ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದುಬಾರಿ ದಂಡದ ಹೊಸ ಮೋಟಾರು ಕಾನೂನು ಜಾರಿಗೆ ತಂದಿದೆ. ಇದಕ್ಕೆ ಬಿಜಿಪಿಯೇತರ ಕೆಲ ರಾಜ್ಯಗಳು, ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಬಿಜೆಪಿ ಮುಖಂಡನೇ ದುಬಾರಿ ದಂಡ ಕಾಯ್ದೆ ರದ್ದು ಮಾಡುವ ಭರವಸೆ ನೀಡಿದ್ದಾನೆ. 

ಹರ್ಯಾಣ(ಅ.10): ರಾಜಕೀಯ ಮುಖಂಡರು ಭರವಸೆಗಳನ್ನು ನೀಡುವುದರಲ್ಲಿ ಎತ್ತಿದ ಕೈ. ಈಡೇರಿಸಲು ಸಾಧ್ಯವಿಲ್ಲದಿದ್ದರೂ, ಜನರ ಮುಂದೆ ಅಶ್ವಾಸನೇ ನೀಡುತ್ತಲೇ ಇರುತ್ತಾರೆ. ಇದೀಗ ವಿಧಾನಸಭಾ ಚುನಾವಣೆಗೆ ಹರ್ಯಾಣ ಸಜ್ಜಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಯೇ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಂದಿರುವ ನೂತನ ಮೋಟಾರು ವಾಹನ ಕಾಯ್ದೆಯನ್ನು ರದ್ದುಗೊಳಿಸುವ ಭರವಸೆ ನೀಡಿದ್ದಾರೆ. 

ಇದನ್ನೂ ಓದಿ: ಹೊಸ ಟ್ರಾಫಿಕ್ ನಿಯಮ; ಹೊರಬಿತ್ತು ಕುತೂಹಲಕಾರಿ ಮಾಹಿತಿ!

ಹರ್ಯಾಣದ ಬಿಜೆಪಿ ಮುಖಂಜ ದೂದರಾಮ್ ಬಿಶ್ನೋಯಿ, ಚುನಾವಣಾ ಪ್ರಚಾರದ ವೇಳೆ ಹೊಸ ಆಶ್ವಾಸನೆ ನೀಡಿದ್ದಾರೆ. ನೀವು ನನ್ನನ್ನು ಗೆಲ್ಲಿಸಿದರೆ ಪೊಲೀಸರು ಹಾಕೋ ದುಬಾರಿ ದಂಡದಿಂದ ಮುಕ್ತಿ ನೀಡಲಿದ್ದೇನೆ ಎಂದಿದ್ದಾರೆ. ಮತಯಾಚನೆಯ ರ್ಯಾಲಿಯಲ್ಲಿ ಮಾತನಾಡುತ್ತಿದ ಬಿಶ್ನೋಯಿ, ಶಿಕ್ಷಣ, ಡ್ರಗ್ ಸಮಸ್ಯೆ, ಪೊಲೀಸರ ದುಬಾರಿ ಚಲನ್ ಸೇರಿದಂತೆ ಸಣ್ಣ ಸಣ್ಣ ಸಮಸ್ಯೆಗಳಿಗೆ ಮುಕ್ತಿ ನೀಡಲಿದ್ದೇನೆ. ಇದಕ್ಕೆ ನೀವು ನಿಮ್ಮ ಸಹೋದರನಾದ ನನ್ನನ್ನು ಗೆಲ್ಲಿಸಿ ಎಂದಿದ್ದಾರೆ.

Scroll to load tweet…

ಇದನ್ನೂ ಓದಿ: ಹೆಲ್ಮೆಟ್ ಹಾಕದ ಪೊಲೀಸ್: ಊರ ಜನರ ಮುಂದೆ ಮಾನ ಉಡೀಸ್!

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು, ದುಬಾರಿ ದಂಡ ಜಾರಿಮಾಡಿದೆ. ಇದಕ್ಕೆ ಪರ ವಿರೋಧಗಳಿವೆ. ಆದರೆ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಸರ್ಕಾರದ ಮಹತ್ವದ ಯೋಜನೆಯನ್ನೇ ರದ್ದು ಪಡಿಸುವ ಮಾತನಗಳನ್ನಾಡಿದ್ದು ಚರ್ಚೆಗೆ ಗ್ರಾಸವಾಗಿದೆ. 

ಇದನ್ನೂ ಓದಿ:8 ವರ್ಷದ ಬಾಲಕನ ಬೈಕ್ ರೈಡ್; ತಂದೆಗೆ 30,000 ರೂ ದಂಡ!

ಪಶ್ಚಿಮ ಬಂಗಳಾ ಸೇರಿದಂತೆ ಬಿಜೆಪಿಯೇತರ ಸರ್ಕಾರವಿರುವ ಕೆಲ ರಾಜ್ಯಗಳು ಹೊಸ ಮೋಟಾರು ವಾಹನ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದೆ. ಇದೀಗ ಹರ್ಯಾಣ ಬಿಜೆಪಿ ಮುಖಂಡನೇ, ದುಬಾರಿ ದಂಡಕ್ಕೆ ಮುಕ್ತಿ ಹಾಡುವ ಮಾತನಾಡಿದ್ದಾರೆ.