ಕೊಚ್ಚಿ(ಫೆ.01): ಕಾರು, ಜೀಪ್‌ ಬೈಕ್‌ಗಳನ್ನ ಖರೀದಿಸಿ ಅದನ್ನ ಮಾಡಿಫೈ ಮಾಡಿ ಸ್ಪೋರ್ಟ್ ಲುಕ್, ಅಗ್ರೆಸ್ಸಿವ್ ಲುಕ್ ನೀಡೋದು ಕಾಮನ್. ಹೀಗೆ ಮಾಡಿಫೈ ಮಾಡುವಾಗ ವಾಹನದ ಹೆಡ್‌ಲೈಟ್ ಕೂಡ ಬದಲಾಯಿಸುತ್ತಾರೆ. ಕಾರಿನ ಲುಕ್‌ಗೆ ಅನುಗುಣವಾಗಿ LED ಹೆಡ್‌ಲೈಡ್, ಸೇರಿದಂತೆ ಬಣ್ಣಬಣ್ಣದ ಹೆಡ್‌ಲೈಟ್ ಅಳವಡಿಸುತ್ತಾರೆ. ಇದೀಗ  ಹೆಚ್ಚು ಪ್ರಕಾಶಮಾನವಾದ(ಬ್ರೈಟ್) ಹೆಡ್ ಲೈಟ್ ಅಥವಾ ಹೆಡ್‌ಲೈಟ್ ಮಾಡಿಫಿಕೇಶನ್ ಮಾಡಿದರೆ ಭಾರಿ ದಂಡ ತೆರೆಬೇಕಾಗುತ್ತೆ. 

ಇದನ್ನೂ ಓದಿ: ಡ್ರೈವ್ ಮಾಡುವಾಗ ಧೂಮಪಾನ - ಮೊಬೈಲ್ ಫೋನ್‌ನಷ್ಟೇ ಅಪಾಯಕಾರಿ!

ಹೈ ಪವರ್ ಲೈಟ್‌ಗಳಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಹೀಗಾಗಿ ಇದನ್ನ ತಡೆಗಟ್ಟಲು  ಕೇರಳ ಹೊಸ ನಿಯಮ ಜಾರಿಗೆ ತರುತ್ತಿದೆ. ಕೇರಳದ ಮೋಟರು ವಾಹನ ವಿಭಾಗ ಇದೀಗ ಹೈವರ್ ಹೆಡ್‌ಲೈಟ್ ಅಳವಡಿಸಿದವರ ವಾಹನ RC ಹಾಗೂ ಲೈಸೆನ್ಸ್ ಅಮಾನತು ಮಾಡಲು ಆದೇಶಿಸಲಾಗಿದೆ.  ಜನವರಿ 31ರೊಳಗೆ ಹೈವರ್ ಹೆಡ್‌ಲೈಟ್‌ ತೆಗೆದುಹಾಕಬೇಕು. ಯಾಕೆಂದರೆ ಈ ತಿಂಗಳ ಆರಂಭದಿಂದ(ಫೆಬವ್ರರಿ 1) ನೂತನ ನಿಯಮ ಜಾರಿಯಾಗಲಿದೆ. 

ಇದನ್ನೂ ಓದಿ: ಮಾರುತಿ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ -ಬೆಲೆ 5.45 ಲಕ್ಷ!

ನೂತನ ನಿಮಯದ ಕುರಿತು ತಿಳಿ ಹೇಳಲಾಗಿದೆ. ಕೇರಳದ ಎಲ್ಲಾ ರೀಜನಲ್ ಟ್ರಾನ್ಸ್‌ಪೋರ್ಟ್ ಆಫೀಸರ್‌ಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ. ವಾಹನ ಮಾಲೀಕರಿಗೆ ಸೂಚಿಸಲಾಗಿದೆ. ಜಾಹೀರಾತು, ಕರಪತ್ರ ಸೇರಿದಂತೆ ಎಲ್ಲಾ ರೀತಿಯಲ್ಲಿ ಅರಿವು ಮೂಡಿಸಲಾಗಿದೆ. ಇಷ್ಟೇ ಅಲ್ಲ ಈಗಾಗಲೇ ಹೈವರ್ ಅಳವಡಿಸಿದ ಬಹುತೇಕರಿಗೆ ನೊಟೀಸ್ ನೀಡಲಾಗಿದೆ. ಒಂದು ವೇಳೆ ಫೆಬ್ರವರಿ 1 ರಂದು ನೊಟೀಸ್ ನೀಡಿದವರು ನಿಯಮ ಪಾಲನೆ ಮಾಡದಿದ್ದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಟ್ರಾಫಿಕ್ ಕಮಿಶನರ್ ಕೆ ಪದ್ಮಕುಮಾರ್ ಹೇಳಿದ್ದಾರೆ.