ಮುಂಬೈ(ಸೆ.17): ಮಹೀಂದ್ರ ಆಟೋಮೊಬೈಲ್ ಕಂಪನಿ ಮಾಲೀಕ ಆನಂದ್ ಮಹೀಂದ್ರ ವಾಹನ ಉತ್ಪಾದನೆ, ತಂತ್ರಜ್ಞಾನ, ಎಂಜಿನ್‌ನಲ್ಲಿ ಮಾತ್ರವಲ್ಲ, ಟ್ವಿಟರ್‌ನಲ್ಲೂ ಆನಂದ್ ಮಹೀಂದ್ರ  ಪರಿಣಿತರಾಗಿದ್ದಾರೆ. ಮಹೀಂದ್ರ ಪ್ರತಿ ಟ್ವೀಟ್ ದೇಶದಲ್ಲಿ ಸಂಚಲನ ಮೂಡಿಸಿದೆ. ಇದೀಗ ಆನಂದ್ ಮಹೀಂದ್ರ ಮತ್ತೆ ಟ್ವಿಟರ್‌ನಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಇಷ್ಟೇ ಅಲ್ಲ ಈ ಫೋಟೋಗೆ ಕಾಪ್ಶನ್ ನೀಡಿ ಎಂದಿದ್ದಾರೆ. 

 

ಇದನ್ನೂ ಓದಿ: ಪ್ರವಾಹದಲ್ಲಿ ಸಿಕ್ಕಿಬಿದ್ದ ಜಾಗ್ವಾರ್, ರಸ್ತೆ ದಾಟಿದ ಬೊಲೆರೋ: ಮಹೀಂದ್ರಾ ಟ್ವೀಟ್ ವೈರಲ್!

ಅನಂದ್ ಮಹೀಂದ್ರ ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಉತ್ತರಗಳ ಸುರಿಮಳೆಯೇ ಹರಿದು ಬಂದಿದೆ. ಸೆ.17 ರಂದು ಟ್ವೀಟಿ ಮಾಡಿರುವ ಮಹೀಂದ್ರ ನಾಳೆ(ಸೆ.18) ಬೆಳಗ್ಗೆ 10 ಗಂಟೆಯವರೆಗೆ ಕಾಪ್ಶನ್ ನೀಡಲು ಸಮಯವಕಾಶವಿದೆ ಎಂದಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಆನಂದ್ ಮಹೀಂದ್ರ ಊಹಿಸಿದ ರೀತಿಯಲ್ಲಿ ಪ್ರತಿಕ್ರಿಯೆ ಬಂದಿದೆ. ಕೆಲವು ಕಾಪ್ಶನ್‌ಗಳು ಅತ್ಯುತ್ತಮವಾಗಿದೆ. ಈ ಪೋಟೋ ದೆಹಲಿಯಲ್ಲಿ ವಾಹನಗಳಿಗೆ ಜಾರಿ ಮಾಡಿರುವ  ಸಮ-ಬೆಸ ಸಂಖ್ಯೆ ನಿಯಮಕ್ಕೆ ಅನ್ವಯ ಎಂದು ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ.