ಮಾರುತಿ ಸುಜುಕಿ-ಬ್ಯಾಂಕ್ ಆಫ್ ಬರೋಡ ಒಪ್ಪಂದ-ಕಾರು ಖರೀದಿ ಇನ್ನು ಸುಲಭ
ಮಾರುತಿ ಸುಜುಕಿ ಸಂಸ್ಥೆ ಹಾಗೂ ಬ್ಯಾಂಕ್ ಆಫ್ ಬರೋಡ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದಿಂದ ಮಾರುತಿ ಸುಜುಕಿ ಕಾರು ಖರೀದಿ ಈಗ ಸುಲಭವಾಗಿದೆ.
ನವದೆಹಲಿ(ಜೂ.21): ಮಾರುತಿ ಸುಜುಕಿ ಇಂಡಿಯಾ ಹೊಸ ಒಪ್ಪಂದ ಮಾಡಿಕೊಂಡಿದೆ. ಮಾರುತಿ ಸುಜುಕಿ ಕಾರು ಖರೀದಿಸೋ ಗ್ರಾಹಕರಿಗೆ ಹಣಕಾಸು ನೆರವು ನೀಡಲು ಬ್ಯಾಂಕ್ ಆಫ್ ಬರೋಡಾ ಜೊತೆ ಒಪ್ಪಂದ ಮಾಡಿಕೊಂಡಿದೆ. ಇನ್ಮುಂದೆ ಮಾರುತಿ ಸುಜುಕಿ ಸಂಸ್ಥೆಯ ಎಲ್ಲಾ ಕಾರುಗಳ ಖರೀದಿ ವೇಳೆ ಗ್ರಾಹಕರಿಗೆ ಬ್ಯಾಂಕ್ ಆಫ್ ಬರೋಡಾ ಹಣಕಾಸು ನರೆವು ನೀಡಲಿದೆ.
ಇದನ್ನೂ ಓದಿ: ಮಾರುತಿ ಡಿಸೈರ್ BS-VI ಕಾರು ಬಿಡುಗಡೆ- ಬೆಲೆ ಬದಲಾವಣೆ!
ಬ್ಯಾಂಕ್ ಆಫ್ ಬರೋಡ ಜೊತೆಗಿನ ಒಪ್ಪಂದಿಂದ ಕಾರು ಖರೀದಿ ಮತ್ತಷ್ಟು ಸುಲಭವಾಗಲಿದೆ. ಒಪ್ಪಂದ ಬಳಿಕ ಬ್ಯಾಂಕ್ ಆಫ್ ಬರೋಡಾ ಇದೀಗ ಗ್ರಾಹಕರಿಗೆ ಹಲವು ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಕಡಿಮೆ ಬಡ್ಡಿ ದರ, ಗರಿಷ್ಠ ಸಾಲ, ಆನ್ ರೋಡ್ ಹಣಕಾಸು ನೆರವು ನೀಡಲು ಮುಂದಾಗಿದೆ. ಸುಲಭವಾಗಿ ಸಾಲ ಮಂಜೂರು, ಕಡಿಮೆ ದಾಖಲೆ ಪತ್ರಗಳೊಂದಿಗೆ ಹಣಕಾಸು ನೆರವು ನೀಡಲು ಬ್ಯಾಂಕ್ ಆಫ್ ಬರೋಡಾ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: ತಯಾರಾದ ಕಾರು, ಬೈಕ್ ಕೊಳ್ಳುವವರೇ ಇಲ್ಲ!
ಇತ್ತೀಚೆಗಷ್ಟೇ ಬ್ಯಾಂಕ್ ಆಫ್ ಬರೋಡ ಹೊಸ ರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಭಾರತದ ಅತೀ ದೊಡ್ಡ ಕಾರು ತಯಾರಿಕ ಹಾಗೂ ಮಾರಾಟ ಕಂಪನಿ ಮಾರುತಿ ಸುಜುಕಿ ಜೊತೆ ಒಪ್ಪಂದ ಮಾಡಿಕೊಂಡು ಹಲವು ಯೋಜನೆ ಜಾರಿ ಮಾಡುತ್ತಿದೆ.