ಮುಂಬೈ(ಡಿ.15): ಮುಂಬೈ ಮಹಾನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ನಿಯಮ ಮೀರಿ ಅತೀ ವೇಗದಲ್ಲಿ ವಾಹನ ಚಲಾವಣೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಮುಂಬೈ ಪೊಲೀಸರು ಬರೋಬ್ಬರಿ 13,000 ರೂಪಾಯಿ ದಂಡ ವಿಧಿಸಿದ್ದಾರೆ. 

ಇದನ್ನೂ ಓದಿ: ಸಣ್‌-ಸಣ್ಣ 5 ತಪ್ಪಿನಿಂದ ಕಡಿಮೆಯಾಗುತ್ತೆ ನಿಮ್ಮ ಕಾರಿನ ಆಯಸ್ಸು!

ಬಾಂದ್ರಾ ವರ್ಲಿ ಸೀ ಲಿಂಕ್ ರಸ್ತೆಯಲ್ಲಿ ಸ್ಪೀಡ್ ಲಿಮಿಟ್ ಮೀರಿ ಮುಖ್ಯಮಂತ್ರಿ ವಾಹನ 13 ಬಾರಿ ಪ್ರಯಾಣ ಮಾಡಿದೆ. ಜನವರಿ 12, 2018 ರಿಂದ ಆಗಸ್ಟ್ 12, 2018ರ ವರೆಗಿನ ಅವಧಿಯಲಲ್ಲಿ ಮುಖ್ಯಮಂತ್ರಿ ಫಡ್ನವಿಸ್ ವಾಹನ ನಿಯಮ ಉಲ್ಲಂಘನೆ ಮಾಡಿರುವುದು ಪೊಲೀಸ್ ಸಿಸಿಟಿವಿಯಲ್ಲಿ ದಾಖಲಾಗಿದೆ. ಹೀಗಾಗಿ ಪ್ರತಿ ನಿಯಮ ಉಲ್ಲಂಘನೆಗೆ 1,000 ರೂಪಾಯಿಯಂತೆ ಓಟ್ಟು 13,000 ರೂಪಾಯಿ ದಂಡ ವಿಧಿಸಿದೆ. 

ಇದನ್ನೂ ಓದಿ: ಫೇಸ್‌ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಬಳಿ ಯಾವ ಕಾರಿದೆ?

13,000 ರೂಪಾಯಿ ದಂಡ ವಿಧಿಸಿದ ಬಳಿಕ ಮುಂಬೈ ಪೊಲೀಸರು ಚಲನ್ ರದ್ದು ಮಾಡಿದ್ದಾರೆ. ಇದನ್ನ ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಶಕೀಲ್ ಅಹಮ್ಮದ್ ಆರ್‌ಟಿಐಯಡಿ ಅರ್ಜಿ ಸಲ್ಲಿಸಿದ್ದರು. ಇದೀಗ ಮುಂಬೈ ಪೊಲೀಸರು ಚಲನ್ ರದ್ದತಿಗೆ ಉತ್ತರ ನೀಡಿದ್ದಾರೆ. ಹೀಗಾಗಿ ಫಡ್ನವಿಸ್ ದಂಡ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

ಇದನ್ನೂ ಓದಿ: ಯಮಹಾ ಸಲ್ಯೂಟೋ RX 110,125 ಬೈಕ್ ಬಿಡುಗಡೆ!

ಮುಂಖ್ಯಮಂತ್ರಿಯ ಸುರಕ್ಷತೆ ದೃಷ್ಟಿಯಿಂದ ಮುಖ್ಯಮಂತ್ರಿ ವಾಹನ ಹಾಗೂ ಬೆಂಗಾವಲು ವಾಹನಕ್ಕೆ ಯಾವುದೇ ವೇಗತ ಮಿತಿ ನಿಗದಿಪಡಿಸಲು ಸಾಧ್ಯವಿಲ್ಲ. ಹೀಗಾಗಿ ಮೀತಿ ಮೀರಿದ ವೇಗದ ದಂಡವನ್ನ ರದ್ದು ಮಾಡಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.