ನವದೆಹಲಿ(ಜ.05): ಹೊಸ ವರ್ಷದಲ್ಲಿ ಹೊಸ ಕಾರು ಖರೀದಿಸಲು ಪ್ಲಾನ್ ಮಾಡಿದ್ದರೆ ನೀವು ಎರಡು ಬಾರಿ ಯೋಚಿಸುವುದು ಒಳಿತು.  ನೀವು ಖರೀದಿಸಲು ಹೊರಟಿರುವು ಕಾರು 10 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆ ಕಾರಾಗಿದ್ದರೆ, ಇದೀಗ GSTಜೊತೆಗೆ TCS ತೆರಿಗೆ ಕಟ್ಟಬೇಕು. ಇದರಿಂದ ಕಾರಿನ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.

ಇದನ್ನೂ ಓದಿ: ಮೊದಲ ಫೆರಾರಿ ಕಾರು 25 ವರ್ಷಗಳ ಬಳಿಕ ಹರಾಜು-ಬೆಲೆ 41 ಕೋಟಿಯಿಂದ ಆರಂಭ!

ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಹಾಗೂ ಕಸ್ಟಮ್ ನಿಯಮದ ಪ್ರಕಾರ, 10 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಕಾರಿನ ಮೇಲೆ GSTಜೊತೆಗೆ  ಟಾಕ್ಸ್ ಕಲೆಕ್ಟೆಡ್ ಸೋರ್ಸಸ್(TCS)ಕೂಡ ಸೇರಿಕೊಳ್ಳಲಿದೆ.  ಶೇಕಡಾ 1 ರಷ್ಟು TCS ಟ್ಯಾಕ್ಸ್ ಪಾವತಿಸಬೇಕು. ಇದರಿಂದ ಕಾರಿ ಬೆಲೆ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.

ಇದನ್ನೂ ಓದಿ: 6 ಲಕ್ಷ ರೂಪಾಯಿಗೆ ಸೋಲಾರ್ ಬಸ್ - ವಿದ್ಯಾರ್ಥಿಗಳ ಹೊಸ ಆವಿಷ್ಕಾರ!

TCS ತೆರಿಗೆಯಿಂದ ಶೀಘ್ರದಲ್ಲೇ 10 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಕಾರುಗಳ ಬೆಲೆ ಹೆಚ್ಚಾಗಲಿದೆ. ಇದು ಆಟೋಮೊಬೈಲ್ ಕ್ಷೇತ್ರಕ್ಕೆ ತೀವ್ರ ಹೊಡೆತ ಬೀಳಲಿದೆ. ಕಾರಣ ಸೆಡಾನ್ ಕಾರು,SUV ಕಾರುಗಳ ಬೆಲೆ 10 ಲಕ್ಷ ರೂಪಾಯಿಗಿಂತ ಹೆಚ್ಚಿದೆ. ಇದೀಗ ನೂತನ ನಿಯಮ ಮತ್ತೆ ಆಟೋ ಕ್ಷೇತ್ರವನ್ನ ಸಂಕಷ್ಟಕ್ಕೆ ತಳ್ಳಲಿದೆ.