Asianet Suvarna News Asianet Suvarna News

ಪೊಲೀಸರ ರಣತಂತ್ರ: ರಾಂಗ್ ಸೈಡ್ ಹೋದರೆ ಪಂಚರ್!

ರಾಂಗ್ ಸೈಡ್ ಡ್ರೈವ್ ನಿಲ್ಲಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರೆ, ವಾಹನ ಸವಾರರು ಮಾತ್ರ ನಿಲ್ಲಿಸಿಲ್ಲ. ಇದೀಗ ಪೊಲೀಸರು ಹೊಸ ರಣತಂತ್ರ ರೂಪಿಸಿದ್ದಾರೆ. ಈ ಮೂಲಕ ರಾಂಗ್ ಸೈಡ್ ಸವಾರರಿಗೆ ಪಾಠ ಕಲಿಸಲು ಪೊಲೀಸರು ಮುಂದಾಗಿದ್ದಾರೆ.

NOIDA traffic Police fix killer tyres for wrong side drivers
Author
Bengaluru, First Published Dec 29, 2018, 3:56 PM IST

ನೋಯ್ಡಾ(ಡಿ.29): ರಾಂಗ್ ಸೈಡ್, ಒನ್ ವೇಯಲ್ಲಿ ವಾಹನ ಚಲಾಯಿಸುವರಿಗೆ ಪಾಠ ಕಲಿಸಲು ಪೊಲೀಸರು ಪ್ರತಿ ದಿನ ಹೊಸ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ. ಲೈಸೆನ್ಸ್ ಕ್ಯಾನ್ಸಲ್, ಗರಿಷ್ಠ ದಂಡ ಸೇರಿದಂತೆ ಹಲವು ನಿಯಮಗಳನ್ನ ತಿದ್ದುಪಡಿ ಮಾಡಲಾಗಿದೆ. ಆದರೆ ಹೆಚ್ಚಿನವರು ಎಚ್ಚೆತ್ತುಕೊಂಡಿಲ್ಲ. ಇದೀಗ ಪೊಲೀಸರು ರಾಂಗ್ ಸೈಡ್ ಡ್ರೈವರ್ಸ್‌ಗೆ ಹೊರ ರಣತಂತ್ರ ಹೂಡಿದ್ದಾರೆ.

ಇದನ್ನೂ ಓದಿ: ಬಜಾಜ್ ಪಲ್ಸಾರ್‌ಗೆ ಗುಡ್ ಬೈ- TVS ಅಪಾಚೆ ಮೊರೆ ಹೋದ ಬೆಂಗಳೂರು ಪೊಲೀಸ್!

ಪುಣೆ ಬಳಿಕ ಇದೀಗ ನೋಯ್ಡಾದಲ್ಲಿ ರಾಂಗ್ ಸೈಡ್ ಡ್ರೈವ್ ತಪ್ಪಿಸಲು ಟೈಯರ್ ಕಿಲ್ಲರ್ ಅಳವಡಿಸಿದ್ದಾರೆ. ಈ ಟೈಯರ್ ಕಿಲ್ಲರ್ ಹಂಪ್‌ನಿಂದ ರಾಂಗ್ ಸೈಡ್‌ನಲ್ಲಿ ಹೋದವರು ವಾಹನ ಪಂಚರ್ ಆಗೋದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ಪಂಚರ್ ಆದರೆ, ಹೊಸ ಟೈಯರ್ ಹಾಗೂ ಟ್ಯೂಬ್ ಖರೀದಿಸಬೇಕೆ ಹೊರತು ರಿಪೇರಿ ಮಾಡಲು ಸಾಧ್ಯವಿಲ್ಲ.

ಇದನ್ನೂ ಓದಿ: ಕಿಯಾ SUV ಸ್ಪೋರ್ಟೇಜ್ ಕಾರಿನ ಟೀಸರ್ ಬಿಡುಗಡೆ!

ಕೇವಲ 500 ಮೀಟರ್ ದೂರದಲ್ಲಿ ಯೂ ಟರ್ನ್, ಬಲ ತಿರುವು, ಎಡ ತಿರುವುಗಳಿದ್ದರೂ, ಜನರು ರಾಂಗ್ ಸೈಡ್‌ನಲ್ಲೇ ಹೋಗುತ್ತಾರೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹೆಚ್ಚು. ಅದೆಷ್ಟೇ ದಂಡ ವಿಧಿಸಿದರೂ ಇತರರಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಿಲ್ಲರ್ ಟೈಯರ್ ಅಳವಡಿಸಿದ್ದೇವೆ ಎಂದು ನೋಯ್ಡಾ ಟ್ರಾಫಿಕ್ ಎಸ್‌ಪಿ ಅನಿಲ್ ಕುಮಾರ್ ಜಾ ಹೇಳಿದ್ದಾರೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios