ಬೆಂಗಳೂರು (ಮಾ.31): ಮಹೀಂದ್ರ ಕಂಪನಿ ಈಗಾಗಲೇ ಮಾರುತಿ ಬ್ರಿಜಾ, ಟಾಟಾ ನೆಕ್ಸಾನ್ ಫೋರ್ಡ್ ಇಕೋಸ್ಪೋರ್ಟ್ ಪ್ರತಿಸ್ಪರ್ಧಿ  XUV300 ಕಾರು ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಇದೇ  XUV300 ಕಾರು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗುತ್ತಿದೆ. ಸದ್ಯ ಎಲೆಕ್ಟ್ರಿಕ್ ಕಾರಿನ ರೋಡ್ ಟೆಸ್ಟಿಂಗ್ ನಡೆಯುತ್ತಿದೆ. ಬೆಂಗಳೂರಿನ ಮಹೀಂದ್ರ ಎಲೆಕ್ಟ್ರಿಕ್ ಘಟಕದಲ್ಲಿ ನೂತನ ಕಾರು ಉತ್ಪಾದನೆಯಾಗಲಿದೆ.

ಇದನ್ನೂ ಓದಿ: ನಿಷೇಧ ಹಿಂಪಡೆದ ಬೆನ್ನಲ್ಲೇ ಗ್ರಾಹಕರಿಗೆ ಹೊಸ ಕೊಡುಗೆ ನೀಡಿದ OLA!

ವಿಶೇಷ ಅಂದರೆ ಈ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 400-500 ಕಿ.ಮೀ ಪ್ರಯಾಣ ರೇಂಜ್ ನೀಡಲಿದೆ. ಮಹೀಂದ್ರ XUV300 ಕಾರಿನಲ್ಲಿ 2 ವೇರಿಯೆಂಟ್ ಲಭ್ಯವಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 200 ಕಿ.ಮೀ ಮೈಲೇಜ್ ರೇಂಜ್ ಹಾಗೂ 400 ರಿಂದ 500 ಕಿ.ಮೀ ರೇಂಜ್ ನೀಡುವ 2 ಕಾರುಗಳು ಲಭ್ಯವಿದೆ. ಈ ಕಾರು 2022ರಲ್ಲಿ ಬಿಡುಗಡೆಯಾಗಲಿದೆ ಎಂದು ಮಹೀಂದ್ರ ಹೇಳಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ದಾಟ್ಸನ್ ರೆಡಿ ಗೋ ಕಾರು-ಕೇವಲ 2.75 ಲಕ್ಷ ರೂ!

ಈ ವರ್ಷ ಮಹೀಂದ್ರ XUV100 ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ. ಮಹೀಂದ್ರ ಕಂಪನಿಯ ವೆರಿಟೋ ಸೆಡಾನ್ ಕಾರು ಈಗಾಗಲೇ ವೆರಿಟೋ ಎಲೆಕ್ಟ್ರಿಕ್ ಕಾರಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. 2022ರಲ್ಲಿ ಮಹೀಂದ್ರ ಬಹುತೇಕ ಕಾರುಗಳು ಎಲೆಕ್ಟ್ರಿಕ್  ಕಾರಾಗಿ ಮಾರುಕಟ್ಟೆ ಪ್ರವೇಶಿಸಲಿದೆ.