ಮುಂಬೈ(ಆ.31): ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ ಇದೀಗ ಥಾರ್  ಸ್ಪೆಷಲ್ ಎಡಿಶನ್ ಜೀಪನ್ನು ಉಡುಗೊರೆ ನೀಡೋ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಉದಯಪುರದ ಮಹಾರಾಜ ಲಕ್ಷರಾಜ್ ಸಿಂಗ್ ಮೇವರ್ಗೆ  ಆನಂದ್ ಮಹೀಂದ್ರ ಥಾರ್ ಜೀಪ್ ನೀಡಿದ್ದಾರೆ. ಸ್ವತಃ ಆನಂದ್ ಮಹೀಂದ್ರ ಜೀಪ್ ಕೀ ಹಸ್ತಾಂತರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಕಾರು ಗಿಫ್ಟ್ ಕೇಳಿದ ಅಭಿಮಾನಿ; ಮಹೀಂದ್ರ ಉತ್ತರಕ್ಕೆ ಕಕ್ಕಾಬಿಕ್ಕಿ!

ಉದಯಪುರದ ಮೇವಾರ್ ರಾಜಮನೆತನಕ್ಕೆ ಕಾರು ಜೀಪುಗಳ ಮೇಲೆ ಹೆಚ್ಚಿನ ವ್ಯಾಮೋಹವಿದೆ. 20 ವರ್ಷಗಳ ಹಿಂದೆ ಉದಯಪುರದಲ್ಲಿ ವಿಂಟೇಜ್ ಕಾರುಗಳ ಮ್ಯೂಸಿಯಂ ತೆರೆದು ಗತಕಾಲದ ಕಾರುಗಳಿಂದ ಹಿಡಿದು ಆಧುನಿಕ ಕಾರುಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಆನಂದ್ ಮಹೀಂದ್ರ ಥಾರ್ 700 ಜೀಪ್ ನೀಡೋ ಮೂಲಕ, ಮೇವಾರ್ ರಾಜಮನೆತನದ ಮ್ಯೂಸಿಯಂಗೆ ಮತ್ತೊಂದು ವಾಹನ ಸೇರಿಕೊಂಡಿದೆ. 

 

ಇದನ್ನೂ ಓದಿ: ಮಹೀಂದ್ರ ಮಾಲೀಕ ಆನಂದ್ ಬಳಿ ಇದೆ 5 SUV ಕಾರು!

ಮೇವಾರ್ ರಾಜಮನೆತನ ಭಾರತದ ಶ್ರೀಮಂತ ರಾಜಮನೆತನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 1911ರಲ್ಲೇ ಮೇವಾರ್ ರಾಜಮನೆತನ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿತ್ತು.  ಇದೀಗ ಇದೇ ರಾಜ ಕಟುಂಬಕ್ಕೆ ಆನಂದ್ ಮಹೀಂದ್ರ ಥಾರ್ ಜೀಪ್ ನೀಡಿದ್ದಾರೆ. ಆನಂದ್ ಮಹೀಂದ್ರ ನೀಡಿರುವ ಥಾರ್ 700 ಲಿಮಿಟೆಡ್ ಎಡಿಶನ್ ಜೀಪ್. ಈ ಜೀಪ್ ಬೆಲೆ 9.99 ಲಕ್ಷ ರೂಪಾಯಿಂದ ಆರಂಭವಾಗಲಿದೆ(ಎಕ್ಸ್ ಶೋ ರೂಂ).