ಇಟಲಿ(ಮೇ.26): ವೆಸ್ಪಾ ಸ್ಕೂಟರ್‌ಗಳು ಭಾರತದಲ್ಲೂ ಹೆಚ್ಚು ಜನಪ್ರಿಯವಾಗಿದೆ. ಕಾರಣ ಇದರ ರೆಟ್ರೋ ಸ್ಟೈಲ್, ಆಕರ್ಷಕ ವಿನ್ಯಾಸ ಹಾಗೂ ಪರ್ಫಾಮೆನ್ಸ್. ಇಟಲಿಯ ಪಿಯಾಗ್ಗಿಯೋ ಕಂಪನಿಯ ವೆಸ್ಪಾ ಸ್ಕೂಟರ್ ವಿಶ್ವದಲ್ಲೇ ಹೆಚ್ಚು ಪ್ರಸಿದ್ದಿಯಾಗಿದೆ. ಮಾರಾಟದಲ್ಲೂ ಇತರ ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಇದೇ ವೆಸ್ಪಾ ಸ್ಕೂಟರ್ ಡಿಸೈನ್ ಕದ್ದ ಚೀನಾ ಕಂಪನಿ, ಹೊಸ ಸ್ಕೂಟರ್ ಎಂದು ಬಿಡುಗಡೆ ಮಾಡಿತು. 

ಛೀಮಾರಿ ಹಾಕಿಸಿಕೊಂಡ್ರೂ ಬುದ್ದಿ ಕಲಿತಿಲ್ಲ ಚೀನಾ, ಟಾಟಾ ನೆಕ್ಸಾನ್ ಡಿಸೈನ್ ಕಾಪಿ!...

2019ರ EICMA ಆಟೋ ಎಕ್ಸ್‌ಪೋ ಮೋಟಾರು ಶೋನಲ್ಲಿ ಚೀನಾ ಕಂಪನಿ ವೆಸ್ಪಾ ಡಿಸೈನ್ ಕಾಪಿ ಮಾಡಿದ ಸ್ಕೂಟರ್ ಅನಾವರಣ ಮಾಡಿತ್ತು. ಇದರ ಬೆನ್ನಲ್ಲೇ ಪಿಯಾಗ್ಗಿಯೋ ಕಂಪನಿ ಕಾಪಿ ರೈಟ್ ಕೇಸ್ ದಾಖಲಿಸಿತ್ತು. ಯುರೋಪಿನ EUIPO ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ ಪಿಯಾಗ್ಗಿಯೋ ಕಾನೂನು ಹೋರಾಟ ಆರಂಭಿಸಿತ್ತು. ಸುದೀರ್ಘ ದಿನಗಳ ಬಳಿಕ ಇದೀಗ ತೀರ್ಪು ಹೊರಬಿದ್ದಿದೆ. ಚೀನಾ ಡಿಸೈನ್ ಕಾನೂನು ಬಾಹಿರ ಎಂದಿದೆ.

ವೆಸ್ಪಾ ಡಿಸೈನ್ ಕಾಪಿ ಮಾಡಿರುವುದು ದೃಢವಾಗಿದೆ. ಈ ಡಿಸೈನ್‌ನಲ್ಲಿ ಸ್ಕೂಟರ್ ಉತ್ಪಾನೆ ಮಾಡಬಾರದು ಹಾಗೂ ಪಿಯಾಗ್ಗಿಯೋ ಕಂಪನಿಗೆ ನಷ್ಟ ಪರಿಹಾರ ನೀಡಲು EUIPO ಕೋರ್ಟ್ ಸೂಚಿಸಿದೆ. ಇತ್ತ ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ ವಿರುದ್ಧ ಕಠಿಣ ಕ್ರಮಕ್ಕೆ ಪಿಯಾಗ್ಗಿಯೋ ಆಗ್ರಹಿಸಿದೆ.

ಚೀನಾ ಕಂಪನಿಗಳು ಡಿಸೈನ್ ಕಾಪಿ ಮಾಡುತ್ತಿರುವುದು ಹಾಗೂ ಛೀಮಾರಿ ಹಾಕಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಈ ರೀತಿ ಮುಖಭಂಕಕ್ಕೆ ಒಳಗಾಗಿದೆ. ಇತ್ತೀಚೆಗೆ ಭಾರತದ ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಕಾರಿನ ಡಿಸೈನ್ ಕಾಪಿ ಮಾಡಿತ್ತು. ನೆಕ್ಸಾನ್ ಡಿಸೈನ್‌ನಲ್ಲಿ ಕೊಂಚ ಬದಲಾವಣೆ ಮಾಡಿ ಕಾರು ಬಿಡುಗಡೆ ಮಾಡಿ ಮುಖಭಂಗಕ್ಕೆ ಒಳಾಗಾಗಿತ್ತು.