MG ಹೆಕ್ಟರ್ 700 ಕಾರು ಮಾರಾಟ; ದೀಪಾವಳಿಗೆ ದಾಖಲೆ!
ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಸೇರಿದಂತೆ ಹೈಯರ್ SUV ಸೆಗ್ಮೆಂಟ್ ಕಾರುಗಳಿಗೆ ಪೈಪೋಟಿ ನೀಡುತ್ತಿರುವ MG ಹೆಕ್ಟರ್ ಕಾರು ಇದೀಗ ದಾಖಲೆ ಬರೆದಿದೆ. ಜೂನ್ ತಿಂಗಳಲ್ಲಿ ಬಿಡುಗಡೆಯಾದ ಹೆಕ್ಟರ್ ಇದೀಗ ದೀಪಾವಳಿ ಹಬ್ಬಕ್ಕೆ ಮಾರಾಟದಲ್ಲಿ ಹೊಸ ಇತಿಹಾಸ ರಚಿಸಿದೆ.
ನವದೆಹಲಿ(ಅ.27): ದೀಪಾವಳಿ ಹಬ್ಬ ಭಾರತದ ಆಟೋಮೊಬೈಲ್ ಕಂಪನಿಗಳ ಮುಖದಲ್ಲಿ ನಗು ತರಿಸಿದೆ. ಕಳೆದೊಂದು ವರ್ಷದಿಂದ ಪಾತಾಳಕ್ಕೆ ಕುಸಿದಿದ್ದ ವಾಹನ ಮಾರಾಟ ಚೇತರಿಕೆ ಕಂಡಿದೆ. ಕೆಲವು ಕಾರುಗಳು ಗರಿಷ್ಠ ಪ್ರಮಾಣದಲ್ಲಿ ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. ಮರ್ಸಡೀಸ್ ಬೆಂಜ್ ಒಂದೇ ದಿನ 600 ಕಾರು ಮಾರಾಟ ಮಾಡಿ ದಾಖಲೆ ಬರೆದಿತ್ತು. ಇದೀಗ MG ಮೋಟಾರ್ಸ್ ಮಾರಾಟದಲ್ಲಿ ದಾಖಲೆ ಬರೆದಿದೆ.
ಇದನ್ನೂ ಓದಿ: ಬಂಪರ್ ಸೇಲ್: ಒಂದೇ ದಿನ 600 ಬೆಂಝ್ ಕಾರು ಸೇಲ್!
MG ಮೋಟಾರ್ಸ್ ಕಂಪನಿಯ ಹೆಕ್ಟರ್ SUV ಕಾರು ಒಂದೇ ದಿನ ಭಾರತದಲ್ಲಿ 700 ಕಾರುಗಳು ಮಾರಾಟವಾಗಿದೆ. ದೆಹಲಿಯ ಒಂದೇ ಡೀಲರ್‌ಬಳಿ 200 ಕಾರುಗಳು ಮಾರಾಟವಾಗಿದೆ. ಬಿಡುಗಡೆಯಾದ ಬಳಿಕ ಅಮೆ ಗತಿಯಲ್ಲಿ ಸಾಗುತ್ತಿದ್ದ ಹೆಕ್ಟರ್ ಮಾರಾಟ ಇದೀಗ ದಾಖಲೆ ಬರೆದಿದೆ.
ಇದನ್ನೂ ಓದಿ: MG ಹೆಕ್ಟರ್ SUV ಕಾರು, ಟಾಟಾ ಹ್ಯಾರಿಯರ್‌ಗಿಂತ ಕಡಿಮೆ ಬೆಲೆ!...
ಜೂನ್ 27 ರಂದು ಹೆಕ್ಟರ್ ಕಾರು ಭಾರತದಲ್ಲಿ ಬಿಡುಗಡೆಯಾಗಿತ್ತು. ಇದುವರೆಗೆ 38,000 ಕಾರುಗಳು ಬುಕಿಂಗ್ ಆಗಿವೆ. ಹೆಕ್ಟರ್ ಕಾರಿನ ಬೆಲೆ 12.18 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭವಾಗಲಿದ್ದು, ಗರಿಷ್ಠ ಬೆಲೆ 16,88 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಹೆಕ್ಟರ್ ಕಾರಿನಲ್ಲಿ 4 ವೇರಿಯೆಂಟ್‌ಗಳು ಲಭ್ಯವಿದೆ. 1.5 ಲೀಟರ್ ಪೆಟ್ರೋಲ್ ಹಾಗೂ 2.0 ಲೀಟರ್ ಡೀಸೆಲ್ ವೇರಿಯೆಂಟ್ ಲಭ್ಯವಿದೆ. ವಿಶೇಷ ಅಂದರೆ ಹೆಕ್ಟರ್ ಪ್ರತಿ ಕಾರು ಮಾರಾಟದಲ್ಲಿನ ಬಂದ ಹಣದ ಒಂದು ಭಾಗವನ್ನು ಒಬ್ಬೊಬ್ಬ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಿದೆ.