Asianet Suvarna News Asianet Suvarna News

ಹೊಸ ನಿಯಮ: ಆ್ಯಂಬುಲೆನ್ಸ್‌ಗೆ ಅಡ್ಡ ಬಂದರೆ 10 ಸಾವಿರ ರೂ. ದಂಡ!

ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದಿದೆ. ನೂತನ ನಿಯಮದ ಪ್ರಕಾರ ಆ್ಯಂಬುಲೆನ್ಸ್ ಸೇರಿದಂತೆ ತುರ್ತು ಸೇವೆಗೆ ಅಡ್ಡಿಪಡಿಸಿದರೆ ಬರೋಬ್ಬರಿ 10,000 ರೂಪಾಯಿ ದಂಡ ಕಟ್ಟಬೇಕಾಗುತ್ತೆ, ಎಚ್ಚರ.

Motor Vehicles Bill proposed  10,000 for blocks the path of an ambulance
Author
Bengaluru, First Published Jun 27, 2019, 4:02 PM IST

ನವದೆಹಲಿ(ಜೂ.27): ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈಗಾಗಲೇ ಸಚಿವ ಸಂಪುಟದ ಅನುಮೋದನೆ ಕೂಡ ಸಿಕ್ಕಿದೆ. ಪ್ರಮುಖವಾಗಿ ರಸ್ತೆ ನಿಯಮ ಉಲ್ಲಂಘನೆ ದಂಡ 10 ಪಟ್ಟು ಹೆಚ್ಚಿಸಲಾಗಿದೆ. ನೂತನ ನಿಯಮದಲ್ಲಿ ಆ್ಯಂಬುಲೆನ್ಸ್ ವಾಹನಕ್ಕೆ ಅಡ್ಡಿಪಡಿಸಿದರೆ ಬರೋಬ್ಬರಿ 10,000 ರೂಪಾಯಿ ದಂಡ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ- ದಂಡದ ಮೊತ್ತ ಡಬಲ್, ಇಲ್ಲಿದೆ ಫುಲ್ ಲಿಸ್ಟ್!

ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ರಾಜ್ಯಸಭೆ ಅಂಕಿತ ಬಾಕಿ ಇದೆ. ಶೀಘ್ರದಲ್ಲೇ ತಿದ್ದುಪಡಿಯೊಂದಿಗೆ ಮೋಟಾರು ವಾಹನ ಕಾಯ್ದೆ ಜಾರಿಯಾಗಲಿದೆ. ತಿದ್ದುಪಡಿ ಮಾಡಲಾಗಿರುವ ನಿಯಮಗಳಲ್ಲಿ ಇದೀಗ  ಆ್ಯಂಬುಲೆನ್ಸ್ ವಾಹನಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಮುಂದಾಗಿದೆ. ತುರ್ತು ಸೇವೆ ವಾಹನದ  ಮುಂದೆ ಚಲಿಸುವುದು, ಅಡ್ಡಿಪಡಿಸುವುದು ಮಾಡಿದರೆ  10,000 ರೂಪಾಯಿ  ದಂಡ ಕಟ್ಟಬೇಕಾಗುತ್ತೆ.

ಇದನ್ನೂ ಓದಿ: ಮಾರುತಿ ಸುಜುಕಿ-ಬ್ಯಾಂಕ್ ಆಫ್ ಬರೋಡ ಒಪ್ಪಂದ-ಕಾರು ಖರೀದಿ ಇನ್ನು ಸುಲಭ

ಆ್ಯಂಬುಲೆನ್ಸ್ ವಾಹನದ ಹಿಂಭಾಗದಲ್ಲಿ ಚಲಿಸುವುದು ಕೂಡ ನಿಯಮ ಬಾಹಿರ. ಹೀಗಾಗಿ ತಿದ್ದುಪಡಿ ನಿಯಮಗಳ ಕುರಿತು ಎಚ್ಚರವಹಿಸಿವುದು ಅಗತ್ಯ. ನಿಯಮ ಉಲ್ಲಂಘಿಸಿದರೆ  ದೊಡ್ಡ ಮೊತ್ತವನ್ನು ದಂಡದ ರೂಪದಲ್ಲಿ ಕಟ್ಟಬೇಕಾಗುತ್ತೆ.

Follow Us:
Download App:
  • android
  • ios