ಬೆಂಗಳೂರು(ನ.06): ಕಾರು ಮಾಲೀಕರು ಮಾಡುವ ಸಣ್ಣ ತಪ್ಪುಗಳಿಗೆ ಕೊನೆಗೆ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತೆ. ಹೀಗೆ ಸಣ್ಣ ಸಣ್ಣ ತಪ್ಪುಗಳಿಂದ ಎಚ್ಚೆತ್ತು ನಿಮ್ಮ ಕಾರುಗಳ ಬಾಳಿಕೆಯನ್ನ ಹೆಚ್ಚಾಗಿಸಲು ಇಲ್ಲಿದೆ ಟಿಪ್ಸ್.

1 ಇಳಿಜಾರಿನಲ್ಲಿ ನ್ಯೂಟ್ರಲ್ ಗೇರ್‌ ಬಳಕೆ
ಇಳಿಜಾರು ರಸ್ತೆಯಲ್ಲಿ ಇಂಧನ ಉಳಿಸುವ ನಿಟ್ಟಿನಲ್ಲಿ ನ್ಯೂಟ್ರಲ್ ಗೇರ್‌ನಲ್ಲಿ ವಾಹನ ಚಲಾಯಿಸುತ್ತಾರೆ. ಕೇವಲ ಬ್ರೇಕ್ ಅಪ್ಲೈ ಮಾಡುತ್ತಾ ಕಾರನ್ನ ಕಂಟ್ರೋಲ್ ಮಾಡುತ್ತಾರೆ. ಇದರಿಂದ ಬ್ರೇಕ್ ಬಿಸಿಯಾಗಲಿದೆ. ಇಷ್ಟೇ ಅಲ್ಲ ಬ್ರೇಕ್ ಸಿಸ್ಟಮ್ ಸಂಪೂರ್ಣ ಹಾಳಾಗಲಿದೆ.

2 ಕಡಿಮೆ ವೀಲ್ಹ್ ಗಾಳಿಯಲ್ಲಿ ಸ್ವೀಡ್ ಚಲಾವಣೆ
ಕಾರಿನ ವೀಲ್ಹ್ ಕುರಿತು ಹೆಚ್ಚಿನ ಕಾಳಜಿ  ವಹಿಸಬೇಕು. ಕಾರಿನ ಚಕ್ರದಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಗಾಳಿ ಇದ್ದಲ್ಲಿ, ಮೈಲೇಜ್ ಕಡಿಮೆಯಾಗಲಿದೆ. ಇನ್ನೇ ಕಡಿಮೆ ಗಾಳಿಯಲ್ಲಿ ವೇಗವಾಗಿ ವಾಹನ ಚಲಾಯಿಸಿದರೆ, ಟೈಯರ್ ಬ್ರಸ್ಟ್ ಆಗೋ ಸಾಧ್ಯತೆ ಇದೆ.

3 ಹಂಪ್ -ಕೆಟ್ಟ ರಸ್ತೆಯಲ್ಲಿ ವೇಗವಾಗಿ ಚಲಾವಣೆ
ಕಾರಿನ ಎಂಜಿನ್ ಓಡಾಟ ಆರಂಭವಾದಗಲೇ ಕಾರಿನ ಸಸ್ಪೆನ್ಶನ್ ಕಾರ್ಯರಂಭಿಸುತ್ತದೆ. ಅದು ಅತ್ಯುತ್ತಮ ರಸ್ತೆ ಇರಲಿ ಕೆಟ್ಟ ರಸ್ತೆ ಇರಲಿ ಸಸ್ಪೆನ್ಶನ್  ಕೆಲಸ ಮಾಡುತ್ತೆ. ಹೀಗಾಗಿ ಹಂಪ್, ಗುಂಡಿ ಬಿದ್ದ ರಸ್ತೆಗಳಲ್ಲಿ ನಿಧಾನವಾಗಿ ಚಲಿಸಿದರೆ ಸಸ್ಪೆನ್ಶನ್ ಹೆಚ್ಚಿನ ಸಮಯ ಬಾಳಿಕೆ ಬರಲಿದೆ.

4 ಟರ್ಬೋ ಕೂಲಿಂಗ್ ಮಾಡದಿರುವುದು
ಪ್ರಮುಖವಾಗಿ ಡೀಸೆಲ್ ಎಂಜಿನ್ ಕಾರುಗಳು ಟರ್ಬೋಚಾರ್ಜಡ್ ಎಂಜಿನ್. ಕಾರಿನಲ್ಲಿ ಪ್ರಯಾಣ ಮಾಡಿದ ಬಳಿಕ ಕಾರನ್ನ ಸ್ಟಾರ್ಟ್‌ನಲ್ಲಿಟ್ಟು ಟರ್ಬೋ ಕೂಲ್ ಮಾಡಬೇಕು. ಐಡ್ಲಿಂಗ್ ಮಾಡುವುದರಿಂದ ಟರ್ಬೋಚಾರ್ಜ್ ಟೆಂಪರೇಚರ್ ಕಡಿಮೆಯಾಗಲಿದೆ. ಇಷ್ಟೇ ಅಲ್ಲ ಟರ್ಬೋಚಾರ್ಜರ್‌ನಲ್ಲಿ ಸೇರಿಕೊಂಡಿರುವ ಹೆಚ್ಚುವರಿ ಗ್ಯಾಸ್ ರಿಲೀಸ್ ಆಗಲಿದೆ.

5 ಸರ್ವೀಸ್ ವೇಳಾಪಟ್ಟಿ ಅನುಸರಿಸದೇ ಇರುವುದು
ಕಾರಿನ ಸರ್ವೀಸ್ ನಿರ್ಲಕ್ಷಿಸಿದರೆ ಕಾರು ಬಹುಬೇಗನೆ ಗ್ಯಾರೇಜ್ ಸೇರಲಿದೆ. ಸರ್ವೀಸ್ ವೇಳಾಪಟ್ಟಿಯನ್ನ ಚಾಚು ತಪ್ಪದೇ ಅನುಸರಿಸಬೇಕು. ಸಾಮಾನ್ಯವಾಗಿ 10,000 ಕಿ.ಮೀ ಅಥವಾ 1 ವರ್ಷದಲ್ಲಿ ಸರ್ವೀಸ್ ಮಾಡಿಸಬೇಕು. ಸಮಯಕ್ಕೆ ಸರಿಯಾಗಿ ಮಾಡಿಸಲೇಬೇಕು.