ಮುಂಬೈ(ಆ.17): ಮಹೀಂದ್ರ & ಮಹೀಂದ್ರ ಆಟೋಮೊಬೈಲ್ ಕಂಪನಿ  ಮಾಲೀಕ ಆನಂದ್ ಮಹೀಂದ್ರ ಕಾರು ಬಿಡುಗಡೆ ಮಾಡೋ ಮೂಲಕ ಮಾತ್ರವಲ್ಲ, ಟ್ವೀಟ್ ಮೂಲಕವೂ ಸದಾ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಆನಂದ್ ಮಹೀಂದ್ರ ಹಲವು ವಿಚಾರಗಳ ಕುರಿತು ಬೆಳುಕ ಚೆಲ್ಲಿದ್ದಾರೆ. ಇಷ್ಟೇ ಅಲ್ಲ ತಮ್ಮ ಪ್ರತಿಕ್ರಿಯೆ ಮೂಲಕವೂ ಪ್ರತಿ ಬಾರಿ ದೇಶದ ಗಮನ ಸೆಳೆದಿದ್ದಾರೆ. ಇದೀಗ ಅಭಿಮಾನಿಗೆ ಉತ್ತರ ನೀಡೋ ಮೂಲಕ ಮತ್ತೆ ಸದ್ದು ಮಾಡಿದ್ದಾರೆ.

ಇದನ್ನೂ ಓದಿ: ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು!

ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ ಅಭಿಮಾನಿಯೊರ್ವ ಟ್ವೀಟ್ ಮೂಲಕ ತನ್ನ ಆಸೆ ಪೂರೈಸಲು ಮನವಿ ಮಾಡಿದ್ದಾನೆ. ನಾನು ನಿಮ್ಮ ಅತಿ ದೊಡ್ಡ ಅಭಿಮಾನಿ. ನನ್ನ ಹುಟ್ಟು ಹಬ್ಬಕ್ಕೆ ಮಹೀಂದ್ರ ಥಾರ್ ಜೀಪ್ ಕೊಡುತ್ತೀರಾ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾನೆ.

 

ಇದನ್ನೂ ಓದಿ: ರಸ್ತೆ ನನ್ನಪ್ಪಂದಲ್ಲ-ಮಹೀಂದ್ರ ಮಾಲೀಕನ ಟ್ವೀಟ್‌ಗೆ ಸುಸ್ತಾದ ಟ್ವಿಟರಿಗ!

ಅಭಿಮಾನಿಗೆ ಪ್ರತಿಕ್ರಿಯೆ ನೀಡಿರುವ ಮಹೀಂದ್ರ, ಇದು ಅತಿಯಾದ ಆತ್ಮವಿಶ್ವಾಸವೋ ಅಥವಾ ಅಭಿಮಾನವೋ, ಪ್ರೀತಿಸಬೇಕೋ, ದ್ವೇಷಿಸಬೇಕೋ? ಆದರೆ ನೀವೆಲ್ಲಾ ಅಭಿಮಾನಿ ವಿಪುಲ್‌‌ನನ್ನು ಮೆಚ್ಚಲೇಬೇಕು. ಈತನಿಗೆ ನನ್ನ ಕಡೆಯಿಂದ ಫುಲ್ ಮಾರ್ಕ್ಸ್. ಆದರೆ ವಿಪುಲ್ ನಿಮ್ಮ ಮನವಿಗೆ ನಾನು ಸ್ಪಂದಿಸಲು ಸಾಧ್ಯವಿಲ್ಲ. ಯಾಕೆಂದರೆ ನನ್ನ ಉದ್ಯಮ ಮುಚ್ಚಬೇಕಾದಿತು ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ: ಅಡಿಕೆ ಮರ ಏರಲು ಬಂತು ಹೈಟೆಕ್ ಯಂತ್ರ, ಭಟ್ಟರ ಸಂಶೋಧನೆಗೆ ಮಹೀಂದ್ರಾ ಮೆಚ್ಚುಗೆ

ಆನಂದ್ ಮಹೀಂದ್ರ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಮಾಲೀಕರಾಗಿ ಸಣ್ಣ ಸಣ್ಣ ವಿಚಾರಗಳಲ್ಲೂ ಖುಷಿ ಕಾಣುತ್ತಿರುವ ಆನಂದ್ ಮಹೀಂದ್ರಾ ನಿಜಕ್ಕೂ ಶ್ರೇಷ್ಠ ಎಂದಿದ್ದಾರೆ. ಅದ್ಭುತ ಪ್ರತಿಕ್ರಿಯೆ ಮೂಲಕ ಮತ್ತೆ ಸಿಕ್ಸರ್ ಸಿಡಿಸಿದ್ದೀರಿ ಎಂದು ಟ್ವಿಟರಿಗರು ಪ್ರತಿಕ್ರಿಯೆಸಿದ್ದಾರೆ.