ನವದೆಹಲಿ(ಜೂ.29): ರೆನಾಲ್ಟ್ ಇಂಡಿಯಾ ಈಗಾಗಲೇ ಟ್ರೈಬರ್ MPV ಕಾರನ್ನು ಅನಾವರಣ ಮಾಡಿದೆ. ಮುಂದಿನ ತಿಂಗಳು ಈ ಕಾರು ಬಿಡುಗಡೆಯಾಗಲಿದೆ. ರೆನಾಲ್ಟ್ ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆಯ ಕಾರು ಅನ್ನೋ ಸುಳಿವನ್ನು ರೆನಾಲ್ಟ್ ಈಗಾಲೇ ನೀಡಿತ್ತು. ಇದೀಗ ರೆನಾಲ್ಟ್ ಟ್ರೈಬರ್ ಕಾರಿನ ಬೆಲೆ ಬಹಿರಂಗವಾಗಿದೆ. ಟ್ರೈಬರ್ ಕಾರಿನ ಬೆಲೆ 4.4 ಲಕ್ಷ ರೂಪಾಯಿಂದ ಆರಂಭವಾಗಲಿದೆ.

ಇದನ್ನೂ ಓದಿ: PRESS, POLICE ಯಾವುದೇ ಸ್ಟಿಕ್ಕರ್ ಹಾಕಿದ್ರೆ ವಾಹನ ಸೀಝ್!

ರೆನಾಲ್ಟ್ ಟ್ರೈಬರ್ ಬೇಸ್ ವೇರಿಯೆಂಟ್ ಬೆಲೆ 4.4 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟಾಪ್ ವೇರಿಯೆಂಟ್ ಕಾರಿನ ಬೆಲೆ 5.8 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ರೆನಾಲ್ಡ್ ಲಾಡ್ಜಿ ಡೀಸೆಲ್ ಕಾರು ಸದ್ಯದಲ್ಲೇ ಸ್ಥಗಿತಗೊಳ್ಳುತ್ತಿದೆ. ಇದರ ಬದಲು ರೆನಾಲ್ಟ್ ಕಡಿಮೆ ಬೆಲೆಗೆ ಟ್ರೈಬರ್ ಬಿಡುಗಡೆ ಮಾಡುತ್ತಿದೆ. ಟ್ರೈಬರ್ ಪೆಟ್ರೋಲ್ ಕಾರಾಗಿದ್ದು, ಕ್ವಿಡ್ ಎಂಜಿನ್ ಹೊಂದಿದೆ.

ಇದನ್ನೂ ಓದಿ: ಹೊಸ ನಿಯಮ: ಆ್ಯಂಬುಲೆನ್ಸ್‌ಗೆ ಅಡ್ಡ ಬಂದರೆ 10 ಸಾವಿರ ರೂ. ದಂಡ!

ರೆನಾಲ್ಟ್ ಟ್ರೈಬರ್ 1 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 72 Bhp ಪವರ್ ಹಾಗೂ  96 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 5 ಸ್ಪೀಡ್ AMT(ಆಟೋಮ್ಯಾಟಿಕ್) ಟಾನ್ಸ್‌ಮಿಶನ್ ಹೊಂದಿದೆ. ನೂನತ ಕಾರು ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ.