹಿಡಿದು ಹೆಡ್‌ಫೋನ್ ಕಸಿದು ಕೊಂಡಿದ್ದಾರೆ.
22 ಕಿ.ಮೀನಲ್ಲಿ 250 ನಿಯಮ ಉಲ್ಲಂಘನೆ; ಸಿಗ್ನಲ್‌ ಮಾತ್ರವಲ್ಲ ಎಲ್ಲೆಡೆ ಕ್ಯಾಮರ!.

ಸುಮಾರು 100ಕ್ಕೂ ಹೆಟ್ಟು ಹೆಡ್‌ಫೋನ್ ವಶಪಡಿಸಿದ ಪೊಲೀಸರು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಇಷ್ಟೇ ಅಲ್ಲ ಈ ಬಾರಿ ಆಟೋಚಾಲಕರಿಗೆ ಫೈನ್ ಹಾಕಿಲ್ಲ. ತಪ್ಪು ಮರುಕಳಿಸಿದರೆ ದುಬಾರಿ ದಂಡ ತೆರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಚಾಲನೆ ವೇಳೆ ಹೆಡ್‌ಫೋನ್ ಬಳಕೆ ಅತ್ಯಂತ ಅಪಾಯಕಾರಿ. ಮ್ಯೂಸಿಕ್ ಕೇಳುವುದರಿಂದ ಇತರ ವಾಹನಗಳ ಹಾರ್ನ್ ಶಬ್ದ ಕೇಳಿಸುವುದಿಲ್ಲ. ಇಷ್ಟೇ ಅಲ್ಲ ಮ್ಯೂಸಿಕ್‌ನಲ್ಲಿ ತಲ್ಲೀನನಾದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಚಾಲನೆ ವೇಳ ಹೆಡ್‌ಫೋನ್ ಬಳಕೆ ಉತ್ತಮವಲ್ಲ. 


 

Latest Videos
Follow Us:
Download App:
  • android
  • ios