ಕೊರೊನಾ ವೈರಸ್‌ನಿಂದ ಭಾರತದಲ್ಲಿ MG ಹೆಕ್ಟರ್ ಕಾರು ಮಾರಾಟ ಕುಸಿತ?

MG ಮೋಟಾರ್ಸ್ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಟಾಟಾ ಹ್ಯಾರಿಯರ್, ಜೀಪ್ ಕಂಪಾಸ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ MG ಹೆಕ್ಟರ್ ಕಾರು ಮಾರಾಟದಲ್ಲಿ ದಾಖಲೆ ಬರೆದಿತ್ತು. ಆದರೆ ಚೀನಾದಲ್ಲಿನ ಕೊರೊನಾ ವೈರಸ್‌ನಿಂದ ಭಾರತದಲ್ಲಿ ಹೆಕ್ಟರ್ ಕಾರು ಮಾರಾಟದಲ್ಲಿ ಕುಸಿತ ಕಂಡಿದೆ.

Mg hector India car production may affect due China Corona virus

ನವದೆಹಲಿ(ಫೆ.01): ಕಳೆದ ವರ್ಷ ಅನುಭವಿಸಿದ ಮಾರಾಟ ಕುಸಿತದಿಂದ ಭಾರತದ ಆಟೋಮೊಬೈಲ್ ಕ್ಷೇತ್ರ ಮೆಲ್ಲನೆ ಚೇತರಿಸಿಕೊಳ್ಳುತ್ತಿದೆ. ಎಲ್ಲಾ ಆಟೋಮೊಬೈಲ್ ಕಂಪನಿಗಳ ಮಾರಾಟ ಅಂಕಿ ಅಂಶ ಸಮಾಧಾನ ತರಿಸುತ್ತಿದೆ. MG ಮೋಟಾರ್ಸ್ ಕೂಡ ಹೊರತಾಗಿರಲಿಲ್ಲ. ಇದೀಗ ಚೀನಾದಲ್ಲಿನ ಕೊರೊನಾ ವೈರಸ್ ರೋಗಾಣುವಿನಿಂದ ಭಾರತದಲ್ಲಿನ ಮಾರಾಟಕ್ಕೆ ಹಿನ್ನಡೆಯಾಗಿದೆ.

ಇದನ್ನೂ ಓದಿ: MG ಹೆಕ್ಟರ್ 700 ಕಾರು ಮಾರಾಟ; ದೀಪಾವಳಿಗೆ ದಾಖಲೆ!

ಚೀನಾದ ಕೊರೊನಾ ವೈರಸ್‌ಗೂ ಭಾರತದಲ್ಲಿನ ಕಾರಿನ ಮಾರಾಟಕ್ಕೂ ಎಲ್ಲಿಯ ಸಂಬಂಧ ಅಂದುಕೊಂಡಿದ್ದೀರಾ? ಇಲ್ಲಿದೆ ಸಂಪೂರ್ಣ ವಿವರ.  MG ಹೆಕ್ಟರ್ ಕಾರು ಭಾರತದಲ್ಲಿ ಹೆಚ್ಚು ಯಶಸ್ಸು ಸಾಧಿಸಿದೆ.  ಚೀನಾ ಮಾಲೀಕತ್ವದ MG ಮೋಟಾರ್ಸ್ ಕಂಪನಿ ಚೀನಾದಲ್ಲಿ ಉತ್ಪಾದನೆ ಕಂಠಿತವಾಗಿದೆ. ಕೊರೊನಾ ವೈರಸ್‌ನಿಂದ ಉತ್ಪಾದನಾ ಘಟಕ ತಾತ್ಕಲಿಕ ಸ್ಥಗಿತಗೊಂಡಿದೆ.

ಇದನ್ನೂ ಓದಿ: MG ಹೆಕ್ಟರ್ SUV, 10 ಸಾವಿರ ಕಾರು ಬುಕ್!

ಇತ್ತ ಭಾರತಕ್ಕೆ ರಫ್ತು ಮಾಡುತ್ತಿದ್ದ ಬಿಡಿ ಭಾಗಗಳು ಸ್ಥಗಿತಗೊಂಡಿದೆ. ಕೊರೊನಾ ವೈರಸ್‌ನಿಂದ ಚೀನಾ ದೇಶ ಸಂಪೂರ್ಣ ಅಲ್ಲೋಲ ಕಲ್ಲೋಲವಾಗಿದೆ. ಹೀಗಾಗಿ ಭಾರತದ ಕಾರು ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ. ಉತ್ಪಾದನೆ ವೇಗ ಕುಂಠಿತವಾದ ಕಾರಣ ಕಾರು ಬುಕ್ ಮಾಡಿದವರು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರೊಚ್ಚಿಗೆದ್ದ ಗ್ರಾಹಕನಿಂದ ಕತ್ತೆ ವಾಹನ ಬೋರ್ಡ್; ಕೋರ್ಟ್ ಮೆಟ್ಟಿಲೇರಿದ MG !

ಉತ್ಪಾದನೆ ಕೊರತೆಯಿಂದ ಜನವರಿ ಅಂತ್ಯ ಹಾಗೂ ಫೆಬ್ರವರಿಯಲ್ಲಿನ ಮಾರಾಟದ ಮೇಲೂ ಹೊಡೆತ ಬೀಳುತ್ತಿದೆ. ಕಾಯುವಿಕೆ ಹೆಚ್ಚಾದಂತೆ ಗ್ರಾಹಕರು ಬುಕಿಂಗ್ ಕ್ಯಾನ್ಸಲ್ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. 

Latest Videos
Follow Us:
Download App:
  • android
  • ios