ನವದೆಹಲಿ(ಆ.30): ಆಟೋ ಎಕ್ಸ್ಪೋ 2020ರಲ್ಲಿ ಅನಾವರಣಗೊಂಡಿದ್ದ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಕೊರೋನಾ ವೈರಸ್ ಕಾರಣ ಬಿಡುಗಡೆ ವಿಳಂಬವಾಗಿತ್ತು. ಮಾರ್ಚ್‌ನಲ್ಲಿ ಬಿಡುಗಡೆಗೆ ತಯಾರಿ ಮಾಡಿದ್ದ ಪಿಯಾಗ್ಗಿಯೋ  ಇದೀಗ ಸೆಪ್ಟೆಂಬರ್ 1 ರಂದು ನೂತನ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ.

ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿಗೆ ಬಿತ್ತು ಭಾರಿ ದಂಡ!

1960ರಲ್ಲಿ ವೆಸ್ಪಾ ಸ್ಕೂಟರ್‌ನಿಂದ ಸ್ಪೂರ್ತಿ ಪಡೆದು ನೂತನ ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ನಿರ್ಮಾಣ ಮಾಡಲಾಗಿದೆ. ರೇಸಿಂಗ್ ಸಿಕ್ಸ್ಟೀಸ್ ಸ್ಕೂಟರ್ ಗ್ರಾಫಿಕ್ ಡಿಸೈನ್ ಕೆಂಪು ಹಾಗೂ ಗೋಲ್ಡ್ ಬಣ್ಣದಿಂದ ಕೂಡಿದೆ. ಗೋಲ್ಡ್ ಕಲರ್ ವೀಲ್ಹ್ ನೀಡಲಾಗಿದೆ. ಹೆಡ್‌ಲೈಟ್, ಮಿರರ್, ಎಕ್ಸಾಸ್ಟ್‌ಗೆ ಬ್ಲಾಕ್ ಮ್ಯಾಟ್ ಕಲರ್ ನೀಡಲಾಗಿದ್ದು ಸ್ಕೂಟರ್‌ಗೆ ಸ್ಪೋರ್ಟೀವ್ ಲುಕ್ ನೀಡಿದೆ. ಹೆಡ್‌ಲೈಡ್‌ನಲ್ಲಿ LED ಲೈಟ್ ಬಳಸಲಾಗಿದೆ. 

ವೆಸ್ಪಾ ನೊಟ್ಟೆ 125 ಸ್ಕೂಟರ್ ಬಿಡುಗಡೆ-ಬೆಲೆ ಎಷ್ಟು?

ನೂತನ ಸ್ಕೂಟರ್ BS6 ಎಮಿಶನ್ ಎಂಜಿನ್ ಹೊಂದಿದೆ. 150 ಸಿಸಿ, 3 ವೇಲ್ವ್, ಫ್ಯುಯೆಲ್ ಇಂಜೆಕ್ಟೆಡ್, 10.4bhp ಪವರ್ 10.6Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 200mm ಡಿಸ್ಕ್ ಫ್ರಂಟ್ ಹಾಗೂ ರೇರ್ 140 mm ಡ್ರಂ ಬ್ರೇಕ್ ಹೊಂದಿದೆ.  ABS ಬ್ರೇಕ್ ಸಿಸ್ಟಮ್ ಹೊಂದಿದೆ. USB ಚಾರ್ಜರ್ ಹೊಂದಿದೆ.

ನೂತನ ವೆಸ್ಪಾ ರೇಸಿಂಗ್ ಸಿಕ್ಸ್ಟೀಸ್ 150 ಸ್ಕೂಟರ್ ಬೆಲೆ 1.3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿರು ವೆಸ್ಪಾ SXL 150 ಸ್ಕೂಟರ್ ಬೆಲೆ 1.26 ಲಕ್ಷ ರೂಪಾಯಿ ಇದೆ(ಎಕ್ಸ್ ಶೋ ರೂಂ).