3ನೇ ಮಹಡಿಯಿಂದ ಕಳೆಗೆ ಬಿತ್ತು ಮರ್ಸಡೀಸ್ ಕಾರು-ಚಾಲಕ ಅಪಾಯದಿಂದ ಪಾರು!
ಫ್ಲೈಓವರ್ ಮೇಲಿಂದ ಕಾರು ಕೆಳಗೆ ಬಿದ್ದರೆ ಏನೂ ಉಳಿಯುವುದಿಲ್ಲ. ಹೀಗಿರುವಾಗ 3ನೇ ಮಹಡಿಯಿದ ಕಾರು ಕೆಳಗೆ ಬಿದ್ದರೆ ಪುಡಿ ಪುಡಿಯಾಗುವುದುದು ಖಚಿತ. ಆದರೆ ಇಲ್ಲಿ ಹಾಗಾಗಿಲ್ಲ. ಕಾರು ನೆಲಕ್ಕಪ್ಪಳಿಸಿದ ಮರುಕ್ಷಣವೇ ಚಾಲಕ ಹೊರಬಂದಿದ್ದಾನೆ.
ಕ್ಯಾಲಿಫೋರ್ನಿಯಾ(ಜ.07): ಜನರೆಲ್ಲಾ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ದಿಢೀರ್ ಭೂಕಂಪವಾದ ಅನುಭವ, ಕಟ್ಟಡಗಳು ಧರೆಗುರುಳಿದ ಶಬ್ಧ. ಇದನ್ನು ಕೇಳಿದ ಪಕ್ಕದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಜನರು ಓಡಿ ಹೊರಗೆ ಬಂದರು. ನೋಡಿದರೆ ಅಲ್ಲೊಂದು ಕಾರು ಪಲ್ಟಿಯಾಗಿ ಬಿದ್ದಿತ್ತು. ಅಲ್ಲಿನ ಜನಕ್ಕೆ ಏನಾಗುತ್ತಿದೆ ಅನ್ನೋದೇ ಅರ್ಥವಾಗಲಿಲ್ಲ.
ಇದನ್ನೂ ಓದಿ: ಭಾರತ್ ಬಂದ್ ಧಿಕ್ಕರಿಸಲು ಕರ್ನಾಟಕ ಬಿಜೆಪಿ ಕರೆ
ಲಾಸ್ ಎಂಜಲೀಸ್ ಸಮೀಪದಲ್ಲಿನ ಕಾರು ಪಾರ್ಕಿಂಗ್ ಕಟ್ಟದ 3ನೇ ಮಹಡಿಯಿಂದ ಮರ್ಸಡೀಸ್ ಬೆಂಝ್ G ಕ್ಲಾಸ್ ಕಾರು ನೇರವಾಗಿ ಕೆಳಗೆ ಬಿದ್ದಿತ್ತು. ಕಾರು ಪಾರ್ಕಿಂಗ್ ಮಾಡುತ್ತಿದ್ದ ವೇಳೆ ಕಾರು ಕಟ್ಟದ ಗಾಜಿಗೆ ಗುದ್ದಿ ನೇರವಾಗಿ ಕೆಳಕ್ಕೆ ಬಿದ್ದಿದ್ದು, ಕಾರಿನ ಟಾಪ್ ನೆಲಕ್ಕೆ ರಭಸದಿಂದ ಗುದ್ದಿದೆ. ಇತರ ಯಾವುದೇ ಕಾರಾಗಿದ್ದರೂ ಕಾರು ಮಾತ್ರವಲ್ಲ, ಒಳಗಿದ್ದ ಚಾಲಕನ ಗುರುತೇ ಸಿಗುತ್ತಿರಲಿಲ್ಲ. ಆದರೆ ಈ ಅಪಘಾತದಲ್ಲಿ ಚಾಲಕ ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾನೆ.
ಇದನ್ನೂ ಓದಿ: ನಟ ಸಿದ್ಧಾರ್ಥ್ ಮಲ್ಹೋತ್ರ ಖರೀದಿಸಿದ ರೇಂಜ್ ರೋವರ್ ಕಾರಿನ ವಿಶೇಷತೆ ಏನು?
ಕಾರು ಪಲ್ಟಿಯಾಗಿ ನೆಲಕ್ಕಪ್ಪಳಿಸಿದ ಮರುಕ್ಷಣದಲ್ಲೇ ಚಾಲಕ ಕಾರಿನ ಒಳಗಿನಿಂದ ಎದ್ದು ಹೊರಬಂದಿದ್ದಾನೆ. ಬಳಿಕ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅಪಾಯ ಸಂಭವಿಸಿಲ್ಲ. ಇದಕ್ಕೆ ಮುಖ್ಯ ಕಾರಣ ನೆಲಕ್ಕಪ್ಪಳಿಸಿದ ಕಾರು ಮರ್ಸಡೀಸ್ ಬೆಂಝ್ G ಕ್ಲಾಸ್ ಕಾರು. ಇದರ ಬೆಲೆ 2.19 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).
ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್-ಶೀಘ್ರದಲ್ಲೇ ಹೊಸ ನಿಯಮ!
ಈ ಕಾರಿನಲ್ಲಿ ಮುಂಭಾಗದಿಂದ ಆಗೋ ಅಪಘಾತಗಳಿಗೆ ಫ್ರಂಟ್ ಏರ್‌ಬ್ಯಾಗ್, ಹಾಗೂ ಎರಡೂ ಬದಿಗಳಿಂದ ಆಗೋ ಅಪಘಾತಕ್ಕೆ ಸೈಡ್ ಏರ್‌ಬ್ಯಾಗ್ ಹಾಗೂ ಕಾರು ಪಲ್ಟಿಯಾದಾಗ ಅಪಾಯದ ತೀವ್ರತೆ ತಡೆಯಲು ಒವರ್ ಹೆಡ್ ಏರ್‌ಬ್ಯಾಗ್ ಸೌಲಭ್ಯವಿದೆ. ಮೊಣಕಾಲಿನ ಸುರಕ್ಷತೆಗೂ ಏರ್‌ಬ್ಯಾಗ್ ಸೌಲಭ್ಯವಿದೆ. ತಲೆಗೆ ಯಾವುದೇ ಏಟಾಗದಂತೆ ಆ್ಯಂಟಿ ವಿಪ್ಲಾಶ್ ಕೂಡ ಲಭ್ಯವಿದೆ. ಹೀಗಾಗಿಯೇ ಕಾರು 3 ಮಹಡಿ ಕಟ್ಟದಿಂದ ಕೆಳಗೆ ಬಿದ್ದರೂ ಚಾಲಕ ಅಪಾಯದಿಂದ ಪಾರಾಗಿದ್ದಾರೆ.