ಮೊದಲ ಫೆರಾರಿ ಕಾರು 25 ವರ್ಷಗಳ ಬಳಿಕ ಹರಾಜು-ಬೆಲೆ 41 ಕೋಟಿಯಿಂದ ಆರಂಭ!

ಫೆರಾರಿಯ ಮೊದಲ 275 GTB ಕಾರು ಇದೀಗ ಹರಾಜಿಗಿಡಲಾಗಿದೆ. ಬರೋಬ್ಬರಿ 25 ವರ್ಷಗಳ ಬಳಿಕ ಈ ಕಾರು ಮತ್ತೆ ಕಾಣಿಸಿಕೊಂಡಿದೆ. ಹರಾಜು ಪ್ರಾರಂಭ ಬೆಲೆ ಎಷ್ಟು? ಈ ಕಾರಿನ ವಿಶೇಷತೆ ಏನು? ಇಲ್ಲಿದೆ ನೋಡಿ.

After 25 years First Ferrari 275 GTB car to be auctioned Soon

ಇಟೆಲಿ(ಜ.05): ಮೊದಲ ಫೆರಾರಿ 275 GTB ಕಾರು ಹರಾಜಿಗೆ ಇಡಲಾಗಿದೆ. 1964 ರಲ್ಲಿ ಫೆರಾರಿ 275 GTB ಮಾರುಕಟ್ಟೆ ಪ್ರವೇಶಿಸಿತ್ತು. ಇದೀಗ 25 ವರ್ಷಗಳ ಬಳಿಕ ಮೊದಲ ಫೆರಾರಿ 275 GTB ಕಾರು ಹರಾಜಾಗಲಿದೆ. ಜನವರಿ 18 ಹಾಗೂ 19 ರಂದು ನಡೆಯಲಿರುವ ಸ್ಕಾಟ್ಸ್‌ಡೇಲ್ ಆಕ್ಷನ್‌ನಲ್ಲಿ ಇತಿಹಾಸ ರಚಿಸಲು ಸಜ್ಜಾಗಿದೆ.

After 25 years First Ferrari 275 GTB car to be auctioned Soon

ಇದನ್ನೂ ಓದಿ: ಹೊಸ ವರ್ಷಕ್ಕೆ ಬಂಪರ್ ಆಫರ್- ಮಹೀಂದ್ರ ಕಾರುಗಳ ಮೇಲೆ ಭಾರಿ ಡಿಸ್ಕೌಂಟ್!

ಮೊದಲ ಫೆರಾರಿ 275 GTB ಕಾರು 41.71 ಕೋಟಿಯಿಂದ 55.62 ಕೋಟಿ ರೂಪಾಯಿ ರೂಪಾಯಿಗೆ ಹರಾಜಾಗುವ ಸಾಧ್ಯತೆ ಇದೆ. ಪ್ರೋಟೋಟೈಪ್ ಕಾರು ನಿರ್ಮಿಸಿದ ಫೆರಾರಿ 1966ರ ಮೋಂಟೋ ಕಾರ್ಲೋ ಕಾರು ರೇಸ್‌ನಲ್ಲಿ ಸ್ಪರ್ಧಿಸಿತ್ತು. ಇದು ಫೆರಾರಿ ಕಂಪೆನಿಯ ಸ್ವತಂತ್ರ ಸಸ್ಪೆಶನ್ ಹೊಂದಿದ ಮೊತ್ತ ಮೊದಲ ರೋಡ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

After 25 years First Ferrari 275 GTB car to be auctioned Soon

ಇದನ್ನೂ ಓದಿ: ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ಸರ್ಕಾರದಿಂದ ಮಾರುತಿ ಡಿಸೈರ್ ಕಾರು!

ಫೆರಾರಿ 275 GTB ಕಾರು 3.3 ಲೀಟರ್ ಟಿಪೋ 213 V-12 ಎಂಜಿನ್ ಹೊಂದಿದೆ. 5 ಸ್ವೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್, ಹಾಗೂ ನಾಲ್ಕು ಇಂಡಿಪೆಂಡೆಂಟ್ ಸಸ್ಪೆಶನ್ ಹೊಂದಿದೆ. ಇದೀಗ ಈ ಮೊದಲ ರೇಸ್ ಕಾರು ಹರಾಜಿನಲ್ಲಿ ಇತಿಹಾಸ ರಚಿಸಲಿದೆ ಎಂದೇ ಹೇಳಲಾಗುತ್ತಿದೆ.

Latest Videos
Follow Us:
Download App:
  • android
  • ios