ಕೊಚ್ಚಿ(ಆ.21); ಅತ್ಯುತ್ತಮ ಗುಣಮಟ್ಟ, 5 ಸ್ಟಾರ್ ಸೇಫ್ಟಿ, ಇಂಧನ ದಕ್ಷತೆ ಸೇರಿದಂತೆ ಅತ್ಯುತ್ತಮ ವಾಹನ ಬಿಡುಗಡೆ ಮಾಡುತ್ತಿರುವ ಭಾರತದ ಮಹೀಂದ್ರ ಇದೀಗ ಹೊಚ್ಚ ಹೊಸ ಥಾರ್ SUV ಅನಾವರಣ ಮಾಡಿ ಎಲ್ಲರ ಗಮನಸೆಳೆದಿದೆ. ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ, ಬಾಲಿವುಡ್ ನಟ ನಟಿಯರು ಸೇರಿದಂತೆ ಹಲವರು ನೂತನ ಥಾರ್ ಕಾರಿನ ವಿನ್ಯಾಸ, ಪವರ್ ಸೇರಿದಂತೆ ಸಂಪೂರ್ಣ ಕಾರಿಗೆ ಮನಸೋತಿದ್ದಾರೆ. ಇದೀಗ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಥಾರ್ SUV ವಾಹನದ ಮೋಡಿಗೆ ಒಳಗಾಗಿದ್ದಾರೆ. 

ಆತ್ಮನಿರ್ಭರ್‌ ಭಾರತಕ್ಕೆ ಪುಷ್ಠಿ ನೀಡಿದ ನೂತನ ಮಹೀಂದ್ರ ಥಾರ್!

10 ವರ್ಷಗಳ ಬಳಿಕ ಥಾರ್ ಹೊಸ ಅವತಾರದಲ್ಲಿ ಅನಾವರಣ ಮಾಡಲಾಗಿದೆ. ಆಕ್ಟೋಬರ್ 2 ರಂದು ನೂತನ ಥಾರ್ ಬಿಡುಗಡೆ ಮಾಡಲಿದೆ. ಹಲವರು ತಾವು ಥಾರ್ ವಾಹನ ಚಲಾಯಿಸಲು ಉತ್ಸುಕರಾಗಿದ್ದಾರೆ. ಸೆಲೆಬ್ರೆಟಿಗಳು ಥಾರ್ ವಾಹನ ಖರೀದಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಇದರ ನಡುವೆ ನಟ ಪೃಥ್ವಿರಾಜ್ ನೂತನ ಥಾರ್ ವಾಹನ ಚಾಲನೆ ಅನುಭವ ಪಡೆದಿಕೊಂಡಿದ್ದಾರೆ. ಥಾರ್ ವಾಹನ ಚಲಾಯಿಸಿದ ಬಳಿಕ ಇದೀಗ ಖರೀದಿಗೆ ಆಸಕ್ತಿ ತೋರಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಹೊಚ್ಚ ಹೊಸ ಮಹೀಂದ್ರ ಥಾರ್ ಅನಾವರಣ!

ಚಾಲನೆ ಬಳಿಕ ಥಾರ್ ಕುರಿತು ಮೆಚ್ಚುಗೆ ಮಾತುಗಳನ್ನಾಡಿರುವ ಪೃಥ್ವಿರಾಜ್, ಅತ್ಯುತ್ತಮ ಡಿಸೈನ್, ಉತ್ತಮ ಚಾಲನೆ ಅನುಭವ ನೀಡುವ ಥಾರ್ ವಾಹನ್ನು ಶ್ಲಾಘಿಸಿದ್ದಾರೆ.  ಹೊಚ್ಚ ಹೊಸ ಮಹೀಂದ್ರ ಥಾರ್ ವಾಹನ ಚಲಾಯಿಸುವ ಅವಕಾಶ ಸಿಕ್ಕಿತ್ತು. ಡಿಸೈನ್ ಕುರಿತು ಚರ್ಚೆಗಳಾಗುವ ಸಾಧ್ಯತೆಗಳಿವೆ. ಆದರೆ ಚಾಲನೆಯಲ್ಲಿ ಉತ್ತಮ ಅನುಭವ ನೀಡುವ ಥಾರ್ ಅತ್ಯುತ್ತಮ ವಾಹನ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಕೈಗೆಟುಕವ ಬೆಲೆ ನಿಗಧಿ ಪಡಿಸುತ್ತಾರೆ ಎಂದು ಭಾವಿಸುತ್ತೇನೆ. ಇದು ಎಂಡೋರ್ಸಮೆಂಟ್ ಟ್ವೀಟ್ ಅಲ್ಲ ಎಂದು ಪೃಥ್ವಿರಾಜ್ ಟ್ವೀಟ್ ಮಾಡಿದ್ದಾರೆ.

 

ಮಹೀಂದ್ರ ಥಾರ್ ಕುರಿತು ಈಗಾಗಲೇ ಗ್ರಾಹಕರು ಡೀಲರ್ ಬಳಿ ವಿಚಾರಿಸುತ್ತಿದ್ದಾರೆ. ಆನ್‌ಲೈನ್ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ನೂತನ ಮಹೀಂದ್ರ ಥಾರ್ ಹೊಸ ಸಂಚಲ ಮೂಡಿಸುವ ಎಲ್ಲಾ ಸಾಧ್ಯತೆಗಳಿವೆ.