ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಅಂಬಾಸಿಡರ್ ಕಾರು!

ಭಾರತದ ಅಂಬಾಸಿಡರ್ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಅಂಬಾಸಿಡರ್ ಕಾರು ಎಲೆಕ್ಟ್ರಿಕ್ ಕಾರಾಗಿ ಬದಲಾಗಲಿದೆ. ದಶಕಗಳ ಕಾಲ ಭಾರತದಲ್ಲಿ ಅಧಿಪತ್ಯ ಸಾಧಿಸಿದ್ದ ಅಂಬಾಸಿಡರ್ ಇದೀಗ ಮತ್ತೆ ಭಾರತದ ರಸ್ತೆಗಳಲ್ಲಿ ರಾರಾಜಿಸಲಿದೆ. ಇಲ್ಲಿದೆ ಹೆಚ್ಚಿನ ವಿವರ.
 

PSA Peugeot Citroen group will launch Hindustan Ambassador car

ನವದೆಹಲಿ(ಏ.01): ಹಿಂದೂಸ್ಥಾನ್ ಮೋಟಾರ್ಸ್ ಕಂಪನಿಯ ಅಂಬಾಸಿಡರ್ ಕಾರು ದಶಕಗಳ ಭಾರತದಲ್ಲಿ ರಾಜನಾಗಿ ಮೆರೆದಾಡಿತ್ತು. ಭಾರತದಲ್ಲಿ ದಶಕಗಳ ಹಿಂದಿದ್ದ ಹಲವು ಕಾರುಗಳು ಹೊಸ ಅವತಾರದಲ್ಲಿ ಮತ್ತೆ ರಸ್ತೆಗಿಳಿದಿದೆ. ಇದೀಗ ಎಲ್ಲರ ಪ್ರಶ್ನೆ, ಒಂದು ಕಾಲದಲ್ಲಿ ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿದ್ದ, ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳ ವಾಹನವಾಗಿ ಗುರುತಿಸಿಕೊಂಡಿದ್ದ ಅಂಬಾಸಿಡರ್ ಮತ್ತೆ ರಸ್ತೆಗಿಳಿಯುತ್ತಾ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ವಾಜಪೇಯಿ ಕಾಲದಲ್ಲಿ ಪ್ರಧಾನಿಗೆ ಅಂಬಾಸಿಡರ್‌ನಿಂದ BMW ಕಾರು 

ಭಾರತದ ಅಂಬಾಸಿಡರ್ ಕಾರು ಹೊಸ ಅವತಾರದಲ್ಲಿ ಮತ್ತೆ ರಸ್ತೆಗಳಿಯುತ್ತಿದೆ. ವಿಶೇಷ ಅಂದರೆ ನೂತನ ಅಂಬಾಸಿಡರ್ ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗಲಿದೆ. ಸಿಕೆ ಬಿರ್ಲಾ ಗ್ರೂಪ್ ಒಡೆತನದಲ್ಲಿದ್ದ ಹಿಂದೂಸ್ತಾನ್ ಮೋಟಾರ್ಸ್ ಕಂಪೆನಿಯಿಂದ 2017ರಲ್ಲಿ ಫ್ರಾನ್ಸ್‌ನ ಫ್ಯುಗಾಟ್ ಕಂಪೆನಿ ಅಂಬಾಸಿಡರ್ ಬ್ರಾಂಡ್ ಖರೀದಿಸಿದೆ. 80 ಕೋಟಿ ರೂಪಾಯಿ ನೀಡಿದ ಅಂಬಾಸಿಡರ್ ಬ್ರ್ಯಾಂಡ್ ನೇಮ್ ಖರೀದಿಸಿತ್ತು. ಇದೀಗ ಅಂಬಾಸಿಡರ್ ಬ್ರ್ಯಾಂಡ್ ಹೆಸರಲ್ಲಿ ಫ್ಯುಗಾಟ್ ನೂತನ ಕಾರನ್ನು ಬಿಡುಗಡೆ ಮಾಡಲಿದೆ.

ಇದನ್ನೂ ಓದಿ:ಆಟಿಕೆ ಕಾರಿನಲ್ಲಿ ಮುಖ್ಯ ರಸ್ತೆಗೆ ಬಂದ ಪುಟಾಣಿ- ಕಕ್ಕಾಬಿಕ್ಕಿಯಾದ ಪೊಲೀಸ್!

ನೂತನ ಅಂಬಾಸಿಡರ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಮಾತ್ರ ಲಭ್ಯವಿದೆ. ಅಂಬಾಸಿಡರ್ ಕಾರಿಗೆ ಭಾರತದಲ್ಲಿ ವಿಶೇಷ ಮನ್ನಣೆ ಇದೆ. ಹೀಗಾಗಿ ಹೊಸ ಅವತಾರದಲ್ಲಿ ಅಂಬಾಸಿಡರ್ ಕಾರನ್ನು ಬಿಡುಗಡೆ ಮಾಡಿದರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ. 2023ರ ವೇಳೆಗೆ ನೂತನ ಅಂಬಾಸಿಡರ್ ಕಾರು ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿದೆ. ತಮಿಳುನಾಡಿನಲ್ಲಿ ನೂತನ ಅಂಬಾಸಿಡರ್ ಕಾರು ಉತ್ಪಾದನೆಯಾಗಲಿದೆ. ಇದಕ್ಕಾಗಿ 700 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿದೆ. ನೂತನ ಅಂಬಾಸಿಡರ್ ಕಾರು ಹಳೇ ಮಾಡೆಲ್‌ನಲ್ಲೇ ಇರುತ್ತಾ? ಅಥವಾ ಹೊಸ ವಿನ್ಯಾಸದಲ್ಲಿ ಬಿಡುಗಡೆಯಾಗುತ್ತಾ ಅನ್ನೋದು ಕಂಪನಿ ಬಹಿರಂಗ ಪಡಿಸಿಲ್ಲ.

Latest Videos
Follow Us:
Download App:
  • android
  • ios