ಲಕ್ನೋ(ಅ.01): ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ತಪ್ಪಿದ್ದಲ್ಲ. ಪೊಲೀಸರು ಇಲ್ಲ, ಸಿಸಿಟಿ ಇಲ್ಲ ಎಂದು ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಾಗುತ್ತೆ ಎಚ್ಚರ. ಇದೀಗ 8 ವರ್ಷದ ಬಾಲಕ ಬೈಕ್ ರೈಡ್ ಮಾಡುತ್ತಿರುವ ವೈರಲ್ ವಿಡಿಯೋ ಆಧರಿಸಿ ಪೊಲೀಸರು ಬಾಲನ ಅಪ್ಪನಿಗೆ ಬರೋಬ್ಬರಿ 30,000 ರೂಪಾಯಿ ದಂಡ ಹಾಕಿದ್ದಾರೆ. 

ಇದನ್ನೂ ಓದಿ: ಟ್ರಾಫಿಕ್ ಪೊಲೀಸ್‌ನೊಳಗೊಬ್ಬ ಗೂಂಡಾ; ರಸೀದಿ ಕೇಳಿದ್ದಕ್ಕೆ ಗೂಸ!

ಈ ಘಟನೆ ನಡೆದಿರುವುದು ಲಕ್ನೋದಲ್ಲಿ. ಬಾಲಕ ಬೈಕ್ ರೈಡ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕಾಕೋರಿ ಪೊಲೀಸರಿಗೂ ತಲುಪಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಬೈಕ್ ರಿಜಿಸ್ಟ್ರೇಶನ್ ನಂಬರ್ ಆಧರಿಸಿ ತನಿಖೆ ಆರಂಭಿಸಿದ್ದಾರೆ. 

ಇದನ್ನೂ ಓದಿ: ನೇಪಾಳ ಎಂದು ಚೀನಾ ತಲುಪಿದ್ರು; ಭಾರತೀಯ ಬೈಕರ್ಸ್‌ಗೆ ಗಡಿಯಲ್ಲಿ ಸಂಕಷ್ಟ!

ಬೈಕ್ ರೈಡ್ ಮಾಡುತ್ತಿರುವ ಬಾಲಕನ ವಯಸ್ಸು ಕೇವಲ 8. ಈತನ ಹೆಸರು ಶಾನು. ಕಾಕೋರಿ ಬಳಿಯ ಈ ಪುಟ್ಟ ಬಾಲಕ ಪ್ರತಿ ದಿನ ಡೈರಿಗೆ ಹಾಲು ಹಾಕುತ್ತಿದ್ದಾನೆ.  ಈತನಿಗೆ ಬೈಕ್ ಮೇಲೆ ಕುಳಿತರೆ ಕಾಲು ನೆಲಕ್ಕೆ ಎಟುಕಲ್ಲ. ಬಾಲನಕ ಗಾತ್ರಕ್ಕಿಂತ ದೊಡ್ಡದಾದ ಹೆಲ್ಮೆಟ್, ಜೊತೆ ಬೈಕ್‌ನ ಎರಡು ಬದಿಗಳಲ್ಲಿ ಹಾಲಿನ ಕ್ಯಾನ್. ರೈಡಿಂಗ್ ಮಾತ್ರವಲ್ಲ, ಅತ್ಯಂತ ಅಪಾಯಕಾರಿ ಕೂಡ ಹೌದು.

ಇದನ್ನೂ ಓದಿ: 18KM ಆಟೋ ಪ್ರಯಾಣ; ಬೆಂಗ್ಳೂರು ಟಿಕ್ಕಿಯಿಂದ ಚಾಲಕ ಕಿತ್ತ 4,300 ರೂ ಹಣ!

ಟ್ರಾಫಿಕ್ ಪೊಲೀಸ್ ಪುನೇಂದ್ರ ಸಿಂಗ್, ವಿಡಿಯೋ ಆಧರಿಸಿ ಬಾಲಕನ ತಂದೆಗೆ ದಂಡ ಹಾಕಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಲಾಯಿಸಿ ನಿಯಮ ಉಲ್ಲಂಘನೆ ಹಾಗೂ ಮಗನ ಕೈಯಲ್ಲಿ ಗಾಡಿ ನೀಡಿದ ಕಾರಣಕ್ಕೆ ಬರೋಬ್ಬರಿ 30,000 ರೂಪಾಯಿ ದಂಡ ಹಾಕಿದ್ದಾರೆ. ಇಷ್ಟೇ ಅಲ್ಲ ಇದೀಗ ಕೋರ್ಟ್ ವಿಚಾರಣೆ ನಡೆಸಲಿದೆ ಬಳಿಕ ಜೈಲು ಶಿಕ್ಷೆ ಅಥವಾ ದಂಡದ ಮೊತ್ತವನ್ನು ಅಂತಿಮಗೊಳಿಸಲಿದೆ.