ನವದೆಹಲಿ(ಜೂ.30): ಭಾರತದಲ್ಲಿ MG ಮೋಟಾರ್ಸ್ ನೂತನ ಕಾರು ಬಿಡುಗಡೆ ಮಾಡಿದೆ. MG ಹೆಕ್ಟರ್ SUV ಕಾರು ಲಾಂಚ್ ಮಾಡಿರುವ ಬ್ರಿಟಿಷ್ ಕಂಪನಿ ಹೊಸ ಸಂಚಲನ ಸೃಷ್ಟಿಸಿದೆ. ಟಾಟಾ ಹ್ಯಾರಿಯರ್ ಹಾಗೂ ಜೀಪ್ ಕಂಪಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಈ ಕಾರು ಜೂನ್ 27 ರಂದು ಬಿಡುಗಡೆಯಾಗಿದೆ. ಇದೀಗ MG ಹೆಕ್ಟರ್ ಕಾರಿನ ಬುಕಿಂಗ್ 10,000 ದಾಟಿದೆ.

ಇದನ್ನೂ ಓದಿ: MG ಹೆಕ್ಟರ್ SUV ಕಾರಿನ ಬೆಲೆ ಇಲ್ಲಿದೆ

ಕಾರಿನ ಬುಕಿಂಗ್ ಜೂನ್ ತಿಂಗಳ ಆರಂಭದಲ್ಲೇ ಶುರುವಾಗಿತ್ತು. ಗ್ರಾಹಕರು ಇದೀಗ ಟಾಟಾ ಹ್ಯಾರಿಯರ್ ಹಾಗೂ ಜೀಪ್ ಕಂಪಾಸ್ ಬದಲು MG ಹೆಕ್ಟರ್ ಕಾರಿನತ್ತ ವಾಲುತ್ತಿದ್ದಾರೆ. ಕಾರಣ ಆಧುನಿಕ ತಂತ್ರಜ್ಞಾನ, ವಾಯ್ಸ್ ರೆಕಗ್ನೀಶನ್, ದೇಶದ ಮೊದಲ ಇಂಟರ್‌ನೆಟ್ ಕನೆಕ್ಟಡ್ ಫೀಚರ್ಸ್ ಸೇರಿದಂತೆ ಹಲವು ಸೌಲಭ್ಯ ಈ ಕಾರಿನಲ್ಲಿದೆ. ವಿಶೇಷ ಅಂದರೆ ಟಾಟಾ ಹ್ಯಾರಿಯರ್ ಹಾಗೂ ಜೀಪ್ ಕಂಪಾಸ್ ಕಾರಿಗಿಂತ ಬೆಲೆ ಕಡಿಮೆ ಇದೆ.

ಇದನ್ನೂ ಓದಿ: ಕೇವಲ 4.4 ಲಕ್ಷ ರೂಪಾಯಿಗೆ ರೆನಾಲ್ಟ್ ಟ್ರೈಬರ್ MPV ಕಾರು!

ಬುಕ್ ಮಾಡಿದ ಗ್ರಾಹಕರ ಕೈಗೆ ಕಾರು ತಲುಪಲು ಕನಿಷ್ಠ 4 ತಿಂಗಳ ಅವಶ್ಯಕತೆ ಇದೆ ಎಂದು MG ಮೋಟಾರ್ಸ್ ಸ್ಪಷ್ಟಪಡಿಸಿದೆ. ನೂತನ ಕಾರಿನ ನಿರ್ವಹಣೆ ವೆಚ್ಚ ಕೂಡ ಕಡಿಮೆ. ಪ್ರತಿ ಕಿ.ಮೀಗೆ 50 ಪೈಸೆ ಮಾತ್ರ ಎಂದು ಕಂಪನಿ ಹೇಳಿದೆ. ಹೀಗಾಗಿ ಗ್ರಾಹಕರು  MG ಹೆಕ್ಟರ್ ಕಾರು ಖರೀದಿಸಲು ಮುಗಿಬೀಳುತ್ತಿದ್ದಾರೆ.