Asianet Suvarna News Asianet Suvarna News

MG ಹೆಕ್ಟರ್ SUV ಕಾರು ಬಿಡುಗಡೆ- ಟಾಟಾ ಹ್ಯಾರಿಯರ್‌ಗಿಂತ ಕಡಿಮೆ ಬೆಲೆ!

ಬ್ರಿಟಿಷ್ ಮೂಲದ MG ಹೆಕ್ಟರ್ ಕಾರು ಬಿಡುಗಡೆಯಾಗಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಈ ಕಾರು  ಮಾರುಕಟ್ಟೆ ಪ್ರವೇಶಿಸಿದೆ. ಬಹುನಿರೀಕ್ಷಿತ ಈ ಕಾರಿನ ಬೆಲೆ, ವಿಶೇಷತೆ, ಎಂಜಿನ್ ಸಾಮರ್ಥ್ಯ ಕುರಿತ ಮಾಹಿತಿ ಇಲ್ಲಿದೆ.

Tata harrier competitor MG hector SUV car launched in India
Author
Bengaluru, First Published Jun 27, 2019, 5:59 PM IST
  • Facebook
  • Twitter
  • Whatsapp

ನವದೆಹಲಿ(ಜೂ.27): ಭಾರತದ ಮೊಟ್ಟ ಮೊದಲ ಕನೆಕ್ಟೆಡ್ ಕಾರು ಅನ್ನೋ ಖ್ಯಾತಿಗೆ ಪಾತ್ರವಾಗಿರುವ MG ಹೆಕ್ಟರ್ ಕಾರು ಬಿಡುಗಡೆಯಾಗಿದೆ. ಬ್ರಿಟಿಷ್ ಮೂಲದ MG ಮೋಟಾರ್ಸ್ ಇದೇ ಮೊದಲ ಬಾರಿಗೆ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. 4 ವೇರಿಯೆಂಟ್‌ಗಳಲ್ಲಿ MG ಹೆಕ್ಟರ್ ಕಾರು ಲಭ್ಯವಿದೆ. ಈ ಮೂಲಕ ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಸೇರಿದಂತೆ SUV ಕಾರುಗಳಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ಹೊಸ ನಿಯಮ: ಆ್ಯಂಬುಲೆನ್ಸ್‌ಗೆ ಅಡ್ಡ ಬಂದರೆ 10 ಸಾವಿರ ರೂ. ದಂಡ!

MG ಹೆಕ್ಟರ್ ಕಾರಿನ ಬೆಲೆ 12.18 ಲಕ್ಷ ರೂಪಾಯಿಗಳಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದ್ದು, ಗರಿಷ್ಠ ಬೆಲೆ 16.88 ಲಕ್ಷ ರೂಪಾಯಿ. ಸ್ಟೈಲ್ ,ಸೂಪರ್, ಸ್ಮಾರ್ಟ್ ಹಾಗೂ ಶಾರ್ಪ್ 4 ವೇರಿಯೆಂಟ್‌ಗಳು ಲಭ್ಯವಿದೆ. 

MG ಹೆಕ್ಟರ್ ಬೆಲೆ:

MG ಹೆಕ್ಟರ್     ಸ್ಟೈಲ್ ಸೂಪರ್ ಸ್ಮಾರ್ಟ್ ಶಾರ್ಪ್
ಪೆಟ್ರೋಲ್ MT 12.18 ಲಕ್ಷ ರೂ 12.98ಲಕ್ಷ ರೂ - -
ಪೆಟ್ರೋಲ್ ಹೈಬ್ರಿಡ್ MT   13.58 ಲಕ್ಷ ರೂ 14.68ಲಕ್ಷ ರೂ 15.88 ಲಕ್ಷ ರೂ
ಪೆಟ್ರೋಲ್ DCT     15.28ಲಕ್ಷ ರೂ 16.78ಲಕ್ಷ ರೂ
ಡೀಸೆಲ್  MT 13.18ಲಕ್ಷ ರೂ 14.18ಲಕ್ಷ ರೂ 15.48ಲಕ್ಷ ರೂ 16.88ಲಕ್ಷ ರೂ

MG ಹೆಕ್ಟರ್ ಬಲಿಷ್ಠ ಎಂಜಿನ್ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ವೇರಿಯೆಂಟ್ 1451 ಸಿಸಿ, 1.5 ಲೀಟರ್, 4 ಸಿಲಿಂಡರ್, ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 141 bhp ಪವರ್ ಹಾಗೂ 250 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು ಡೀಸೆಲ್ ವೇರಿಯೆಂಟ್ 1956 cc, 2.0 ಲೀಟರ್, 168 bhp ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: ಹ್ಯುಂಡೈ ಕ್ರೆಟಾ ಕಾರಿನೊಳಗೆ ಮಗು ಲಾಕ್- 2 ಗಂಟೆ ಬಳಿಕ ರಕ್ಷಣೆ!

MG ಹೆಕ್ಟರ್ ಟಾಟಾ ಹ್ಯಾರಿಯರ್ ಕಾರಿಗಿಂತ ಗಾತ್ರದಲ್ಲೂ ದೊಡ್ಡದಿದೆ. ಹೆಕ್ಟರ್ ಕಾರು 4655 mm ಉದ್ದ, 1835 mm ಅಗಲ, 1760 mm ಎತ್ತರ ಹಾಗೂ 2750 mm ವೀಲ್ಹ್ ಬೇಸ್ ಹೊಂದಿದೆ. ಕಾರಿನಲ್ಲಿ ವಾಯ್ಸ್ ರೆಕಗ್ನೀಶನ್, ನ್ಯಾವಿಗೇಶನ್, ರಿಮೂಟ್ ಲೊಕೇಶನ್,  10.4 ಟಚ್ ಸ್ಕ್ರೀನ್, ಸನ್‌ರೂಫ್ ಸೇರಿದಂತೆ ಹಲವು ಫೀಚರ್ಸ್ ಕಾರಿನಲ್ಲಿದೆ. ಹೀಗಾಗಿ ಇತರ ಕಾರುಗಳಿಗಿಂತ ಹೆಕ್ಟರ್ ಭಿನ್ನವಾಗಿದೆ. 
 

Follow Us:
Download App:
  • android
  • ios