ದುಬೈ(ಮಾ.01): ಕಾರು ಕಳ್ಳತನವಾಗಿದೆ ಅನ್ನೋದೇ ಅತೀ ದೊಡ್ಡ ಶಾಕ್. ಈ ಆಘಾತ ಅರಗಿಸಿಕೊಳ್ಳೋ ಮೊದಲೇ 12 ಲಕ್ಷ ರೂಪಾಯಿ ಟ್ರಾಫಿಕ್ ನಿಯಮ ಉಲ್ಲಂಘನೆ ಫೈನ್ ಕೂಡ ಬಂದರೆ ಮಾಲೀಕನ ಪರಿಸ್ಥಿತಿ ಹೇಗಾಗಬಹುದು. ಅದು ಊಹಿಸಲು ಅಸಾಧ್ಯ. ಇದು ಯಾವೋದೋ  ಸಿನಿಮಾವಲ್ಲ. ನಡೆದಿರುವ ಘಟನೆ.

ಇದನ್ನೂ ಓದಿ: ಮಾ.31ರೊಳಗೆ ತೆರಿಗೆ, ಟ್ರಾಫಿಕ್ ದಂಡ ಪಾವತಿಸಿದರೆ ಭರ್ಜರಿ ಡಿಸ್ಕೌಂಟ್!.

ಈ ಘಟನೆ ನಡೆದಿರುವುದು ದುಬೈನಲ್ಲಿ. ಅಯಾದ್ ಝಯಾಟಿಮೊ ಅನ್ನೋ 46 ವರ್ಷದ ಡ್ರೈವರ್ ಟ್ರಾಫಿಕ್ ಫೈನ್‌ಗೆ ಬೆಚ್ಚಿ ಬಿದ್ದ ಮಾಲೀಕ. 2003ರಿಂದ 2010ರ ವರೆಗೆ ಅಯಾದ್ ದುಬೈನಲ್ಲಿ ನೆಲೆಸಿದ್ದರು. ಕಾರು ಚಾಲಕರಾಗಿದ್ದ ಅಯಾದ್ ಸ್ವಂತ ಟ್ಯಾಕ್ಸಿ ಓಡಿಸುತ್ತಿದ್ದರು. 

ಇದನ್ನೂ ಓದಿ: ಫ್ಲೈಓವರ್ ಹೈ-ವೇಯಲ್ಲಿ ಹೊಸ ಸ್ಪೀಡ್ ಲಿಮಿಟ್, ಮಿತಿ ಹೆಚ್ಚಾದರೆ ದುಬಾರಿ ದಂಡ!

2010ರಲ್ಲಿ ಅಯಾದ್ ಹಲವು ಕಾರಣಗಳಿಂದ ದುಬೈ ತೊರೆದಿದ್ದರು.  ದುಬೈ ತೊರೆದ ಬೆನ್ನಲ್ಲೇ ಆಯಾದ್ ಕಾರನ್ನು ಚಾಲಾಕಿ ಕಳ್ಳರು ಕದ್ದಿದ್ದರು. ಕಾರು ಕಳ್ಳತನವಾಗಿರುವುದನ್ನು  ಕಾರು ಕಳ್ಳತನವಾಗಿದೆ ಅರಿತ ತಕ್ಷಣ ಹಿಂತಿರುಗಿ ಬಂದು ಪೊಲೀಸರಿಗೆ ದೂರು ನೀಡುವ ಸ್ಥಿತಿಯಲ್ಲಿ ಅಯಾದ್ ಇರಲಿಲ್ಲ. ಇನ್ನು ತನ್ನದು ಹಳೇ ಕಾರು, ದೂರು ದುಮ್ಮಾನ ಎಂದು ದುಬೈಗೆ ಅಲೆದಾಡುವುದರಿಂದ ಕಾರಿನ ಬೆಲೆಗಿಂತ ಹೆಚ್ಚು ಖರ್ಚಾಗಲಿದೆ. ಹೀಗಾಗಿ ಕಾರು ಹೋದರೆ ಹೋಗಲಿ ಎಂದು ಸುಮ್ಮನಾಗಿದ್ದರು.

ಎಕ್ಸ್‌ಪ್ರೆಸ್ ಹೈವೇ ಟೋಲ್ ದರ ಹೆಚ್ಚಳ; ಸರ್ಕಾರದ ಶಾಕ್!.

ಕಾರು ಕಳ್ಳತನ ಆಘಾತವನ್ನು ಮೆಲ್ಲನೆ ಮರೆತರು. ದಿನಗಳು, ತಿಂಗಳಾದವು, ತಿಂಗಳು, ವರ್ಷಗಳಾದವು. ಅಯಾದ್ ಹೀಗೆ 9 ವರ್ಷಗಳನ್ನು ಕಳೆದರು. ಇತ್ತ ತನ್ನ ಕಾರು  ಕಳ್ಳತನವಾಗಿದೆ ಅನ್ನೋದನ್ನೇ ಮರೆತರು. ಹೀಗೆ ಸಮಸ್ಯೆಗಳಿಲ್ಲದೆ ಸಾಗುತ್ತಿದ್ದ ಅಯಾದ್ ಜೀವನ ಮತ್ತೆ ದುಬೈ ಶಿಫ್ಟ್ ಆಯಿತು.

