ಜಲಂಧರ್(ಜ.04): ಬರೋಬ್ಬರಿ 300 ವಿದ್ಯಾರ್ಥಿಗಳು, ಸತತ 1 ವರ್ಷ ಪರಿಶ್ರಮ. ಇದು ಸೋಲಾರ್ ಚಾಲಿತ ಬಸ್ ಆವಿಷ್ಕಾರದ ಹಿಂದಿನ ಶ್ರಮ. ಎಲ್‌ಪಿ ಯುನಿವರ್ಸಿಟಿ ವಿದ್ಯಾರ್ಥಿಗಳು ನೂತನ ಬಸ್ ಆವಿಷ್ಕರಿಸಿದ್ದಾರೆ. ಇದೀಗ ಆಟೋಮೊಬೈಲ್ ಕ್ಷೇತ್ರದಲ್ಲೇ ಹೊಸ ಸಂಚಲನ ಮೂಡಿಸಲಿದೆ.

ಇದನ್ನೂ ಓದಿ: ಜ.23ಕ್ಕೆ ಬಿಡುಗಡೆಯಾಗಲಿರುವ ವ್ಯಾಗನ್‌ಆರ್ ಕಾರಿನ 6 ವಿಶೇಷತೆ ಏನು? ಇಲ್ಲಿದೆ!

ಜಲಂಧರ್‌ನ ವಿದ್ಯಾರ್ಥಿಗಳು ಸೋಲಾರ್ ಪವರ್ ಚಾಲಿತ ನೂತನ ಬಸ್ ಆವಿಷ್ಕರಿಸಿದ್ದಾರೆ. ಒಂದು ಬಾರಿ ಜಾರ್ಜ್ ಮಾಡಿದರೆ 70 ಕಿ.ಮೀ ಪ್ರಯಾಣ ಮಾಡಬಹುದಾಗಿದೆ. 10 -30 ಪ್ರಯಾಣಿಕರನ್ನ ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ.  ಇದು ಡ್ರೈವರ್ ಲೆಸ್(ಸ್ವಯಂ ಚಾಲಿತ) ಬಸ್ ಅನ್ನೋದು ಇನ್ನೊಂದು ವಿಶೇಷ.

ಇದನ್ನೂ ಓದಿ: ಹೊಸ ವರ್ಷದಲ್ಲಿ ಎಪ್ರಿಲಿಯಾ 125 ಸಿಸಿ ಸ್ಕೂಟರ್ ಬಿಡುಗಡೆ!

ಜಿಪಿಎಸ್ ಹಾಗೂ ಬ್ಲೂಟೂಟ್ ನ್ಯಾವಿಗೇಶನ್ಸ ವೈಯರ್‌ಲೆಸ್ ಸಿಗ್ನಲ್, ಅಲ್ಟ್ರಾ ಸಾನಿಕ್, ಇನ್ಫ್ರಾ ರೆಡ್ ಸೆನ್ಸಾರ್ ತಂತ್ರಜ್ಞಾನ ಬಳಸಲಾಗಿದೆ. ನೂತನ ಬಸನ್ನ ಇಂಡಿಯಾ ಸೈನ್ಸ್ ಕಾನ್ಫೆರನ್ಸ್(ISC) ಎಕ್ಸೋಪದಲ್ಲಿ ಪ್ರದರ್ಶಿಸಲಾಗಿದೆ. ಈ ಪ್ರದರ್ಶನವನ್ನ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.