Asianet Suvarna News Asianet Suvarna News

ಭಾರತ್ ಬಂದ್ ಧಿಕ್ಕರಿಸಲು ಕರ್ನಾಟಕ ಬಿಜೆಪಿ ಕರೆ

ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿ ಯು) ಬಂದ್ ಕರೆ ನೀಡಿದೆ. ಜನವರಿ 8 ಹಾಗೂ 9 ರಂದು ಎರಡು ದಿನಗಳ ಕಾಲ ಬಂದ್‌ಗೆ ಕರೆನೀಡಲಾಗಿದೆ. ಆದರೆ ರಾಜ್ಯ ಬಿಜೆಪಿ ಈ ಬಂದ್‌ಗೆ ಧಿಕ್ಕಾರ ಹೇಳಿದೆ.

BJP Requests Karnataka People Should Reject Bharat Bandh
Author
Bengaluru, First Published Jan 7, 2019, 9:20 PM IST

ಬೆಂಗಳೂರು[ಜ.07] ಕಾರ್ಮಿಕ ಸಂಘಟನೆಗಳನ್ನು ದಿಕ್ಕು ತಪ್ಪಿಸುವ ಉದ್ದೇಶಕ್ಕೆ ಕರೆ ನೀಡಿರುವ ಬಂದ್‌ಗೆ ಯಾವುದೆ ಅರ್ಥವಿಲ್ಲ. ವಾಸ್ತವಿಕತೆಯಿಂದ ದೂರ ಇರುವ ಈ ಬಂದ್‌ನ್ನು ಧಿಕ್ಕರಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮನವಿ ಮಾಡಿದ್ದಾರೆ.

ನಿರುದ್ಯೋಗ, ಬೆಲೆ  ಏರಿಕೆ ಮತ್ತು ಕೇಂದ್ರ ಸರಕಾರದ ಆರ್ಥಿಕ ನೀತಿ ವಿರೋಧಿಸಿ ಕರೆನೀಡಿರುವ ಬಂದ್‌ಗೆ ಅರ್ಥವಿಲ್ಲ. ಕಳೆದ 4 ವರ್ಷದಲ್ಲಿ ಬೆಲೆ ನಿಯಂತ್ರಣದಲ್ಲಿದೆ. ಕಪೋ ಕಲ್ಪಿತ ಅಂಕಿ ಅಂಶಗಳ ಆಧಾರದಲ್ಲಿ ಬಂದ್‌ಗೆ ಕರೆ  ನೀಡಿರುವುದು ಖಂಡನೀಯ ಎಂದಿದ್ದಾರೆ.

ಜನವರಿ 8 - 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರಿ ಉದ್ದಿಮೆಗಳ ಖಾಸಗೀಕರಣ 15 ವರ್ಷಗಳಿಂದ ನಡೆಯುತ್ತಿರುವ ಪ್ರಕ್ರಿಯೆ. ಇದನ್ನು ಮೋದಿ ಸರಕಾರ ಕೈಗೊಂಡಿಲ್ಲ.ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿರಿಸಿ ರಾಜಕೀಯ ಲಾಭಕ್ಕಾಗಿ ಹಮ್ಮಿಕೊಂಡಿರುವ ಬಂದ್ ಧಿಕ್ಕರಿಸಬೇಕು ಎಂದು ಬಿಜೆಪಿ ಮನವಿ ಮಾಡಿದೆ.

ನಾಳೆ ಭಾರತ್ ಬಂದ್ : ಶಾಲಾ-ಕಾಲೇಜುಗಳಿಗೆ ಇರುತ್ತಾ ರಜೆ..?

Follow Us:
Download App:
  • android
  • ios