ನವದೆಹಲಿ(ಏ.01): ಭಾರತದಲ್ಲಿ SUV ಕಾರಿಗೆ ಬೇಡಿಕೆ ಹೆಚ್ಚಾಗಿದೆ. ಹ್ಯಾಚ್‌ಬ್ಯಾಕ್, ಸೆಡಾನ್ ಕಾರಿಗಿಂತಲೂ ಗ್ರಾಹತರು SUV ಕಾರನ್ನು ಹೆಚ್ಚು ಇಷ್ಟಪಡುತ್ತಾರೆ. ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ ವಾಹನವಿದು. ಹೀಗಾಗಿಯೇ ಇತ್ತೀಚೆಗೆ ಹೊಸ ಹೊಸ SUV ಕಾರುಗಳು ಬಿಡುಗಡೆಯಾಗುತ್ತಿದೆ. ಮಾರುತಿ ಬ್ರೆಜಾ ಕಾರು ಭಾರತದಲ್ಲಿ ದಾಖಲೆಯ ಮಾರಾಟ ಕಂಡಿದೆ. ಇದೀಗ ಬ್ರೆಜಾಗೆ ಪ್ರತಿಸ್ಪರ್ಧಿಯಾಗಿ ಹಲವು ಕಾರುಗಳು ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಮತ್ತೊಂದು ಪೈಪೋಟಿ ಎದರಾಗುತ್ತಿದೆ. ಹ್ಯುಂಡೈ ನೂತನ ವೆನ್ಯೂ SUV ಕಾರು ಬಿಡುಗಡೆಗೊಳ್ಳುತ್ತಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ ಅಂಬಾಸಿಡರ್ ಕಾರು!

ಹ್ಯುಂಡೈ ಸಂಸ್ಥೆಯ ನೂತನ ವೆನ್ಯೂ ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆಗೂ ಮುನ್ನ ಕಾರಿನ ಫೋಟೋಗಳು ಲೀಕ್ ಆಗಿದೆ. ಕ್ರೆಟಾ ವಿನ್ಯಾಸದಲ್ಲಿರುವ ಈ ಕಾರು ಬ್ರೆಜಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರ XUV300 ಕಾರಿಗೆ ತೀವ್ರ ಪೈಪೋಟಿ ನೀಡಲಿದೆ. 

ಇದನ್ನೂ ಓದಿ: ಮಹೀಂದ್ರ XUV300 ಎಲೆಕ್ಟ್ರಿಕ್- ಒಂದು ಚಾರ್ಜ್‌ಗೆ 500 ಕಿ.ಮಿ ಮೈಲೇಜ್!

1.4 ಲೀಟರ್ ಪೆಟ್ರೋಲ್ ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಕಾರುಗಳು ಲಭ್ಯವಿದೆ. ಇನ್ನು 1.0 ಲೀಟರ್ ಟರ್ಬೋಚಾರ್ಜಡ್ ಪೆಟ್ರೋಲ್ ಎಂಜಿನ್ ಕೂಡ ಬಿಡುಗಡೆಯಾಗಲಿದೆ.  ನೂತನ ಹ್ಯುಂಡೈ ವೆನ್ಯೂ ಕಾರಿನ ಬೆಲೆ 8 ರಿಂದ 12 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಮೂಲಕ ಇತರ SUV ಕಾರುಗಳ ಬೆಲೆಯಲ್ಲೂ ಪೈಪೋಟಿ ನೀಡಲಿದೆ.