ಬೆಂಗಳೂರು(ಜು.25): ಅತ್ಯಲ್ಪ ಅವಧಿಯಲ್ಲಿ ಭಾರತೀಯ ಸ್ಕೂಟರ್ ಪ್ರೀಯರ ಮನಗೆದ್ದ ವೆಸ್ಪಾ ಇದೀಗ ಹೊಸ ಅವತಾರದಲ್ಲಿ ಮತ್ತೆ ಬಿಡುಗಡೆಯಾಗಿದೆ. ಇಟಲೆ ಮೂಲದ ಪಿಯಾಜಿನ್ ಮೋಟಾರ್ ಸಂಸ್ಥೆ ವೆಸ್ಪಾ ನೊಟ್ಟೆ 125 ಸ್ಕೂಟರ್ ಬಿಡುಗಡೆ ಮಾಡಿದೆ.

ನೂತನ ವೆಸ್ಪಾ ನೊಟ್ಟೆ ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಇಟಲೆ ಭಾಷೆಯಲ್ಲಿ ನೊಟ್ಟೆ ಅಂದರೆ ರಾತ್ರಿ ಎಂದರ್ಥ. ಹೀಗಾಗಿ ವೆಸ್ಪಾ ನೊಟ್ಟೆ ಸಂಪೂರ್ಣ ಕಪ್ಪು ಬಣ್ಣದಲ್ಲಿ ತಯಾರಿಸಲಾಗಿದೆ. 125 ಸಿಸಿ ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿದೆ.

ನೂತನ ವೆಸ್ಪಾ ನೊಟ್ಟೆ ಬೆಲೆ 70285 ರೂಪಾಯಿ(ಎಕ್ಸ್ ಶೋರೂಂ). 110.6ಪಿಎಸ್ ಪವರ್, 7500 ಆರ್‌ಪಿಎಂ ಹೊಂದಿದೆ.  ಫ್ರಂಟ್ ಡಿಸ್ಕ್ ಹಾಗೂ ರೇರ್ ಡ್ರಮ್ ಬ್ರೇಕ್ ಹೊಂದಿರೋ ನೂತನ ವೆಸ್ಪಾ ನೊಟ್ಟೆ ಹಲವು ವಿಶೇಷತೆಗಳಿಂದ ಕೂಡಿದೆ.

ಕಪ್ಪು ಬಣ್ಣದಿಂದ ಕೂಡಿರುವ ನೊಟ್ಟೆ ಆಕರ್ಷಕ  ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನ ಬಳಸಲಾಗಿದೆ. ಡಿಜಿಟಲ್ ಹಾಗೂ ಅನಲಾಗ್ ಕನ್ಸೋಲ್, ಸ್ಟೈಲೀಶ್ ವೀಲ್ಸ್ ಹೊಂದಿದೆ.