ಕಳೆದ 16 ವರ್ಷಗಳಿಂದ ಬೆಂಗಳೂರು ಪೊಲೀಸ್ ಬಜಾಜ್ ಪಲ್ಸಾರ್ ಉಪಯೋಗಿಸುತ್ತಿದ್ದರು. ಇದೀಗ ಪಲ್ಸಾರ್ ಬೈಕ್‌ಗೆ ಗುಡ್ ಬೈ ಹೇಳಿರುವ ಹೊಯ್ಸಳ ಟಿವಿಎಸ್ ಅಪಾಚೆ ಬೈಕ್ ಮೊರೆ ಹೋಗಿದ್ದಾರೆ. ಇಲ್ಲಿದೆ ಹೆಚ್ಚಿನ ವಿವರ.

ಬೆಂಗಳೂರು(ಡಿ.29): ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ವಿಭಾಗವನ್ನ ಬಲಪಡಿಸಲು ಬರೋಬ್ಬರಿ 7.11 ಕೋಟಿ ರೂಪಾಯಿ ವೆಚ್ಚದಲ್ಲಿ 911 ಬೈಕ್ ವಿತರಿಸಿದೆ. TVS ಕಂಪೆನಿಯ ಅಪಾಚೆ RTR 160 ಬೈಕ್ ನೀಡಲಾಗಿದ್ದು, ಅಪರಾಧ ತಡಗೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

Scroll to load tweet…

ಇದನ್ನೂ ಓದಿ: ಮಂಜು ಮುಸುಕಿದ ವಾತಾವರಣದಲ್ಲಿ ಸೇಫ್ ಡ್ರೈವಿಂಗ್- ಇಲ್ಲಿದೆ ಟಿಪ್ಸ್!

ಬೆಂಗಳೂರು ಹೊಯ್ಸಳ ಪೊಲೀಸರ ಬಳಿ ಈಗಾಗಲೇ 272 ನೂತನ ಮಾರುತಿ ಎರ್ಟಿಗಾ ಕಾರು ಬಳಕೆ ಮಾಡುತ್ತಿದ್ದಾರೆ. ಇದರೊಂದಿಗೆ ಅಪಾಚೆ RTR 160 ಬೈಕ್ ಕೂಡ ಪೊಲೀಸ್ ವಿಭಾಗ ಸೇರಿಕೊಂಡಿದೆ. ಸರಗಳ್ಳತನ ಸೇರಿದಂತೆ ಹಲವು ಅಪರಾಧಗಳನ್ನ ತಡೆಯಲು ಬೈಕ್ ಹೆಚ್ಚು ಸಹಕಾರಿಯಾಗಿದೆ. ಹೀಗಾಗಿ ಹೆಚ್ಚುವರಿ ಬೈಕ್ ನೀಡವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ ಕಾರು ಬಿಡುಗಡೆ ದಿನಾಂಕ ಪ್ರಕಟ-ಬೆಲೆ ಎಷ್ಟು?

ಕಳೆದ 16 ವರ್ಷಗಳಿಂದ ಬೆಂಗಳೂರು ಪೊಲೀಸರು ಬಜಾಜ್ ಪಲ್ಸಾರ್ ಬೈಕ್ ಉಪಯೋಗಿಸುತ್ತಿದ್ದರು. ಇದೀಗ ಬಜಾಜ್‌ಗೆ ಗುಡ್ ಬೈ ಹೇಳಿ, TVS ಕಂಪೆನಿಯ ಅಪಾಚೆ ಬೈಕ್ ಮೊರೆ ಹೋಗಿದ್ದಾರೆ. ಬೆಂಗಳೂರು ಪೊಲೀಸರ ಕೈಸೇರಿರುವ ನೂತನ ಅಪಾಚೆ ಬೈಕ್ 159.7 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್, 15 bhp ಹಾಗೂ 13 Nm ಟಾರ್ಕ್ ಉತ್ವಾದಿಸಲಿದೆ. 5 ಗೇರ್ ಬಾಕ್ಸ್ ಹೊಂದಿರುವ ಬೈಕ್‌ಗೆ ಪೊಲೀಸ್ ಸೈರನ್ಸ್, ಮೈಕ್ರೋಫೋನ್, ವಾಕಿ ಟಾಕಿ ಸೇರಿದಂತೆ ಹೆಚ್ಚುವರಿ ಪೊಲೀಸ್ ಸಹಕಾರಿ ಫೀಚರ್ಸ್ ಅಳವಡಿಸಲಾಗಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: