ವಿಶಾಖಪಟ್ಟಣಂ(ಏ.01): ಸೌತ್ ಕೊರಿಯಾ ಆಟೋಮೊಬೈಲ್ ಕಂಪನಿ ಕಿಯಾ ಮೋಟಾರ್ಸ್ ಭಾರತದಲ್ಲಿ ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ. ಈ ವರ್ಷದ ಅಂತ್ಯದಲ್ಲಿ ಕಿಯಾ ಮೋಟಾರ್ಸ್ ಕಾರುಗಳು ಭಾರತದ ರಸ್ತೆಗಳಲ್ಲಿ ಓಡಾಟ ಶುರುಮಾಡಲಿದೆ. ಇದೀಗ ಕಿಯಾ ಮೋಟಾರ್ಸ್ ಲೋಕಸಭಾ ಚುನಾವಣೆಯ ವಸ್ತುವಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು , ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ಕಿಯಾ ಮೋಟಾರ್ಸ್ ಎಳೆದು ತಂದಿದ್ದಾರೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಅಂಬಾಸಿಡರ್ ಕಾರು!

ಕಿಯಾ ಮೋಟಾರ್ಸ್ ಆಂಧ್ರಪ್ರದೇಶದಲ್ಲಿ ಕಾರು ಘಟಕ ಸ್ಥಾಪಿಸಿದ್ದು ಈಗಾಗಲೇ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. ಲೋಕಸಭಾ ಚುನಾವಣೆ ವೇಳೆ ಸಿಎಂ ಚಂದ್ರಬಾಬು ನಾಯ್ಡು,  ಕಿಯಾ ಮೋಟಾರ್ಸ್ ಆಂಧ್ರದತ್ತ ಮುಖಮಾಡಲು ಪ್ರಧಾನಿ ನರೇಂದ್ರ ಮೋದಿ ಹಿಟ್ಲರ್ ನೀತಿ ಹಾಗೂ ಬೆದರಿಕೆ ಕಾರಣ ಎಂದಿದ್ದಾರೆ. ಮೋದಿಯಿಂದಾಗಿ ಕಿಯಾ ಮೋಟಾರ್ಸ್ ಗುಜರಾತ್ ಬಿಟ್ಟು ಶಾಂತಿ ಹಾಗೂ ನೆಮ್ಮದಿಯ ರಾಜ್ಯ ಆಯ್ಕೆ ಮಾಡಿಕೊಂಡಿತು ಎಂದಿದ್ದಾರೆ.

ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

ಆಂಧ್ರಪ್ರದೇಶದ ಲೋಕಸಭಾ ಚುನಾವಣೆ ಭಾಷಣದಲ್ಲಿ ಇದೀಗ ಕಿಯಾ ಮೋಟಾರ್ಸ್ ಸದ್ದು ಮಾಡುತ್ತಿದೆ. ಮೋದಿಯಿಂದಲೇ ಆಂಧ್ರಪ್ರದೇಶಕ್ಕೆ ಕಿಯಾ ಮೋಟಾರ್ಸ್ ಬಂದಿದೆ. ಇದಕ್ಕೆ ಚಂದ್ರಬಾಬು ನಾಯ್ದು ಮೋದಿಗೆ ಧನ್ಯವಾದ ಹೇಳಬೇಕು ಎಂದು YSR ಕಾಂಗ್ರೆಸ್ ಪಾರ್ಟಿ ನಾಯಕ ಜಗನ್‌ಮೋಹನ್ ರೆಡ್ಡಿ ಹೇಳಿದ್ದರು. ಇದಕ್ಕೆ ತಿರುಗೇಟು ನಾಯ್ಡು ನೀಡಿರೋ ತಿರುಗೇಟು ಕಿಯಾ ಮೋಟಾರ್ಸ್ ನಿದ್ದೆಗೆಡಿಸಿದೆ.