ನವದೆಹಲಿ(ಜೂ.25): ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದಿ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಇನ್ನು ರಾಜ್ಯಸಭೆಯ ಗ್ರೀನ್ ಸಿಗ್ನಲ್ ಒಂದೆ ಬಾಕಿ. ನೂತನ ನಿಯಮ ಜಾರಿಯಾದರೆ ಟ್ರಾಫಿಕ್  ನಿಯಮ ಉಲ್ಲಂಘನೆ ಕಡಿಮೆಯಾಗಲಿದೆ. ಇಷ್ಟೇ ಅಲ್ಲ ಸಾರ್ವಜನಿಕರಲ್ಲಿ ಜಾಗೃತಿ ಮೂಡಲಿದೆ.

ನೂತನ ನಿಯಮದ ಪ್ರಕಾರ ದಂಡದ ಮೊತ್ತ ಬದಲಾಗಲಿದೆ. ಫೈನ್ ಮೊತ್ತ 10 ಪಟ್ಟು ಹೆಚ್ಚಾಗಲಿದೆ. ಈ ಮೂಲಕ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.

ನಿಯಮ     ಹಳೇ ಫೈನ್ ನೂತನ ಫೈನ್
ಲೈಸೆನ್ಸ್ ಇಲ್ಲದ ವಾಹನ ಚಲಾವಣೆ 500 ರೂ     5,000 ರೂ
ಮೊಬೈಲ್ ಫೋನ್ ಬಳಕೆ 1,000 ರೂ     5,000 ರೂ
ಡ್ರಂಕ್ & ಡ್ರೈವ್ 2,000 ರೂ 10,000 ರೂ
RASH ರ್ಡೈವಿಂಗ್ 1,000 ರೂ     5,000 ರೂ

ಅಪ್ರಾಪ್ತರು ವಾಹನ ಚಲಾಯಿಸಿದರ ವಾಹನದ ಮಾಲೀಕರಿಗೆ  ಜೈಲು ಶಿಕ್ಷೆ ಸೇರಿದಂತೆ ಹಲವು ಟ್ರಾಫಿಕ್ ನಿಯಮದಲ್ಲಿ ತಿದ್ದುಪಡಿ ಮಾಡಲಾಗಿದೆ. ಸಿಂಗ್ನಲ್ ಜಂಪ್, ಒನ್ ವೇ , ನೋ ಪಾರ್ಕಿಂಗ್, ಹೆಲ್ಮೆಟ್ ಸೇರಿದಂತೆ ಎಲ್ಲಾ ದಂಡದ ಮೊತ್ತ 10 ಪಟ್ಟು ಹೆಚ್ಚಾಗಲಿದೆ. ಸಾಮಾನ್ಯವಾಗಿ 100 ರೂಪಾಯಿ ಇರುವ ದಂಡದ ಮೊತ್ತ 1,000 ರೂಪಾಯಿ ಆಗಲಿದೆ.

ದಂಡದ  ಮೊತ್ತ ಏರಿಕೆ ಮಾಡಿರುವುದರಿಂದ ನಿಯಮ ಉಲ್ಲಂಘನೆ ಸಂಖ್ಯೆ ಕಡಿಮೆಯಾಗಲಿದೆ ಅನ್ನೋ ವಾದ ಸರಿಯಾಗಿದೆ. ಆದರೆ ಭ್ರಷ್ಟಾರ ಕೂಡ ಹೆಚ್ಚಾಗಲಿದೆ. ನಿಯಮ ಉಲ್ಲಂಘಿಸಿ 5 ಸಾವಿರ, 10 ಸಾವಿರ ದಂಡ ಕಟ್ಟೊ ಬದಲು ಕಡಿಮೆ ಮೊತ್ತ ಲಂಚ ನೀಡಿ ತಪ್ಪಿಸಿಕೊಳ್ಳೋ ಸಾಧ್ಯತೆ ಕೂಡ ಇದೆ. ಹೀಗಾಗಿ ಈ ನಿಟ್ಟಿನಲ್ಲೂ ಚಿಂತಿಸಬೇಕಿದೆ.