ಇತ್ತ  ಅಯಾದ್ ದುಬೈನಲ್ಲಿ ಹೊಸ ಜೀವನ ಆರಂಭಿಸುತ್ತಿದ್ದಂತೆ  ಪೊಲೀಸರು ದೊಡ್ಡ ಶಾಕ್ ನೀಡಿದರು. ಅಯಾದ್ ಕಾರು ಸಾವಿರಕ್ಕೂ ಹೆಚ್ಚು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದೆ. ಒಟ್ಟು ಮೊತ್ತ 65,00 ದಿರಾಮ್ಸ್ ದಂಡ ಕಟ್ಟಬೇಕು ಅಂದರೆ ಭಾರತೀಯ ರೂಪಾಯಿಗಳಲ್ಲಿ 12, 77,259 ರೂಪಾಯಿ ಎಂದು ದುಬೈ ಪೊಲೀಸರು ನೊಟೀಸ್ ನೀಡಿದರು.

ವಿಶ್ವದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಅನಾವರಣ, ತಿಂಗಳಿಗೆ 1,500 ರೂ!.

2010ರಲ್ಲಿ ಕಳ್ಳತನವಾದ ಕಾರು 9 ವರ್ಷಗಳಲ್ಲಿ ಕಳ್ಳರು ಅಡ್ಡಾ ದಿಡ್ಡಿ ಚಲಾಯಿಸಿದ್ದರು. ಯಾವುದೇ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಿಸಿಲ್ಲ. ಒನ್ ವೇ, ಹೈ-ವೇ ಎಲ್ಲ ರಸ್ತೆಗಳಲ್ಲಿ ಕಾರು ನುಗ್ಗಿಸಿದ್ದಾರೆ. ಹೀಗಾಗಿ ಕಾರಿನ ಟ್ರಾಫಿಕ್ ನಿಯಮ ಮೊತ್ತ 12 ಲಕ್ಷ ರೂಪಾಯಿಯಾಗಿದೆ. ಪೊಲೀಸರ ನೊಟೀಸ್‌ನಿಂದ ಅಯಾದ್ ಕಾರು ಕಳ್ಳತನಕ್ಕಿಂತ ಟ್ರಾಫಿಕ್ ದಂಡವೇ ಹೆಚ್ಚಾಯಿತು ಅನ್ನೋ ಚಿಂತೆಯಲ್ಲಿ ಮುಳುಗಿದರು. 

ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ಚಳಿ ಬಿಡಿಸಿದ ಮಹಿಳೆ!

ಇದೇ ವೇಳೆ ದುಬೈ ಪೊಲೀಸರು ಟ್ರಾಫಿಕ ದಂಡ ಪಾವತಿಗೆ ಹೊಸ ಸ್ಕೀಮ್ ಜಾರಿಗೆ ತಂದಿದ್ದರು. ಇನ್ನು ಮುಂದೆ ನಿಯಮ ಉಲ್ಲಂಘಿಸುವುದಿಲ್ಲ ಎಂದು ಲಿಖಿತ ರೂಪದಲ್ಲಿ ಪೊಲೀಸರಿಗೆ ಹೇಳಿಕೆ ನೀಡಿ ಪ್ರತಿಜ್ಞೆ ಸ್ವೀಕರಿಸಬೇಕು ಇಷ್ಟೇ ಅಲ್ಲ ಮಾಡಿ ತೋರಿಸಬೇಕು.  3ತಿಂಗಳು ನಿಯಮ ಉಲ್ಲಂಘಿಸಿದಿದ್ದರೆ 25% ಡಿಸ್ಕೌಂಟ್, 6 ತಿಂಗಳಿಗ 50 % ಡಿಸ್ಕೌಂಟ್ ಹಾಗೂ 12 ತಿಂಗಳು ನಿಯಮ ಉಲ್ಲಂಘಿಸಿದಿದ್ದರೆ 100% ಡಿಸ್ಕೌಂಟ್ ಆಫರ್ ನೀಡಿದ್ದರು. 

ಕಳ್ಳತನವಾಗಿದ್ದ ಕಾರು ಓಡಾಟ ನಿಲ್ಲಿಸಿತ್ತು. 2019ರಿಂದ 2020ರ ವರೆಗೆ ಕಾರು ಯಾವುದೇ ಟ್ರಾಫಿಕ್ ನಿಮಯ ಉಲ್ಲಂಘಿಸಿದ ವರದಿಯಾಗಿಲ್ಲ. ಇತ್ತ ಅಯಾದ್ ಖರೀದಿಸಿದ ಹೊಸ ಕಾರು ಟ್ರಾಫಿಕ್ ನಿಯಮ ಉಲ್ಲಂಘಿಸಿಲ್ಲ. ಹೀಗಾಗಿ ಅಯಾದ್ ಮೇಲಿದ್ದ 12 ಲಕ್ಷ ರೂಪಾಯಿ ದಂಡ ಸಂಪೂರ್ಣವಾಗಿ ಮನ್ನಮಾಡಲಾಗಿದೆ. ದುಬೈ ಪೊಲೀಸರ ಕರೆಯಿಂದ ಅಯಾದ್‌ಗೆ ಹೋದ ಜೀವ ಬಂದ ಅನುಭವವಾಗಿದೆ.