ಮುಂಬೈ(ಮಾ.01): ಸಿಗ್ನಲ್‌ ಅಥವಾ ಪೊಲೀಸರು ಕಂಡಾಗ ಹಲವರು ಹೆಲ್ಮೆಟ್ ಹಾಕಿಕೊಳ್ಳುತ್ತಾರೆ, ಸೀಟ್ ಬಲ್ಟ್ ಸಿಕ್ಕಿಸಿಕೊಳ್ಳುತ್ತಾರೆ, ಸ್ಪೀಡ್ ಕಡಿಮೆ ಮಾಡುತ್ತಾರೆ..ಹೀಗೆ ಹಲವಾರು. ಸಿಗ್ನಲ್ ಅಥವಾ ಪೊಲೀಸರನ್ನು ಪಾಸ್ ಆದರೆ ಸಾಕು ಮತ್ತೆ ಅದೇ ಸವಾರಿ. ಅದೆ ನಿಯವನ್ನು ಗಾಳಿಗೆ ತೂರಿ ಪ್ರಯಾಣ. ಈ ರೀತಿ ಮಾಡುವವರನ್ನು ಪತ್ತೆ ಹಚ್ಚಲು ಕ್ಯಾಮಾರೂ ಮೂಲಕ ನಗರದಲ್ಲಿ 22.4 ಕಿ.ಮೀ ಪ್ರಯಾಣಿಸಿ ಬರೋಬ್ಬರಿ 250 ನಿಯಮ ಉಲ್ಲಂಘನೆ ಮಾಡಿದವರನ್ನು ಬಹಿರಂಗ ಪಡಿಸಲಾಗಿದೆ.

ಇದನ್ನೂ ಓದಿ: ಕಾರು ಕದ್ದು ಅಡ್ಡಾ ದಿಡ್ಡಿ ಚಲಾಯಿಸಿದ ಕಳ್ಳರು; ಮಾಲೀಕನಿಗೆ 12 ಲಕ್ಷ ರೂ ಟ್ರಾಫಿಕ್ ಫೈನ್!

ಮುಂಬೈ ಮಹಾನಗರದಲ್ಲಿ ಈ ರೀತಿಯ ವಿಶೇಷ ಪ್ರಯತ್ನ ಮಾಡಲಾಗಿದೆ. ಅಂಧೇರಿಯಿಂದ ಕುರ್ಲಾ ಹಾಗೂ ಕುರ್ಲಾದಿಂದ ಅಂಧೇರಿ ನಡುವಿನ 22.4 ಕಿ.ಮೀ ಕ್ಯಾಮರ ಹಿಡಿದು ಪ್ರಯಾಣಿಸಿದ್ದಾರೆ. ಈ ವೇಳೆ ಕ್ಯಾಮಾರದಲ್ಲಿ 250 ಟ್ರಾಫಿಕ್ ನಿಯಮ ಪ್ರಕರಣಗಳು ದಾಖಲಾಗಿದೆ.ಇದರ ಒಟ್ಟು ದಂಡ 1.2 ಲಕ್ಷ ರೂಪಾಯಿ .

 

ಇದನ್ನೂ ಓದಿ:  ಮಾ.31ರೊಳಗೆ ತೆರಿಗೆ, ಟ್ರಾಫಿಕ್ ದಂಡ ಪಾವತಿಸಿದರೆ ಭರ್ಜರಿ ಡಿಸ್ಕೌಂಟ್!

ಮುಂಬೈನ ಸಾಮಾಜಿಕ ಕಾರ್ಯಕರ್ತರ ಗುಂಪು ಈ ಪ್ರಯತ್ನ ಮಾಡಿದೆ. ಈ ವಿಡಿಯೋವನ್ನು ಮುಂಬೈ ಟ್ರಾಫಿಕ್ ಪೊಲೀಸರ ಗಮನಕ್ಕೆ ತರಲಾಗಿದೆ. ಈ ಮೂಲಕ ಮುಂಬೈನ ರಸ್ತೆಗಳಲ್ಲಿ ಪ್ರಯಾಣಿಕರಲ್ಲಿ ಶಿಸ್ತು ತರಲು ಆಗ್ರಹಿಸಲಾಗಿದೆ. ಸಿಗ್ನಲ್‌ನಲ್ಲಿ ಮಾತ್ರವಲ್ಲ, ರಸ್ತೆಯುದ್ದಕ್ಕೂ ನಿಯಮ ಪಾಲಿಸಬೇಕು ಅನ್ನೋ ಮನವಿ ಮಾಡಲಾಗಿದೆ.