ಹೆಲ್ಮೆಟ್ ಹಾಕದೇ ಬೈಕ್, ಸ್ಕೂಟರ್ ಸ್ಟಾರ್ಟ್ ಮಾಡಬೇಡಿ-ಯಾಕೆ?
ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಹಾಕದೇ ವಾಹನ ಸ್ಟಾರ್ಟ್ ಮಾಡಬೇಡಿ. ಯಾಕೆ ಅನ್ನೋದನ್ನ ಕೇಂದ್ರ ಸಾರಿಗೆ ಸಚಿವಾಲಯ ಅಂಕಿ ಅಂಶದ ಮೂಲಕ ಹೇಳಿದೆ. ಇಲ್ಲಿದೆ ಸಂಪೂರ್ಣ ವಿವರ.
ನವದೆಹಲಿ(ಡಿ.29): ನಿಮ್ಮ ಹತ್ರ ಬೈಕ್ ಅಥವ ಸ್ಕೂಟರ್ ಇದ್ದರೆ, ಇನ್ಮುಂದೆ ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನ ಸ್ಟಾರ್ಟ್ ಮಾಡಬೇಡಿ. ಅದು 5 ನಿಮಿಷದ ದಾರಿಯೇ ಆಗಿರಬಹುದು, ಅಥವಾ ಪೊಲೀಸರಿಲ್ಲದ, ಸಿಗ್ನಲ್ ಇಲ್ಲದ, ಕಾಡು ರಸ್ತೆಯೇ ಆಗಿರಬಹುದು. ಹೆಲ್ಮೆಟ್ ಬಳಕೆ ಖಡ್ಡಾಯ ಮಾಡಿ. ಯಾಕೆ ಅಂತೀರಾ? ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಪ್ರಕಟಿಸಿರೋ ಅಂಕಿ ಅಂಶ ಉತ್ತರ ಹೇಳುತ್ತಿದೆ.
ಇದನ್ನೂ ಓದಿ: ಬಜಾಜ್ ಪಲ್ಸಾರ್‌ಗೆ ಗುಡ್ ಬೈ- TVS ಅಪಾಚೆ ಮೊರೆ ಹೋದ ಬೆಂಗಳೂರು ಪೊಲೀಸ್!
ಭಾರತದಲ್ಲಿ ಶೇಕಡಾ 73ರಷ್ಟು ಬೈಕ್ ಸವಾರರು ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 2017ರ ಅಂಕಿ ಅಂಶವನ್ನ ಕೇಂದ್ರ ಸಾರಿ ಸಚಿವಾಲಯ ಪ್ರಕಟಿಸಿದೆ. 48,746 ಮಂದಿ ಹೆಲ್ಮೆಟ್ ಧರಿಸಿದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 26,896 ಮಂದಿ ಕಾರಿನ ಸೀಟ್ ಬೆಲ್ಟ್ ಹಾಕದ ಪರಿಣಾಮ ಅಪಘಾತದಲ್ಲಿ ಮರಣಹೊಂದಿದ್ದಾರೆ.
ಇದನ್ನೂ ಓದಿ: ಪೊಲೀಸರ ರಣತಂತ್ರ: ರಾಂಗ್ ಸೈಡ್ ಹೋದರೆ ಪಂಚರ್!
ಅಪಘಾತದಲ್ಲಿ ಸಾವನ್ನಪ್ಪಿದ ಶೇಕಡಾ 72.1 ರಷ್ಟು ಮಂದಿ ವಯಸ್ಸು 18 ರಿಂದ 45. 2017ರಲ್ಲಿ ಒಟ್ಟು 4.64 ಲಕ್ಷ ಅಪಘಾತಗಳು ಸಂಭವಿಸಿದೆ. ಇದರಲ್ಲಿ 1.47 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2017ರಲ್ಲಿ ಪ್ರತಿ ದಿನ ಸರಾಸರಿ 98 ಬೈಕ್ ಸವಾರರು ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಮಂಜು ಮುಸುಕಿದ ವಾತಾವರಣದಲ್ಲಿ ಸೇಫ್ ಡ್ರೈವಿಂಗ್- ಇಲ್ಲಿದೆ ಟಿಪ್ಸ್!
ಹೆಲ್ಮೆಟ್, ಸೀಟ್ ಬೆಲ್ಟ್ ಹಾಕಿ ವಾಹನ ಚಲಾಯಿಸಿ. ರಸ್ತೆ ನಿಯಮ ಸರಿಯಾಗಿ ಪಾಲಿಸಿ. ಸಿಗ್ನಲ್, ಒನ್ ವೇ, ವೇಗದ ಮಿತಿ ಎಲ್ಲವನ್ನೂ ಪಾಲಿಸಿದರೆ ಸಮಸ್ಯೆಯಿಂದ ಪಾರಾಗಬಹುದು. ನಿಮ್ಮ ಮಾತ್ರವಲ್ಲ ಇತರರ ಸುರಕ್ಷತೆಯೂ ನಿಮ್ಮ ಕೈಯಲ್ಲಿದೆ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: